Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮೈಸೂರು ಇನ್ಫೋಸಿಸ್ ಆವರಣದಲ್ಲಿ ಚಿರತೆ ಪತ್ತೆಗೆ ಡ್ರೋನ್ ಕ್ಯಾಮೆರಾ ಬಳಕೆ: ಈಶ್ವರ್ ಖಂಡ್ರೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಮೈಸೂರು ಇನ್ಫೋಸಿಸ್ ಆವರಣದಲ್ಲಿ ಚಿರತೆ ಪತ್ತೆಗೆ ಡ್ರೋನ್ ಕ್ಯಾಮೆರಾ ಬಳಕೆ: ಈಶ್ವರ್ ಖಂಡ್ರೆ

Bengaluru City

ಮೈಸೂರು ಇನ್ಫೋಸಿಸ್ ಆವರಣದಲ್ಲಿ ಚಿರತೆ ಪತ್ತೆಗೆ ಡ್ರೋನ್ ಕ್ಯಾಮೆರಾ ಬಳಕೆ: ಈಶ್ವರ್ ಖಂಡ್ರೆ

Public TV
Last updated: December 31, 2024 5:05 pm
Public TV
Share
1 Min Read
eshwar khandre
SHARE

ಬೆಂಗಳೂರು: ಮೈಸೂರು ನಗರದ ಇನ್ಫೋಸಿಸ್ (Infosys) ಆವರಣದಲ್ಲಿ ಇಂದು ನಸುಕಿನ ಜಾವ 4:30ರ ಸುಮಾರಿನಲ್ಲಿ ಚಿರತೆ (Leopard) ಕಾಣಿಸಿಕೊಂಡಿದ್ದು, ಇದರ ಸೆರೆಗೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ‌ (Eshwar Khandre) ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಷಯ ತಿಳಿದ ಕೂಡಲೇ ಚಿರತೆ ಸೆರೆ ಹಿಡಿಯಲು ಚಿರತೆ ಕಾರ್ಯಪಡೆ ತಂಡವನ್ನು ಕಳುಹಿಸಲಾಗಿದೆ. ತಂಡದಲ್ಲಿ ಪಶುವೈದ್ಯರು, ಚಿರತೆ ಸೆರೆ ತರಬೇತಿ ಪಡೆದ 40 ಸಿಬ್ಬಂದಿ ಇದ್ದಾರೆ. ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿಗಳೂ ಸ್ಥಳದಲ್ಲಿದ್ದು, ಕಾರ್ಯಾಚರಣೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಹೊಸ ವರ್ಷ ಆಚರಣೆಗೆ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭಕ್ತರ ದಂಡು

ಸಿಸಿ ಟಿವಿಯಲ್ಲಿ ಚಿರತೆ ಸಂಚಾರದ ದೃಶ್ಯಗಳು ಸೆರೆಯಾಗಿದೆ. ಇಂದು ಮಧ್ಯಾಹ್ನ 12 ಗಂಟೆಯ ಸುಮಾರಿನಲ್ಲಿ ಚಿರತೆ ಇರುವಿಕೆ ಖಚಿತವಾದ ಹಿನ್ನೆಲೆಯಲ್ಲಿ ತುರ್ತು ಕಾರ್ಯಾಚರಣೆಗೆ ಸೂಚನೆ ನೀಡಲಾಗಿದೆ. ಇನ್ಫೋಸಿಸ್ ತನ್ನ ಉದ್ಯೋಗಿಗಳಿಗೆ ಮನೆಯಿಂದಲೇ ಕಾರ್ಯ ನಿರ್ವಹಿಸಲು ಅವಕಾಶ ನೀಡಿದ್ದು, ಆತಂಕ ಪಡುವ ಅಗತ್ಯವಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿ ಬಲೆ, ಅರವಳಿಕೆ ಔಷಧದೊಂದಿಗೆ ಸಜ್ಜಾಗಿದ್ದಾರೆ. ಇನ್ಫೋಸಿಸ್ ಆವರಣ ಸುಮಾರು 350 ಎಕರೆಯಷ್ಟಿದ್ದು, ಕೆಲವು ಭಾಗ ಕಾಡಿನಂತೆಯೇ ಇದೆ. ಇಲ್ಲಿ ಕಾರ್ಯಾಚರಣೆ ಸಾಹಸವೇ ಸರಿ. ಆದರೂ ಕಾರ್ಯಾಚರಣೆ ನಡೆಯುತ್ತಿದೆ ಎಂದರು. ಇದನ್ನೂ ಓದಿ: ಅಮಿತ್ ಶಾ ವಿರುದ್ಧ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಿ.. ಸಚಿವ ಸಂಪುಟದಿಂದ ಕೈಬಿಡಿ: ಜ್ಞಾನಪ್ರಕಾಶ್ ಸ್ವಾಮೀಜಿ ಆಗ್ರಹ

ಚಿರತೆ ಸಮೀಪದ ವಸತಿ ಪ್ರದೇಶಗಳಿಗೆ ನುಗ್ಗದಂತೆ ಸಹ ಕ್ರಮ ವಹಿಸಲಾಗಿದೆ. ಚಿರತೆ ಪತ್ತೆಗೆ ಥರ್ಮಲ್ ಕ್ಯಾಮೆರಾ ಅಳವಡಿಸಿದ ಡ್ರೋನ್ ಸಹ ಬಳಸಲಾಗುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿ ಶೀಘ್ರವೇ ಚಿರತೆ ಸೆರೆ ಹಿಡಿದು ಜನರ ಆತಂಕ ದೂರ ಮಾಡುತ್ತಾರೆ ಎಂಬ ವಿಶ್ವಾಸವನ್ನು ಈಶ್ವರ ಖಂಡ್ರೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಡಿಕೆಶಿಗೆ ಹೊಸ ಲೋಕದಲ್ಲಿ ಶೋಕ ಕಾಣಬಹುದು – ವಿದೇಶ ಪ್ರವಾಸಕ್ಕೆ ಛಲವಾದಿ ವ್ಯಂಗ್ಯ

TAGGED:bengalurueshwar khandreinfosysleopardmysuruಇನ್ಫೋಸಿಸ್ಈಶ್ವರ್ ಖಂಡ್ರೆಚಿರತೆಬೆಂಗಳೂರುಮೈಸೂರು
Share This Article
Facebook Whatsapp Whatsapp Telegram

Cinema news

Duniya Vijay 1
ಝಾಂಬಿ ಡ್ರಗ್ಸ್ ಕೇಸಲ್ಲಿ ನಟ ದುನಿಯಾ ವಿಜಯ್‌ಗೆ ಸಂಕಷ್ಟ – ಡಿಲೀಟ್ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪೊಲೀಸರ ಪತ್ರ
Bengaluru City Cinema Districts Karnataka Latest Sandalwood Top Stories
TVK Vijay
ಅಫಿಡವಿಟ್‌ನಲ್ಲಿ 105 ಕೋಟಿ ವ್ಯತ್ಯಾಸ – ನಾಮಪತ್ರ ತಿರಸ್ಕಾರ ಆತಂಕದಲ್ಲಿ ವಿಜಯ್‌
Cinema Court Latest Main Post National
Maharashtra Man Arrest
ಮಹಾರಾಷ್ಟ್ರ ‘ಲವ್ ಟ್ರ್ಯಾಪ್’ ಸಂತ್ರಸ್ತೆ ಆತ್ಮಹತ್ಯೆಗೆ ಯತ್ನ – ಮತ್ತೋರ್ವ ಆರೋಪಿ ಅಂದರ್
Cinema Latest National Top Stories
Atlee
ಹೆಣ್ಣು ಮಗು ಜನಿಸಿದ ಸಂಭ್ರಮದಲ್ಲಿ ನಿರ್ದೇಶಕ ಅಟ್ಲೀ ದಂಪತಿ
Cinema Latest Top Stories

You Might Also Like

Pakistan PM Shehbaz Sharif gets trolled over post on US Iran ceasefire Donald Trump
Latest

Ceasefire | ಪಾಕ್‌ ಮನವಿ ಮೇರೆಗೆ ಅಮೆರಿಕ -‌ ಇರಾನ್ ಕದನ ವಿರಾಮ ವಿಸ್ತರಣೆ: ಟ್ರಂಪ್‌

Public TV
By Public TV
3 minutes ago
Modi 2
Latest

One Year Of Pahalgam Attack | ಭಯೋತ್ಪಾದನೆಗೆ ಭಾರತ ಎಂದಿಗೂ ತಲೆಬಾಗುವುದಿಲ್ಲ: ಪ್ರಧಾನಿ ಮೋದಿ

Public TV
By Public TV
30 minutes ago
Bharath Bhushan Pahalagam Attack
Bengaluru City

ಪಹಲ್ಗಾಮ್ ದಾಳಿಗೆ ಒಂದು ವರ್ಷ – ಭರತ್ ಭೂಷಣ್ ನೆನೆದು ಪತ್ನಿ, ಪೋಷಕರು ಕಣ್ಣೀರು

Public TV
By Public TV
38 minutes ago
Baisaran Valley 2
Latest

ಪಹಲ್ಗಾಮ್‌ ನರಮೇಧ ನಡೆದ ಬೈಸರನ್‌ ಕಣಿವೆಯನ್ನ ʻಮಿನಿ ಸ್ವಿಟ್ಜರ್ಲೆಂಡ್ʼ ಅನ್ನೋದೇಕೆ? ಹಿಂದೂಗಳಿಗೆ ಏಕೆ ವಿಶೇಷ?

Public TV
By Public TV
49 minutes ago
pahalgam Terror 4
Latest

20 ನಿಮಿಷಗಳಲ್ಲೇ ನರಮೇಧ ನಡೆದಿದ್ದು ಹೇಗೆ? – ಈಗಲೂ ಕಣ್ಣಿಗೆ ಕಟ್ಟಿದಂತಿದೆ ಬೀಭತ್ಸ ದೃಶ್ಯ!

Public TV
By Public TV
60 minutes ago
Nelamangala Lorry Accident
Bengaluru City

ಪಂಚರ್ ಆಗಿ ನಿಂತಿದ್ದ ಲಾರಿಗೆ ಮತ್ತೊಂದು ಲಾರಿ ಡಿಕ್ಕಿ – ಚಾಲಕನ ಎರಡೂ ಕಾಲುಗಳು ಕಟ್

Public TV
By Public TV
1 hour ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?