ಮುಂಬೈ: ಪ್ರೀತಿ ಎಂಬುದು ಮಾಯೆ.. ಈ ಪ್ರೀತಿಗೆ ಕಣ್ಣಿಲ್ಲ ಅಂತಾರೆ ನಿಜ, ಆದ್ರೆ ಕೆಲವೊಮ್ಮೆ ಪ್ರೀತಿಗೆ ಹೃದಯವೂ ಇರೋದಿಲ್ಲ, ಅದು ತನ್ನ ಪ್ರೇಮಿಯನ್ನ (Lovers) ಬಿಟ್ಟು ಉಳಿದವರಿಗಾಗಿ ಕಲ್ಲಿನಷ್ಟೇ ಕಠೋರವಾಗಿರುತ್ತೆ. ಇದಕ್ಕೆ ಮಹಾರಾಷ್ಟ್ರದಲ್ಲಿ ನಡೆದಿರುವ ಮತ್ತೊಂದು ಪ್ರಕರಣ ಸಾಕ್ಷಿಯಾಗಿದೆ.
ಯೆಸ್. ʻದೃಶ್ಯಂʼ ಸಿನಿಮಾ ಶೈಲಿಯಲ್ಲಿ ಮಹಾರಾಷ್ಟ್ರದ (Maharashtr) ಪಾಲ್ಘರ್ ಜಿಲ್ಲೆಯ ಖತರ್ನಾಕ್ ಮಹಿಳೆ, ಪ್ರಿಯಕರನೊಂದಿಗೆ ಸೇರಿ ಗಂಡನನ್ನೇ ಕೊಂದು ಶವವನ್ನ ತನ್ನ ಮನೆಯೊಳಗೆ ಹೂತಿಟ್ಟಿದ್ದ ಪ್ರಕರಣ ಬೆಳಕಿಗೆ ಬಂದಿದೆ. 35 ವರ್ಷದ ವಿಜಯ್ ಚವಾಣ್ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಯುಎಇ ಅಪಾರ್ಟ್‌ಮೆಂಟ್‌ನಲ್ಲಿ ಕೇರಳದ ಮಹಿಳೆ ಶವವಾಗಿ ಪತ್ತೆ – ವರದಕ್ಷಿಣೆ ಕಿರುಕುಳ ಆರೋಪ
ವರದಿಗಳ ಪ್ರಕಾರ, ವಿಜಯ್ ಚವಾಣ್ ಮುಂಬೈನಿಂದ (Mumbai) ಸುಮಾರು 70 ಕಿಮೀ ದೂರದಲ್ಲಿರುವ ನಲಸೋಪರ ಪೂರ್ವದ ಗಡ್ಗಪದ ಪ್ರದೇಶದಲ್ಲಿ ಪತ್ನಿ ಕೋಮಲ್ ಚವಾಣ್ (28) ಜೊತೆಗೆ ವಾಸವಿದ್ದ. ಆದ್ರೆ ಕಳೆದ 15 ದಿನಗಳಿಂದ ವಿಜಯ್ ನಾಪತ್ತೆಯಾಗಿದ್ದ. ಇದನ್ನೂ ಓದಿ: ಬಾಂಗ್ಲಾದೇಶದ ವಾಯುಪಡೆಯ ತರಬೇತಿ ವಿಮಾನ ದುರಂತ – ಪೈಲಟ್ ಸೇರಿ 16 ಜನ ಸಾವು
ಸೋಮವಾರ ಚವಾಣ್‌ನನ್ನ ಹುಡುಕುತ್ತಿದ್ದ ಅವನ ಸಹೋದರರು ಕೋಮಲ್ ಮನೆಗೆ ಬಂದಿದ್ದರು. ಅಲ್ಲಿ ನೆಲಕ್ಕೆ ಹಾಕಿದ್ದ ಕೆಲ ಟೈಲ್ಸ್‌ಗಳ ಬಣ್ಣದಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಇದರಿಂದ ಅನುಮಾನಗೊಂಡ ವಿಜಯ್ ಸಹೋದರರು ವ್ಯತ್ಯಾಸ ಕಂಡುಬಂದ ಟೈಲ್ಸ್‌ಗಳನ್ನ ನೆಲದಿಂದ ಕಿತ್ತರು. ಅದರ ಕೆಳಗೆ ಹೂತಿಟ್ಟಿದ್ದ ವೇಸ್ಟೇಜ್‌ನಿಂದ ಕೆಟ್ಟ ದುರ್ವಾಸನೆ ಬರುತಿತ್ತು. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಪರಿಶೀಲನೆ ನಡೆಸಿದ ಬಳಿಕ ಗಂಡನ ಶವ ಹೂತಿಟ್ಟಿದ್ದ ರಹಸ್ಯ ಬೆಳಕಿಗೆ ಬಂದಿತು.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪತ್ನಿಯನ್ನ ಬಂಧಿಸಿದ್ದಾರೆ. ಈ ಬೆನ್ನಲ್ಲೇ ಕೋಮಲ್ ತನ್ನ ನೆರೆಯ ಮೋನು ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವಿಷಯ ತಿಳಿದುಬಂದಿದೆ. ಈತನ ಜೊತೆಗೂಡಿಯೇ ಕೊಲೆ ಮಾಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ SIT ಹೆಗಲಿಗೆ – ನಿಷ್ಪಕ್ಷಪಾತ ತನಿಖೆ ಬಗ್ಗೆ ಗೃಹ ಸಚಿವ ಪರಂ ಭರವಸೆ