ಮಲಯಾಳಂ (Malayalam) ಸಿನಿಮೋದ್ಯಮದ ಹಿಟ್ ಸೀಕ್ವೆಲ್ ಸಿನಿಮಾಗಳಲ್ಲಿ ಮುಂಚೂಣಿಯಲ್ಲಿರುವ ಚಿತ್ರ ದೃಶ್ಯಂ. ಹಿಂದೆ ಬಿಡುಗಡೆಯಾದ ಎರಡೂ ಸೀಕ್ವೆಲ್ ಭರ್ಜರಿ ಹಿಟ್ ಅಷ್ಟೇ ಅಲ್ಲದೇ ಬಾಕ್ಸಾಫೀಸ್ ದಾಖಲೆ ಬರೆದ ಮಿನಿಮನ್ ಬಜೆಟ್‌ನ ಸಿನಿಮಾಗಳಾಗಿದೆ. ಸದ್ದಿಲ್ಲದೇ ದೃಶ್ಯಂ-3 (Drishyam 3) ಚಸಿನಿಮಾ ಚಿತ್ರೀಕರಣವೂ ಕಂಪ್ಲೀಟ್ ಆಗಿದ್ದು, ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಅನ್ನೋ ಕುರಿತು ಚಿತ್ರದ ನಿರ್ದೇಶಕ ಮಾಹಿತಿ ಕೊಟ್ಟಿದ್ದಾರೆ.
ಇದೇ ಏಪ್ರಿಲ್ ತಿಂಗಳಲ್ಲಿ ದೃಶ್ಯಂ 3 ರಿಲೀಸ್ ಆಗಲಿದ್ದು, ಈ ವಿಚಾರ ಮೋಹನ್‌ಲಾಲ್ (Mohanlal) ಹಾಗೂ ದೃಶ್ಯಂ ರೋಚಕ ಸೀಕ್ವೆಲ್ ಚಿತ್ರಗಳ ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ.
ಸ್ಟಾರ್ ಡೈರೆಕ್ಟರ್ ಜೀತು ಜೋಸೆಫ್ (Jeethu Joseph) ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ದೃಶ್ಯಂ 3 ಸಿನಿಮಾ ಇದೇ ಏಪ್ರಿಲ್ ತಿಂಗಳಲ್ಲಿ ರಿಲೀಸ್ ಆಗಲಿರುವ ವಿಚಾರವನ್ನ ಹಂಚಿಕೊಂಡಿದ್ದಾರೆ. ಇದು ಮೋಹನ್‌ಲಾಲ್‌ಗೆ ಕೂಡ ವಿಶೇಷ ಬೂಸ್ಟ್ ಕೊಡುವ ಚಿತ್ರ. ಏಕೆಂದ್ರೆ `ವೃಷಭ’ ಸಿನಿಮಾದಿಂದ ಪ್ಲಾಫ್ ಕೊಟ್ಟ ಮೋಹನ್‌ಲಾಲ್‌ಗೆ ದೃಶ್ಯಂ ಮೇಲೆ ಬಹಳ ನಿರೀಕ್ಷೆ ಇದೆ. ಹೀಗಾಗಿ ಸೋಲಿಲ್ಲದ ಸರದಾರ ಎಂದೇ ಖ್ಯಾತರಾಗಿರುವ ಮೋಹನ್‌ಲಾಲ್‌ಗೆ ದೃಶ್ಯಂ 3 ಚಿತ್ರದ ಮೇಲೆ ಅಪಾರ ನಂಬಿಕೆ ಇದೆ.
ದೃಶ್ಯಂ ಹಾಗೂ ದೃಶ್ಯಂ 2 ಕನ್ನಡ, ಹಿಂದಿ, ತೆಲುಗು ಭಾಷೆಗಳಲ್ಲಿ ರಿಮೇಕ್ ಆಗಿಯೂ ಹಿಟ್ ಆಗಿರುವ ಚಿತ್ರ. ಸಸ್ಪೆನ್ಸ್, ಥ್ರಿಲ್ಲರ್, ಕ್ರೈಂ ಕಹಾನಿ ತೋರಿಸುವ ದೃಶ್ಯಂಗೆ ಅಪಾರ ಅಭಿಮಾನಿ ಬಳಗವಿದೆ. ಇದೀಗ ದೃಶ್ಯಂ (Drishyam) ಸಿನಿಮಾ ವಿಚಾರವಾಗಿ ಫ್ಯಾನ್ಸ್‌ಗೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ ನಿರ್ದೇಶಕ ಜೀತು ಜೋಸೆಫ್.


