ಲಕ್ನೋ: ರಾಷ್ಟ್ರಪತಿಯಲ್ಲ, ದೇಶದ ಪ್ರಧಾನ ಮಂತ್ರಿಯಾಗುವ ಕನಸಿದೆ ಎನ್ನುವ ಮೂಲಕ ಸಮಾಜವಾದಿ ಪಕ್ಷಕ್ಕೆ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಟಾಂಗ್ ಕೊಟ್ಟಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ರಾಷ್ಟ್ರಪತಿಯಾಗಲು ಬಯಸುತ್ತಿದ್ದೇನೆ ಎಂದು ಸಮಾಜವಾದಿ ಪಕ್ಷ (ಎಸ್‌ಪಿ) ವದಂತಿ ಹಬ್ಬಿಸುತ್ತಿದೆ. ಆದರೆ ರಾಷ್ಟ್ರಪತಿಯಲ್ಲ, ಉತ್ತರ ಪ್ರದೇಶದಲ್ಲಿ ಮತ್ತೆ ಸಿಎಂ ಆಗುವ ಇಲ್ಲವೇ ಪ್ರಧಾನಿಯಾಗುವ ಕನಸು ಹೊಂದಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿಗೆ ನಾಚಿಕೆಯಾಗಬೇಕು: ಮುಖ್ಯಮಂತ್ರಿಗಳ ವಾಗ್ದಾಳಿ
ಸಮಾಜವಾದಿ ಪಕ್ಷವು ನನ್ನನ್ನು ರಾಷ್ಟ್ರಪತಿಯಾಗಿಸುವ ಕನಸು ಬಿಡಬೇಕು. ನನಗೆ ನೆಮ್ಮದಿಯ ಜೀವನ ಬೇಡ ಬದಲಿಗೆ ಹೋರಾಟದ ಬದುಕು ಬೇಕು ಎಂದು ತಿಳಿಸಿದ್ದಾರೆ.
ನಮ್ಮ ಅಧಿಕಾರಾವಧಿಯಲ್ಲಿ ನಿರ್ಮಿಸಲಾದ ಸ್ಮಾರಕಗಳನ್ನು ಎಸ್‌ಪಿ ಮತ್ತು ಬಿಜೆಪಿ ಎರಡೂ ಸರ್ಕಾರಗಳು ನಿರ್ಲಕ್ಷಿಸಿವೆ. ಈ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆಯಲು ಮಿಶ್ರಾ ನೇತೃತ್ವದ ಬಿಎಸ್‌ಪಿ ನಿಯೋಗ ಯೋಗಿ ಅವರನ್ನು ಭೇಟಿ ಮಾಡಲು ತೆರಳಿತ್ತು ಎಂದು ಬಿಜೆಪಿ ಮತ್ತು ಬಿಎಸ್‌ಪಿ ಮೈತ್ರಿ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಇದನ್ನೂ ಓದಿ: ಸೂರ್ಯನ ಕೆಂಗಣ್ಣು – ದೆಹಲಿಯಲ್ಲಿ ದಾಖಲೆ ಪ್ರಮಾಣದ ತಾಪಮಾನ ದಾಖಲು
ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ಸಮಾಜವಾದಿ ಪಕ್ಷವೇ ಹೊಣೆ. ಮುಸ್ಲಿಮರು ಮತ್ತು ಇತರರ ಮೇಲೆ ನಡೆಯುತ್ತಿರುವ ಎಲ್ಲಾ ದೌರ್ಜನ್ಯಗಳಿಗೆ ಎಸ್‌ಪಿಯೇ ಹೊಣೆ ಎಂದು ಆರೋಪಿಸಿದ್ದಾರೆ.
ಈಚೆಗೆ ನಡೆದ ವಿಧಾನಸಭಾ ಚುನಾವಣೆಯ ವೇಳೆ ಬಿಎಸ್‌ಪಿ ತನ್ನ ಮತದಾರರನ್ನು ಬಿಜೆಪಿಗೆ ವರ್ಗಾಯಿಸಿದೆ. ಯುಪಿ ಚುನಾವಣೆಗೆ ಹಿಂದೂ-ಮುಸ್ಲಿಂ ಎಂದು ವಿಭಜಿಸಲು ಬಿಜೆಪಿ ಜೊತೆ ಕೈಜೋಡಿಸಿದೆ ಎಂದು ಎಂದು ಅಖಿಲೇಶ್ ಯಾದವ್ ಆರೋಪಿಸಿದ್ದರು. ಇದನ್ನೂ ಓದಿ: 10,900 ಅಕ್ರಮ ಧ್ವನಿವರ್ಧಕಗಳ ತೆರವು