ವಾರಣಾಸಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ರೋಡ್ ಶೋ ನಡೆದಿದ್ದ ಕಾಶಿ ರಸ್ತೆಯನ್ನು ಬರೋಬ್ಬರಿ ಒಂದೂವರೆ ಲಕ್ಷ ಲೀಟರ್ ನೀರು ಸುರಿದು ಫುಲ್ ಕ್ಲೀನ್ ಮಾಡಲಾಗಿದೆ.
ದೇಗುಲ ನಗರಿಯ ಶೇ.30ರಷ್ಟು ಮಂದಿಗೆ ಕುಡಿಯಲು ನೀರಿಲ್ಲ. ಆದರೆ ಮೋದಿ ಬರುತ್ತಾರೆ ಎಂದು ಕುಡಿಯುವ ನೀರು ಬಿಟ್ಟು ಕಾಶಿ ರಸ್ತೆಯ ಸ್ವಚ್ಛತೆಯನ್ನು ಮಾಡಲಾಗಿದೆ. ವಾರಣಾಸಿ ಮುನ್ಸಿಪಲ್ ಕಾರ್ಪೋರೇಷನ್ 400 ಸಿಬ್ಬಂದಿಯಿಂದ ರೋಡ್ ಕ್ಲೀನ್ ಮಾಡಿಸಲಾಗಿದೆ ಎಂದು ಟೆಲಿಗ್ರಾಫ್ ವರದಿ ಮಾಡಿದೆ.
Advertisement
Advertisement
ಪ್ರಧಾನಿ ಮೋದಿ ಕ್ಷೇತ್ರ ಕಾಶಿಯಲ್ಲಿ ಇದುವರೆಗೆ ಶೇ.70ರಷ್ಟು ಮನೆಗಳಿಗೆ ಮಾತ್ರ ಪೈಪ್‍ಲೈನ್ ಆಗಿದೆ. ಇನ್ನೂ ಶೇಕಡಾ 30ರಷ್ಟು ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕವಿಲ್ಲ. ಆದರೂ ಈ ರೀತಿ ಕುಡಿಯುವ ನೀರನ್ನು ರಸ್ತೆಯ ಸ್ವಚ್ಛತೆಗಾಗಿ ಬಳಸಿಕೊಂಡಿರುವುದು ಎಷ್ಟು ಸರಿ ಎಂದು ಜನ ಪ್ರಶ್ನೆ ಮಾಡಿದ್ದಾರೆ.
Advertisement
ಪ್ರಧಾನಿ ಮೋದಿ ರೋಡ್ ಶೋ ಹಿನ್ನೆಲೆಯಲ್ಲಿ ರಸ್ತೆಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಕುಡಿಯುವ ನೀರಿನಲ್ಲಿ ಕ್ಲೀನ್ ಮಾಡಲಾಗಿದೆ. ಅಷ್ಟೇ ಅಲ್ಲದೇ ರಸ್ತೆಯ ಪಕ್ಕದಲ್ಲಿದ್ದ ಗೋಡೆಯನ್ನು ಸಹ ಕುಡಿಯುವ ನೀರಿನಿಂದ ಸ್ವಚ್ಛ ಮಾಡಿಸಿದ್ದಾರೆ.
Advertisement
ಪ್ರಧಾನಿ ಮೋದಿ ಅವರು ಸ್ವಚ್ಛತಾ ಅಭಿಯಾನವನ್ನು ವಾರಣಾಸಿಯಿಂದ ಪ್ರಾರಂಭಿಸಿದ್ದರು. ಹೀಗಾಗಿ ಪ್ರಧಾನಿ ಮೋದಿ ಬರುವ ದಾರಿ ಕಸದಿಂದ ಕೊಳಕಾಗಿದ್ದರೆ ಅದನ್ನು ನೋಡಿ ಮೋದಿ ಅವರು ಅಧಿಕಾರಿಗಳನ್ನು ತರಾಟೆ ತೆಗೆದುಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಪಾಲಿಕೆಯ ಅಧಿಕಾರಿಗಳು ಈ ರೀತಿ ಕುಡಿಯುವ ನೀರನ್ನು ರಸ್ತೆ ಸ್ವಚ್ಛತೆಗಾಗಿ ವ್ಯರ್ಥ ಮಾಡಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.