ಬೆಂಗಳೂರು: ಬಿಎಂಟಿಸಿ ಚಾಲಕರೊಬ್ಬರು ಮಹಿಳೆಯನ್ನು ತನ್ನ ಸೀಟಿನಿಂದಲೇ ಬಸ್ಸೊಳಗೆ ಕರೆಸಿಕೊಂಡು ಮಾನವೀಯತೆ ಮೆರೆದಿದ್ದಾರೆ.
ಭಾರತ್ ಬಂದ್ ಹಿನ್ನೆಲೆಯಲ್ಲಿ ಮೆಜೆಸ್ಟಿಕ್ ನಿಲ್ದಾಣದಲ್ಲಿ ಇಂದು ವಿರಳವಾಗಿ ಬಸ್ ಸಂಚರಿಸುತಿತ್ತು. ಕಡಿಮೆ ಬಸ್ ಇದ್ದ ಹಿನ್ನೆಲೆಯಲ್ಲಿ ಪ್ರಯಾಣಿಕರ ನೂಕು ನುಗ್ಗಾಟ ಜಾಸ್ತಿಯಿತ್ತು.
Advertisement
Advertisement
ನೂಕು ನುಗ್ಗಾಟದ ಮಧ್ಯೆ ಮಹಿಳೆಯೊಬ್ಬರು ತನ್ನ ಪುಟ್ಟ ಮಕ್ಕಳನ್ನು ಎತ್ತಿಕೊಂಡು ಬಸ್ ಹತ್ತಲು ಪರದಾಡುತ್ತಿದ್ದರು. ಮಹಿಳೆಯ ಸಂಕಟ ನೋಡಿ ಬಿಎಂಟಿಸಿ ಬಸ್ ಡ್ರೈವರ್ ಅವರ ನೆರವಿಗೆ ಬಂದಿದ್ದಾರೆ. ಚಾಲಕ ತನ್ನ ಸೀಟಿನಿಂದಲೇ ಅವರನ್ನು ಬಸ್ಸೊಳಗೆ ಕರೆಸಿಕೊಂಡು ಮಾನವೀಯತೆ ಮರೆದಿದ್ದಾರೆ. ಚಾಲಕ ತಾಯಿ ಹಾಗೂ ಚಿಕ್ಕ ಮಗುವನ್ನು ಬಸ್ಸಿನೊಳಗೆ ಕರೆಸಿಕೊಂಡಿದಲ್ಲದೇ ತನ್ನ ಸೀಟ್ ನ ಪಕ್ಕದಲ್ಲೇ ಕೂರಿಸಿಕೊಂಡಿದ್ದಾರೆ.
Advertisement
Advertisement
ಮಂಗಳವಾರದ ಬಂದ್‍ಗೆ ರಾಜ್ಯದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಇಂದು ಬಸ್‍ಗಳನ್ನು ರಸ್ತೆಗಿಳಿಸಲು ಬಿಎಂಟಿಸಿ, ಕೆಎಸ್‍ಆರ್ ಟಿಸಿ ನಿರ್ಧರಿಸಿತ್ತು. ಆದರೆ ಕೆಲ ಬಸ್‍ಗಳ ಮೇಲೆ ಕಲ್ಲು ತೂರಾಟ ನಡೆದ ಹಿನ್ನೆಲೆಯಲ್ಲಿ ಹಲವು ಕಡೆ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಆದರೂ ಆಗಾಗ ಕೆಲವೊಂದು ಬಸ್ಸುಗಳು ರಸ್ತೆಯಲ್ಲಿ ಕಾಣಿಸಿಕೊಳ್ಳುತ್ತಿದೆ.
https://www.youtube.com/watch?v=nCVC3K38xnY
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv