– ಕೋರಮಂಗಲ ಒಂದರಲ್ಲೇ 40 ಪ್ರಕರಣ
ಬೆಂಗಳೂರು: ಕುಡಿದು ವಾಹನ ಚಲಾಯಿಸುವವರ ವಿರುದ್ಧ ನಗರ ಸಂಚಾರ ಪೊಲೀಸರು ಆಪರೇಷನ್ ಶುರು ಮಾಡಿದ್ದಾರೆ. ಒಂದೇ ದಿನದಲ್ಲಿ 200 ಪ್ರಕರಣ ದಾಖಲಿಸಿದ್ದಾರೆ. ಕೋರಮಂಗಲದಲ್ಲೇ 40 ಕೇಸ್ ದಾಖಲಾಗಿವೆ.
Advertisement
ಯಾರೂ ಮದ್ಯಪಾನ ಮಾಡಿ ವಾಹನ ಚಲಾಯಿಸದಂತೆ ನೋಡಿಕೊಳ್ಳಲು ಕ್ರಮವಹಿಸಿದ್ದೇವೆ ಎಂದು ದಕ್ಷಿಣ ವಿಭಾಗದ ಸಂಚಾರ ಪೊಲೀಸ್ ಉಪ ಪೊಲೀಸ್ ಆಯುಕ್ತ ಶಿವಪ್ರಕಾಶ್ ದೇವರಾಜು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು: 22 ದಿನಗಳಲ್ಲಿ ದೋಷಪೂರಿತ ನಂಬರ್ ಪ್ಲೇಟ್ ಇದ್ದ 9,684 ವಾಹನಗಳ ಮೇಲೆ ಕೇಸ್
Advertisement
Advertisement
ಶುಕ್ರವಾರ ನಗರದಾದ್ಯಂತ ಕಾರ್ಯಾಚರಣೆ ನಡೆಸಲಾಯಿತು. ಮದ್ಯಪಾನ ಮಾಡಿದ ಚಾಲಕರು ಮತ್ತು ಸವಾರರ ವಿರುದ್ಧ 201 ಪ್ರಕರಣಗಳು ದಾಖಲಾಗಿವೆ. ಟ್ರಾಫಿಕ್ ಪೊಲೀಸರು ನಗರಾದ್ಯಂತ ಬೀಡುಬಿಟ್ಟಿದ್ದು, ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿದ್ದಾರೆ.
Advertisement
34,676 ವಾಹನಗಳನ್ನು ತಪಾಸಣೆ ನಡೆಸಿ, 779 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂ.ಎನ್.ಅನುಚೇತ್ ಬಿಎಂ ತಿಳಿಸಿದ್ದಾರೆ. ದಕ್ಷಿಣ ವಿಭಾಗದಲ್ಲಿ ಅಧಿಕಾರಿಗಳು 9,615 ವಾಹನಗಳನ್ನು ಪರಿಶೀಲಿಸಿದ್ದಾರೆ. 201 ಚಾಲಕರು ಕಾನೂನು ಉಲ್ಲಂಘಿಸಿದ್ದಾರೆ. ಇದನ್ನೂ ಓದಿ: ದೆಹಲಿಯಿಂದ ವಾಪಸ್ಸಾದ ಪರಮೇಶ್ವರ್ – ಮುಡಾ ಹಗರಣ ಚರ್ಚೆ ಮಾಡಿದ್ದೇವೆ ಎಂದ ಗೃಹ ಸಚಿವ
ಆಡುಗೋಡಿಯಲ್ಲಿ 1,783 ವಾಹನಗಳ ತಪಾಸಣೆ ನಡೆಸಲಾಗಿದ್ದು, 41 ಡ್ರಂಕ್ & ಡ್ರೈವ್ ಕೇಸ್ ದಾಖಲಾಗಿದೆ. ಆಡುಗೋಡಿ ಮೊದಲ ಸ್ಥಾನದಲ್ಲಿದೆ. 1,678 ವಾಹನಗಳ ಪೈಕಿ 19 ಪ್ರಕರಣಗಳೊಂದಿಗೆ ಎಚ್‌ಎಸ್‌ಆರ್ ಲೇಔಟ್ ನಂತರದ ಸ್ಥಾನದಲ್ಲಿದೆ. ಸಂಚಾರ ದಟ್ಟಣೆ ಕಡಿಮೆ ಇರುವ ಕೆ.ಎಸ್.ಲೇಔಟ್, ತಲಘಟ್ಟಪುರದಂತಹ ಪ್ರದೇಶಗಳಲ್ಲಿಯೂ ಪ್ರಕರಣ ದಾಖಲಾಗಿದೆ. ಜಯನಗರ ಮತ್ತು ಬನಶಂಕರಿಯಲ್ಲಿ ಕ್ರಮವಾಗಿ 17 ಮತ್ತು ಎಂಟು ಪ್ರಕರಣಗಳನ್ನು ದಾಖಲಿಸಿದೆ.