ಆನೇಕಲ್: ಸರ್ಕಾರಿ ಆಸ್ಪತ್ರೆ ಎಂದರೆ ಬಡವರು ಹೋಗುವಂತದ್ದು ಎಂದು ಮೂಗು ಮುರಿಯುವ ಜನರಿದ್ದಾರೆ. ಆದರೆ ಈಗ ಯಾವ ಖಾಸಗಿ ಆಸ್ಪತ್ರೆಗೂ ಕಮ್ಮಿ ಇಲ್ಲ ಎಂಬಂತೆ ಆನೇಕಲ್ ನಲ್ಲಿ ಒಂದೂವರೆ ಕೋಟಿ ವೆಚ್ಚದ ಹೈಟೆಕ್ ಸರ್ಕಾರಿ ಆಸ್ಪತ್ರೆ ನಿರ್ಮಾಣವಾಗಿದೆ.
Advertisement
ಕೊರೊನಾ ಮೂರನೇ ಅಲೆಯ ಮುಂಜಾಗ್ರತಾ ಕ್ರಮವಾಗಿ ಎಜಿಐ ಮಿಲ್‍ಟೆಕ್ ಖಾಸಗಿ ಕಂಪನಿಯು ಸಿ.ಎಸ್.ಆರ್ ಪೌಂಡ್ ನಿಂದ ಬೆಂಗಳೂರು ಹೊರವಲಯ ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಹೈಟೆಕ್ ಐಸಿಯು ಬೆಡ್ ಗಳ ಸಿದ್ಧತೆ ಮಾಡಲಾಗಿದೆ. ಈ ಆಸ್ಪತ್ರೆಗೆ ಸುಮಾರು ಒಂದೂವರೆ ಕೋಟಿ ರೂ. ವೆಚ್ಚ ಮಾಡಲಾಗಿದೆ. ಇದನ್ನೂ ಓದಿ: ಕರ್ತವ್ಯಕ್ಕೆ ತೆರಳುತ್ತಿದ್ದ ವಕೀಲ ಅಪಘಾತದಲ್ಲಿ ಸಾವು
Advertisement
Advertisement
ಕೊರೊನಾ ಎರಡನೇ ಅಲೆಯ ಸೋಂಕಿಗೆ ತುತ್ತಾಗಿ ಆಸ್ಪತ್ರೆಗಳಲ್ಲಿ ಐಸಿಯು ಬೆಡ್ ಗಳು ಸಿಗದೆ ಸಾಕಷ್ಟು ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು ಎಜಿಐ ಮಿಲ್‍ಟೆಕ್ ಕಂಪನಿಯು ಸಿಎಸ್‍ಆರ್ ಪೌಂಡ್ ನಿಂದ ಹತ್ತು ಬೆಡ್ ಗಳ ಹೈಟೆಕ್ ಐಸಿಯು ವಾರ್ಡ್ ನ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸುಮಾರು ಒಂದೂವರೆ ಕೋಟಿ ರೂ.ಗಳ ವೆಚ್ಚದಲ್ಲಿ ಕಳೆದ ಮೂರು ತಿಂಗಳಿನಿಂದ ಇ ಆಸ್ಪತ್ರೆಗೆ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಐಸಿಯು ಬೆಡ್ ಗಳು, ಆಮ್ಲಜನಕಯುಕ್ತ ಹಾಸಿಗೆಗಳು ಮತ್ತು ವೆಂಟಿಲೇಟರ್‍ಗಳನ್ನು ಒಳಗೊಂಡಿರುವ ಅತ್ಯುತ್ತಮ ವೈದ್ಯಕೀಯ ಸೌಲಭ್ಯವಿರುವ ಐಸಿಯು ವಾರ್ಡ್ ನಿರ್ಮಾಣ ಮಾಡಲಾಗಿದೆ. ಇದನ್ನೂ ಓದಿ: ಜನರ ಬಳಿ ಸುಲಿಗೆ ಮಾಡ್ಕೊಂಡು ನಿಂತಿದ್ದೀರಾ?- ಅಧಿಕಾರಿಗಳಿಗೆ ರವೀಂದ್ರ ಶ್ರೀಕಂಠಯ್ಯ ಕ್ಲಾಸ್
Advertisement
ಈ ಕುರಿತು ಪ್ರತಿಕ್ರಿಯಿಸಿದ ಎಜಿಐ ಮಿಲ್ಟೆಕ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರನ್, ಈಗಾಗಲೇ ಹೊರರಾಜ್ಯಗಳಲ್ಲಿ ಮತ್ತು ಗಡಿಪ್ರದೇಶಗಳಲ್ಲಿ ಹೆಚ್ಚು ಕೊರೊನಾ ಸೋಂಕು ಹರಡುತ್ತಿದ್ದು, ಮೂರನೇ ಅಲೆಯು ಬಂದ ಸಂದರ್ಭದಲ್ಲಿ ಅದನ್ನು ದಿಟ್ಟವಾಗಿ ಎದುರಿಸುವ ನಿಟ್ಟಿನಲ್ಲಿ ಹಾಗೂ ಮಕ್ಕಳ ಆರೈಕೆಗಾಗಿ ಮಲ್ಟಿಸ್ಪೆಶಾಲಿಟಿ ಐಸಿಯು ಸೌಲಭ್ಯ ಕಲ್ಪಿಸಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ನಾನು ಫುಲ್ ಥ್ರಿಲ್ ಆಗಿದ್ದೇನೆ ಅಂದ್ರು ಡಿಂಪಲ್ ಕ್ವೀನ್ ರಚಿತಾ
ಆನೇಕಲ್ ತಾಲೂಕು ಗ್ರಾಮೀಣ ಭಾಗವಾಗಿದ್ದು, ಇಲ್ಲಿ ಹೆಚ್ಚು ರೈತಾಪಿ ಹಾಗೂ ಬಡ ಜನರಿದ್ದಾರೆ. ಕೊರೊನಾ ಸೇರಿದಂತೆ ಯಾವುದೇ ರೀತಿ ಆರೋಗ್ಯದಲ್ಲಿ ಏರುಪೇರು ಆದಾಗ ಐಸಿಯು ಬೆಡ್ ಗಾಗಿ ಖಾಸಗಿ ಆಸ್ಪತ್ರೆಗಳಿಗೆ ಹೋಗಲು ಅವರ ಬಳಿ ಹಣ ಇರುವುದಿಲ್ಲ. ಈ ಕಾರಣ ಸೂಕ್ತ ಸಮಯಕ್ಕೆ ಸರಿಯಾದ ಚಿಕಿತ್ಸೆ ದೊರೆಯದೆ ಸಾವಿಗೀಡಾಗುತ್ತಾರೆ. ಆದರೆ ಈ ಐಸಿಯು ವಾರ್ಡ್ ಆಸ್ಪತ್ರೆ ಬರುವ ಬಡ ರೋಗಿಗಳಿಗೆ ಸಹಕಾರವಾಗಲಿದೆ ಎಂದು ತಿಳಿಸಿದರು.