ಮುಂಬೈ: ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮಾರ್ಷಲ್ ಒಬ್ಬರು ಕಾರನ್ನು ನಿಲ್ಲಿಸಿ ದಂಡ ವಿಧಿಸಿದ್ದು, ಅವರನ್ನೇ ಚಾಲಕ ಕಾರಿನ ಬಾನೆಟ್ ಮೇಲೆ ಎಳೆದುಕೊಂಡು ಹೋದ ಘಟನೆ ಮುಂಬೈನಲ್ಲಿ ನಡೆದಿದೆ.
Advertisement
ಮುಂಬೈನ ಸಾಂತಾ ಕ್ರೂಜ್ ನಲ್ಲಿ ಮಾರ್ಷಲ್ ಸುರೇಶ್ ಕರ್ತವ್ಯ ನಿರ್ವಹಿಸುತ್ತಿದ್ದು, ಟ್ರಾಫಿಕ್ ವೇಳೆ ಕಾರಿನಲ್ಲಿರುವವರು ಮಾಸ್ಕ್ ಧರಿಸದೆ ಇರುವುದನ್ನು ಗಮನಿಸಿ ಅವರಿಗೆ 200 ರೂ. ತಂಡ ವಿಧಿಸಲು ಮುಂದಾಗಿದ್ದರೆ. ಅವರು ಇನ್ನೂ ದಂಡ ಬರೆಯುತ್ತಿರಬೇಕಾದರೆ ಚಾಲಕ ಕಾರನ್ನು ಓಡಿಸಲು ಮುಂದಾಗಿದ್ದು, ಇದನ್ನೂ ಗಮನಿಸಿದ ಸುರೇಶ್ ಚಾಲಕನನ್ನು ತಡೆಯಲು ಕಾರಿನ ಬಾನೆಟ್ ಗೆ ಹಾರಿದ್ದಾರೆ. ಅದನ್ನು ಲೆಕ್ಕಿಸದೆ ಚಾಲಕ ಕಾರನ್ನು ಓಡಿಸಿದ್ದು, ಹೀಗೆ ಟ್ರಾಫಿಕ್‍ನಲ್ಲೆ ಸುಮಾರು ದೂರ ಸುರೇಶ್ ಅವರನ್ನು ಕರೆದುಕೊಂಡು ಹೋಗಿ ನಿಲ್ಲಿಸಿದ್ದಾರೆ. ಇದನ್ನೂ ಓದಿ: ಒಂದೂವರೆ ಕೋಟಿ ವೆಚ್ಚದ ಸರ್ಕಾರಿ ಹೈಟೆಕ್ ಆಸ್ಪತ್ರೆ ನಿರ್ಮಾಣ
Advertisement
Advertisement
ಈ ಪರಿಣಾಮ ಕಾರನ್ನು ಓಡಿಸುತ್ತಿದ್ದವನ ವಿರುದ್ಧ ದೂರು ದಾಖಲಾಗಿದ್ದು, ಸ್ಥಳದಿಂದ ಚಾಲಕ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕರ್ತವ್ಯಕ್ಕೆ ತೆರಳುತ್ತಿದ್ದ ವಕೀಲ ಅಪಘಾತದಲ್ಲಿ ಸಾವು
Advertisement
ಸೆ.2 ರಂದು ಈ ಘಟನೆ ನಡೆದಿದ್ದು, ವೀಡಿಯೋ ವೈರಲ್ ಆದ ಬಳಿಕ ವಿಷಯ ಬೆಳಕಿನೆ ಬಂದಿದೆ.