ಬೆಂಗಳೂರು: ಬಾಕ್ಸ್ ಆಫೀಸ್‍ನಲ್ಲಿ ಭರ್ಜರಿ ಸದ್ದು ಮಾಡುತ್ತಿರುವ `ದಿ ವಿಲನ್’ ಚಿತ್ರದಲ್ಲಿ ನಟ ಶಿವರಾಜ್ ಕುಮಾರ್ ಅವರಿಗೆ ಸುದೀಪ್ ಹೊಡಿದಿರುವ ದೃಶ್ಯಗಳ ವಿರುದ್ಧ ಅಭಿಮಾನಿಗಳು ಅಕ್ರೋಶ ವ್ಯಕ್ತಪಡಿಸಿದ್ದರ ಕುರಿತು ನಿರ್ದೇಶಕ ಪೇಮ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿರುವ ಪ್ರೇಮ್, ಸಿನಿಮಾನ ಸಿನಿಮಾ ಥರ ನೋಡಿ. ನಿಮ್ಮನ್ನ ನೋಯಿಸುವುದು ನನ್ನ ಉದ್ದೇಶವಲ್ಲ. ಶಿವಣ್ಣನ ಮುಗ್ದತೆಯನ್ನು ಆ ಸೀನ್‍ನಲ್ಲಿ ತೋರಿಸಲಾಗಿದೆ. ಆ ಸೀನ್ ನಲ್ಲಿ ಶಿವಣ್ಣ ಅವರ ಅಭಿನಯವೇ ಪ್ರಮುಖ. ಅದ್ದರಿಂದಲೇ ಅಷ್ಟು ಚೆನ್ನಾಗಿ ಮೂಡಿ ಬಂದಿದೆ. ಶಿವಣ್ಣ ಪಾತ್ರ ಒಂದೊಮ್ಮೆ ಫೈಟ್ ಮಾಡಿದ್ದರೆ, ಅಲ್ಲಿ ಅರ್ಥವೇ ಕೆಟ್ಟು ಹೋಗುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ‘ದಿ ವಿಲನ್’ ರಿಲೀಸ್ ದಿನವೇ ಪ್ರೇಮ್ ಕೆಂಡಾಮಂಡಲ
Advertisement
Advertisement
ಸಿನಿಮಾ ಗೆಲ್ಲಲು ಅಭಿಮಾನಿಗಳೇ ಕಾರಣ. ನಿಮ್ಮಿಂದಲೇ ಸಿನಿಮಾ ಗೆಲುವು ಪಡೆದಿದೆ. ಬೇರೆ ಭಾಷೆಯ ಸಿನಿಮಾ ಕ್ಷೇತ್ರದ ಜನರು ತಿರುಗಿ ನೀಡುವಂತೆ ಮಾಡಿದ್ದೀರಿ. ಅದ್ದರಿಂದ ಸಿನಿಮಾವನ್ನು ಹಾಗೆಯೇ ನೋಡಿ. ಈ ಕುರಿತು ಕ್ಷಮೆ ಇರಲಿ ಎಂದು ತಿಳಿಸಿದ್ದಾರೆ. ಆದರೆ ಅಭಿಮಾನಿಗಳ ಬೇಡಿಕೆಯಾದ ಫೈಟ್ ದೃಶ್ಯ ಕತ್ತರಿ ಹಾಕುವ ಬಗ್ಗೆ ಮಾತನಾಡಿಲ್ಲ. ಇದನ್ನೂ ಓದಿ: ನಿರ್ದೇಶಕ ಪ್ರೇಮ್ ವಿರುದ್ಧ ತಿರುಗಿ ಬಿದ್ರು ಶಿವಣ್ಣನ ಅಭಿಮಾನಿಗಳು!
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv