ಚಾಲಕರ ಮುಷ್ಕರ – ರಾತ್ರಿಯಿಡೀ ನಡೆದುಕೊಂಡೇ ಹೋಗಿ ವಧು ಮನೆ ಸೇರಿದ ವರನ ಕುಟುಂಬ

Public TV
1 Min Read
Odisha Driver strike Marriage Groom

ಭುವನೇಶ್ವರ: ಚಾಲಕರ ಮುಷ್ಕರದ (Driver Strike) ಹಿನ್ನೆಲೆ ವಾಹನದ ವ್ಯವಸ್ಥೆ ಮಾಡಲಾಗದೇ ಮದುವೆ ದಿಬ್ಬಣವೊಂದು ರಾತ್ರಿಯಿಡೀ ಬರೋಬ್ಬರಿ 28 ಕಿ.ಮೀ ನಡೆದುಕೊಂಡೇ ಹೋಗಿ ವಧು (Bride) ಮನೆ ಸೇರಿರುವ ಘಟನೆ ಒಡಿಶಾದ (Odisha) ರಾಯಗಢ ಜಿಲ್ಲೆಯಲ್ಲಿ ನಡೆದಿದೆ.

ವರದಿಗಳ ಪ್ರಕಾರ, ಕಲ್ಯಾಣಸಿಂಗ್‌ಪುರ ಬ್ಲಾಕ್‌ನ ಸುನಖಂಡಿ ಪಂಚಾಯಿತಿಯಿಂದ ವರ ಸೇರಿದಂತೆ ಇಡೀ ಮದುವೆ ದಿಬ್ಬಣ ಗುರುವಾರ ರಾತ್ರಿಯಿಡೀ ನಡೆದುಕೊಂಡೇ ಹೋಗಿ ದಿನಳಪಾಡು ಗ್ರಾಮಕ್ಕೆ ತಲುಪಿದೆ. ಇದಾದ ಬಳಿಕ ಶುಕ್ರವಾರ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.

GROOM

 

ವರ (Groom), ಕೆಲ ಮಹಿಳೆಯರು ಹಾಗೂ ಅವರ ಕುಟುಂಬದ ಸದಸ್ಯರು ರಾತ್ರಿಯಿಡೀ ನಡೆದುಕೊಂಡು ಹೋಗುತ್ತಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಚಾಲಕರ ಮುಷ್ಕರದಿಂದಾಗಿ ಬೇರೆ ಯಾವುದೇ ಸಾರಿಗೆ ಲಭ್ಯವಿಲ್ಲದ ಕಾರಣ ರಾತ್ರಿಯಿಡೀ ನಡೆದುಕೊಂಡು ಹೋಗಿ ವಧು ಮನೆಯನ್ನು ಸೇರಿದ್ದೇವೆ. ನಮಗೆ 28 ಕಿ.ಮೀ ನಡೆದುಕೊಂಡು ಹೋಗುವುದರ ಹೊರತು ಬೇರೆ ಯಾವುದೇ ದಾರಿಯಿರಲಿಲ್ಲ ಎಂದು ವರನ ಕುಟುಂಬದವರೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: Bengaluru-Mysuru Expressway ನಲ್ಲಿ ಬೇಸಿಗೆ ಮಳೆಗೇ ಅವಾಂತರ- ವಾಹನ ಸವಾರರ ಪರದಾಟ

MARRIAGE GARLAND

ವಿಮೆ, ಪಿಂಚಣಿ, ಕಲ್ಯಾಣ ಮಂಡಳಿ ರಚನೆ ಹಾಗೂ ಇತರ ಸಮಾಜ ಕಲ್ಯಾಣ ಕ್ರಮಗಳಿಗೆ ಆಗ್ರಹಿಸಿ ಚಾಲಕ ಏಕತಾ ಮಹಾಸಂಘ ಬುಧವಾರದಿಂದ ಒಡಿಶಾ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದೆ. ವಾಣಿಜ್ಯ ವಾಹನ ಚಾಲಕರು ನಡೆಸುತ್ತಿದ್ದ ಮುಷ್ಕರಕ್ಕೆ ರಾಜ್ಯ ಸರ್ಕಾರ ಅವರ ಎಲ್ಲಾ ಬೇಡಿಕೆಗಳನ್ನು 90 ದಿನಗಳ ಒಳಗಾಗಿ ಈಡೇರಿಸುವುದಾಗಿ ಭರವಸೆ ನೀಡಿದೆ. ಈ ಬಳಿಕ ಮುಷ್ಕರವನ್ನು ಸ್ಥಗಿತಗೊಳಿಸಲಾಗಿದೆ. ಇದನ್ನೂ ಓದಿ: `ಕೈ’ ಟಿಕೆಟ್ ಆಕಾಂಕ್ಷಿಯಿಂದ ಸೀರೆ, ತವಾ ವಿತರಣೆ- ಉಡುಗೊರೆ ಸಿಗದ ಮಹಿಳೆಯರು ಗರಂ

Share This Article
Leave a Comment

Leave a Reply

Your email address will not be published. Required fields are marked *