ಫ್ಲೋರಿಡಾ: 3 ಸಾವಿರ ಕೆಜಿಗೂ ಹೆಚ್ಚು ತೂಕದ ಮೆಟಲ್ ಪೈಪ್ ವ್ಯಾನ್ ಮೇಲೆ ಬಿದ್ದರೂ ಚಾಲಕ ಪಾರಾದ ಘಟನೆ ಅಮೆರಿಕದಲ್ಲಿ ನಡೆದಿದೆ.
ಶನಿವಾರ ಬೆಳಿಗ್ಗೆ 7.35ರ ಸುಮಾರಿನಲ್ಲಿ 36 ವರ್ಷದ ಜೀಸಸ್ ಅರ್ಮಾಂಡೋ ಎಸ್ಕೋಬಾರ್ ಎಂಬವರು ಪೊಂಟಿಯಾಕ್ ವ್ಯಾನ್‍ನಲ್ಲಿ ಹೋಗ್ತಿದ್ರು. ಇದೇ ವೇಳೆ ಸ್ಕ್ರ್ಯಾಪ್ ಮೆಟಲ್ ತುಂಬಿದ್ದ ಟ್ರಕ್‍ವೊಂದು ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿತ್ತು. ಆಗ ಟ್ರಕ್‍ನಿಂದ ಗುಜರಿ ಪೈಪ್‍ವೊಂದು ಹಾರಿಕೊಂಡು ಬಂದು ಎಸ್ಕೊಬಾರ್ ಅವರ ವ್ಯಾನ್ ಮೇಲೆ ಬಿದ್ದಿದೆ. ಈ ಪೈಪ್ ಸುಮಾರು 7 ಸಾವಿರ ಪೌಂಡ್(ಅಂದಾಜು 3175 ಕೆಜಿ) ತೂಕವಿತ್ತು ಎಂದು ವರದಿಯಾಗಿದೆ.
Advertisement
Advertisement
ಪೈಪ್ ಬಿದ್ದ ರಭಸಕ್ಕೆ ಚಾಲಕನ ಸೀಟ್ ಇದ್ದ ಭಾಗದಲ್ಲಿ ವ್ಯಾನಿನ ಮೇಲ್ಛಾವಣಿ ಸಂಪೂರ್ಣ ನಜ್ಜುಗುಜ್ಜಾಗಿದೆ. ಆದ್ರೆ ಪವಾಡವೆಂಬಂತೆ ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಬದುಕುಳಿದಿದ್ದಾರೆ. ಯಾರಾದ್ರೂ ವ್ಯಾನ್‍ನ ಇನ್ಯಾವುದೇ ಸೀಟ್‍ನಲ್ಲಿ ಕುಳಿತಿದ್ದರೆ ಖಂಡಿತ ಸಾವನ್ನಪ್ಪುತ್ತಿದ್ರು ಎಂದು ಅಧಿಕಾರಿಗಳು ಹೇಳಿದ್ದಾರೆ.
Advertisement
Advertisement
ಚಾಲಕ ಬದುಕುಳಿದಿದ್ದಾರೆ ಎಂದು ಕೇಳಿ ಶಾಕ್ ಆಯಿತು ಎಂದು ಇಲ್ಲಿನ ರೀಸೈಕ್ಲಿಂಗ್ ಸೆಂಟರ್‍ನವರೊಬ್ಬರು ಹೇಳಿದ್ದಾರೆ. ನಿಜಕ್ಕೂ ಈ ಅವಘಢದಲ್ಲಿ ಯಾರೂ ಬದುಕಿರಲು ಸಾಧ್ಯವಿಲ್ಲ ಎಂದುಕೊಂಡಿದ್ದೆ ಅಂತ ನಜ್ಜುಗುಜ್ಜಾಗಿದ್ದ ವ್ಯಾನ್ ತೆರವು ಮಾಡಿದ ಲೂಪ್ ಗ್ರೋವರ್ ಹೇಳಿದ್ದಾರೆ.
ಎಸ್ಕೋಬಾರ್ ಅವರನ್ನ ಭಾನುವಾರ ರಾತ್ರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಎಸ್ಕೊಬಾರ್ ಬದುಕುಳಿದಿರುವುದಕ್ಕೆ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಟ್ರಕ್ ಡ್ರೈವರ್ ಆಂಟೋನಿಯೋ ಸ್ಯಾಂಟಿಯಾಗೋ ವಾರ್ಟನ್‍ನ ಬೇಜಬ್ದಾರಿಯುತ ಚಾಲನೆಗೆ ದಂಡ ಹಾಕಲಾಗಿದೆ ಎಂದು ವರದಿಯಾಗಿದೆ.