ಬೆಂಗಳೂರು: ಇಂದಿನಿಂದ ರಾಜ್ಯಾದ್ಯಂತ (Karnataka) ಗಂಟೆಗೆ 130 ಕಿ.ಮೀ ವೇಗಕ್ಕಿಂತ ಹೆಚ್ಚು ವೇಗದಲ್ಲಿ ವಾಹನ ಚಲಾಯಿಸಿದರೆ ಮಾಲೀಕರ ಮೇಲೆ ಪ್ರಕರಣ (FIR) ದಾಖಲಾಗಲಿದೆ.
ಪ್ರಕರಣ ದಾಖಲಾದ ಬಳಿಕ 2 ಸಾವಿರ ರೂ. ದಂಡ ಮತ್ತು ಗರಿಷ್ಠ 6 ತಿಂಗಳು ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಅಷ್ಟೇ ಅಲ್ಲದೇ ಡ್ರೈವಿಂಗ್ ಲೈಸೆನ್ಸ್ (Driving Licence) ರದ್ದಿಗೂ ಕೂಡ ಸರ್ಕಾರಿ ಪ್ರಾದೇಶಿಕ ಸಾರಿಗೆ ಕೇಂದ್ರಕ್ಕೆ (RTO) ಪೊಲೀಸರು ಪತ್ರ ಬರೆಯಲಿದ್ದಾರೆ.
Advertisement
ಈಗಾಗಲೇ ರಾಜ್ಯದ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ (National Highway) ಸ್ಪಾಟ್ ಸ್ಪೀಡ್ ಮತ್ತು ಸೆಕ್ಷನ್ ಸ್ಪೀಡ್ ಎಐ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇವುಗಳು ಸೆರೆ ಹಿಡಿದ ಚಿತ್ರಗಳ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಇದನ್ನೂ ಓದಿ: ನ್ಯಾಯಾಂಗ ಬಂಧನ ಇಂದು ಅಂತ್ಯ- ಮತ್ತೆ ದರ್ಶನ್ ಜೈಲಿಗೆ ಕಳುಹಿಸಲು ರಿಮ್ಯಾಂಡ್ ಕಾಪಿ ಸಿದ್ಧತೆ
Advertisement
Advertisement
ಯಾಕೆ ಈ ಕ್ರಮ?
ಮೈಸೂರು -ಬೆಂಗಳೂರು ಎಕ್ಸ್‌ಪ್ರೆಸ್‌ವೇಯಲ್ಲಿ (Bengaluru Mysuru Expressway) ಶೇ.90 ರಷ್ಟು ಅಪಘಾತಗಳು ಅತೀ ವೇಗದಿಂದ ಪ್ರಯಾಣದಿಂದ ಆಗುತ್ತಿತ್ತು. ನಂತರ ಎಐ ಕ್ಯಾಮೆರಾ ಅಳವಡಿಸಿದ ನಂತರ ಅಪಘಾತಗಳು ಭಾರೀ ಇಳಿಕೆಯಾಗಿತ್ತು.
Advertisement
ಕೆಲ ದಿನಗಳ ಹಿಂದೆಯಷ್ಟೇ ನೈಸ್ ರಸ್ತೆಯಲ್ಲಿ ಸ್ಕಾರ್ಪಿಯೋ ಕಾರೊಂದು 160 Kmph ವೇಗದಲ್ಲಿ ಚಲಾಯಿಸಿ ಅಪಘಾತ ವಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಹೀಗಾಗಿ ಅತಿ ವೇಗಕ್ಕೆ ಕಡಿವಾಣ ಹಾಕಲು ಈ ಕ್ರಮವನ್ನು ಜಾರಿ ಮಾಡಲಾಗಿದೆ. ಇದನ್ನೂ ಓದಿ: Wayanad Landslide | ದಯವಿಟ್ಟು ಅಳಿಯನ ಮೃತ ದೇಹ ಹುಡುಕಿ, ಕೊನೆ ಬಾರಿ ನೋಡ್ತಿವಿ!
Over speeding causes 90% of fatal accidents
On Bangalore-Mysore Highway yesterday 155 persons sped at more than 130 Kmph
Recording Spot & Sectional Speed both
From 1st Aug FIR to be registered for Vehicles driving above 130 Kmph anywhere in Karnataka,for rash & dangerous driving pic.twitter.com/yg7t7j8RrT
— alok kumar (@alokkumar6994) July 26, 2024
ಇಲ್ಲಿಯವರೆಗೆ ನಿಗದಿ ಪಡಿಸಿದ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸಿದರೆ ಕೇವಲ ದಂಡ ವಿಧಿಸಲಾಗುತ್ತಿತ್ತು. ಆದರೆ ಆಗಸ್ಟ್ 1 ರಿಂದ ದಂಡದ ಜೊತೆ ಪ್ರಕರಣ ಸಹ ದಾಖಲಿಸಲಾಗುವುದು ಎಂದು ಅಲೋಕ್ ಕುಮಾರ್ ಎಕ್ಸ್‌ನಲ್ಲಿ ತಿಳಿಸಿದ್ದರು.
ಏನಿದು ಎಐ ಕ್ಯಾಮೆರಾ ತಂತ್ರಜ್ಞಾನ?
ಎಕ್ಸ್‌ಪ್ರೆಸ್‌ವೇಯಲ್ಲಿ ವೇಗ ನಿಯಂತ್ರಣಕ್ಕೆ ಪೊಲೀಸರು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (Artificial Intelligence) ಮೊರೆ ಹೊಗಿದ್ದು ಎಐ ಕ್ಯಾಮೆರಾ ಅಳವಡಿಕೆ ಮಾಡಿದ್ದಾರೆ. ರಾಜ್ಯ ರಸ್ತೆ ಸುರಕ್ಷತಾ ಎಡಿಜಿಪಿ ಅಲೋಕ್ ಕುಮಾರ್ (Alok Kumar) ಆದೇಶದ ಮೇರೆಗೆ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವ (Automatic Number Plate Recognition – ANPR) ಕ್ಯಾಮೆರಾವನ್ನು ಅಳವಡಿಕೆ ಮಾಡಲಾಗಿದೆ. ವಾಹನದ ನಂಬರ್‌ನಿಂದ ಆರ್‌ಟಿಒ ಸಂಪರ್ಕ ಪಡೆದು ಮೊಬೈಲಿಗೆ ದಂಡ ಪಾವತಿಸುವಂತೆ ನೋಟಿಸ್ ಬರುತ್ತದೆ.