ಬೆಳಗಾವಿ: ಅಕ್ಕನ ಮಗಳ ಮದುವೆಗೆ ರಜೆ ನೀಡದ ಹಿನ್ನೆಲೆ ಬಸ್‌ನಲ್ಲೇ ಚಾಲಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ(Belagavi) ಡಿಪೋದ 2ನೇ ಘಟಕದಲ್ಲಿ ನಡೆದಿದೆ.
2ನೇ ಘಟಕದ ಬಸ್ ಚಾಲಕ ಬಾಲಚಂದ್ರ ಹುಕೋಜಿ ನೇಣಿಗೆ ಶರಣಾಗಿದ್ದಾರೆ. ಮನೆಯಲ್ಲಿ ಅಕ್ಕನ ಮಗಳ ಮದುವೆಯಿದ್ದ ಕಾರಣ ಕಳೆದ ಮೂರು ದಿನಗಳ ಹಿಂದೆ ರಜೆಗಾಗಿ ಅರ್ಜಿ ಸಲ್ಲಿಸಿದ್ದರು. ರಜೆ ನೀಡದ ಹಿನ್ನೆಲೆ ಸಿಬಿಟಿಯಿಂದ ವಡಗಾವ ನಗರ ಸಂಚಾರ ಬಸ್‌ನಲ್ಲಿ ಕರ್ತವ್ಯ ನಿರ್ವಹಿಸಬೇಕಿದ್ದ ಅವರು ಅದೇ ಬಸ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಸನ್ನಿ ಡಿಯೋಲ್ ಸಿನಿಮಾದಲ್ಲಿ ಸೊಂಟ ಬಳುಕಿಸಿದ ‘ಐರಾವತ’ ನಟಿ ಊರ್ವಶಿ
ಗಾಂಧಿ ನಗರದಲ್ಲಿ(Gandhi Nagara) ವಾಸವಿದ್ದ ಮೃತ ಚಾಲಕ, ಬೆಳಿಗ್ಗೆ 6 ಗಂಟೆಗೆ ಕರ್ತವ್ಯಕ್ಕೆ ಹಾಜರಾಗಿದ್ದರು. ಅವರು ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ(Market Police Station) ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮುಂಬೈ: 14ನೇ ಮಹಡಿಯಿಂದ ಜಿಗಿದು ಯುವತಿ ಆತ್ಮಹತ್ಯೆ