– ದೇಹದ 80% ಭಾಗ ಮುಚ್ಚಿಕೊಂಡು ಭಾರತೀಯ ನಾರಿಯಂತೆ ಬನ್ನಿ ಅಂತ ಸೂಚನೆ
ಡೆಹ್ರಾಡೂನ್: ಉತ್ತರಾಖಂಡದ (Uttarakhand) ಪ್ರಮುಖ ಮೂರು ದೇವಾಲಯಗಳ ಪ್ರವೇಶಕ್ಕೆ ಮಹಿಳೆಯರು ಮತ್ತು ಹುಡುಗಿಯರಿಗೆ ವಸ್ತ್ರ ಸಂಹಿತೆಯನ್ನು (Dress Code) ಕಡ್ಡಾಯಗೊಳಿಸಲಾಗಿದೆ. ಮೈ ಕಾಣುವಂತೆ ಬಟ್ಟೆ ಹಾಕ್ಕೊಂಡು ಬಂದರೆ ದೇವಾಲಯಗಳಿಗೆ (Temples) ಪ್ರವೇಶ ನೀಡಲ್ಲ ಎಂದು ಸೂಚನೆ ನೀಡಲಾಗಿದೆ.
Advertisement
ಉತ್ತರಾಖಂಡದ ಮಹಾನಿರ್ವಾಣಿ ಅಖಾರದ ಅಧೀನದಲ್ಲಿ ಬರುವ ದೇವಾಲಯಗಳಲ್ಲಿ ಈ ವಸ್ತ್ರ ಸಂಹಿತೆ ಕಡ್ಡಾಯ ಎನ್ನಲಾಗಿದೆ. ಮಹಾನಿರ್ವಾಣಿ ಅಖಾರದ ಕಾರ್ಯದರ್ಶಿ ಮತ್ತು ಅಖಿಲ ಭಾರತೀಯ ಅಖಾರ ಪರಿಷತ್ತಿನ ಅಧ್ಯಕ್ಷ ಶ್ರೀಮಹಾಂತ್ ರವೀಂದ್ರ ಪುರಿ ಅವರು, “ಮಹಿಳೆಯರು ಮತ್ತು ಹುಡುಗಿಯರು ತುಂಡುಡುಗೆ ಧರಿಸಿ ದೇವಾಲಯಗಳಿಗೆ ಪ್ರವೇಶಿಸುವಂತಿಲ್ಲ” ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕ್ರಿಕೆಟ್ ಬಾಲ್ ಮುಟ್ಟಿದ್ದಕ್ಕೆ ದಲಿತ ವ್ಯಕ್ತಿಯ ಹೆಬ್ಬೆರಳನ್ನೇ ಕತ್ತರಿಸಿದ ದುರುಳರು
Advertisement
Advertisement
ಹರಿದ್ವಾರದ ಕಂಖಾಲ್‌ನಲ್ಲಿರುವ ದಕ್ಷ ಪ್ರಜಾಪತಿ ದೇವಾಲಯ, ಪೌರಿ ಜಿಲ್ಲೆಯ ನೀಲಕಂಠ ಮಹಾದೇವ ದೇವಾಲಯ ಮತ್ತು ಡೆಹ್ರಾಡೂನ್‌ನ ತಪಕೇಶ್ವರ ಮಹಾದೇವ ದೇವಾಲಯಗಳಲ್ಲಿ ಈ ನಿಯಮ ಜಾರಿಗೊಳಿಸಲಾಗಿದೆ. ದೇವಾಲಯವು ಆತ್ಮಾವಲೋಕನಕ್ಕೆ ಸ್ಥಳವಾಗಿದೆಯೇ ಹೊರತು ಮನರಂಜನೆಗಾಗಿ ಅಲ್ಲ. ಹೀಗಾಗಿ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಲ್ಲಿ ನಿಯಮ ಪಾಲಿಸುವಂತೆ ಮನವಿ ಮಾಡಲಾಗಿದೆ ಎಂದು ರವೀಂದ್ರ ಅವರು ಹೇಳಿದ್ದಾರೆ.
Advertisement
ಮಹಿಳೆಯರು ಮತ್ತು ಹುಡುಗಿಯರು ದೇವಾಲಯದ ಪೂಜೆಗೆ ಆಗಮಿಸುವುದಿದ್ದರೆ, ಭಾರತೀಯ ಸಂಪ್ರದಾಯದ ಪ್ರಕಾರ ಬಟ್ಟೆಗಳನ್ನು ಧರಿಸಬೇಕು. ಆಗ ಮಾತ್ರ ಅವರಿಗೆ ದೇವಾಲಯಕ್ಕೆ ಪ್ರವೇಶ ಸಿಗುತ್ತದೆ. ದೇಹದ 80% ನಷ್ಟು ಭಾಗವನ್ನು ಮುಚ್ಚಿಕೊಂಡು ಬಂದರೆ ದೇವಾಲಯಗಳಿಗೆ ಬರಬಹುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಚಾಕ್ಲೇಟ್, ಆಟಿಕೆ ಬೇಕೆಂದು ಹಠ ಹಿಡಿದ ಮಗಳನ್ನು ಕಲ್ಲು ಎತ್ತಿ ಹಾಕಿ ಕೊಂದೇ ಬಿಟ್ಟ ಪಾಪಿ ತಂದೆ
ದಕ್ಷಿಣ ಭಾರತ ಮತ್ತು ಮಹಾರಾಷ್ಟ್ರದ ದೇವಾಲಯಗಳಲ್ಲಿ ಈ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದೆ. ಈಗ ಇಲ್ಲಿಯೂ ಈ ವ್ಯವಸ್ಥೆ ಜಾರಿಯಾಗುತ್ತಿದ್ದು, ದೇವಸ್ಥಾನಕ್ಕೆ ಬರುವ ಭಕ್ತರಿಗೆ ಯಾವುದೇ ಅಹಿತಕರ ಪರಿಸ್ಥಿತಿ ಎದುರಾಗಬಾರದು ಎಂದು ಅವರು ಹೇಳಿದ್ದಾರೆ.