ಬೆಂಗಳೂರು: ಅಪರಿಚಿತರಿಗೆ ಡ್ರಾಪ್ ಕೊಡುವ ಮುನ್ನ ಹಲವು ಬಾರಿ ಯೋಚಿಸಿ. ಯಾಕೆಂದರೆ ಸಿಲಿಕಾನ್ ಸಿಟಿಯಲ್ಲಿ ಡ್ರಾಪ್ ಕೇಳುವ ಖದೀಮರಿದ್ದಾರೆ.
ವೇಲು ಮತ್ತು ಜೋಸೆಫ್ ನಾಗವಾರದ ಬಳಿ ಎಣ್ಣೆ ಹೊಡೆದು ನಂತರ ಸ್ನೇಹಿತ ಜೋಸೆಫ್ ರನ್ನ ಎಚ್‍ಬಿಆರ್ ಲೇಔಟ್‍ಗೆ ಡ್ರಾಪ್ ಮಾಡಿದ್ದಾರೆ. ಸ್ನೇಹಿತನ ಬಿಟ್ಟು ವಾಪಸ್ ಬರುವ ವೇಳೆ ಸಿಗರೇಟ್ ಗಾಗಿ ಕಾರ್ ನಿಲ್ಲಿಸಿದ್ದಾರೆ. ಸಿಗರೇಟ್ ಸೇದಿ ಹೊರಡಬೇಕು ಅನ್ನುವಷ್ಟರಲ್ಲಿ ಯಾರೊ ಒಬ್ಬ ಡ್ರಾಪ್ ಕೇಳಿದ್ದಾನೆ.
Advertisement
Advertisement
25 ವರ್ಷದ ತಮಿಳು ಯುವಕನೊಬ್ಬ ಡ್ರಾಪ್ ಕೇಳಿದ್ದಾನೆ ಎಂದು ಹೇಳಲಾಗುತ್ತಿದೆ. ಆತ ಸರ್, ನಾಗವಾರ ಸಿಗ್ನಲ್ ತನಕ ಡ್ರಾಪ್ ಕೊಡಿ ಎಂದ ಕೇಳಿದ್ದಾನೆ. ವೇಲುಗೆ ಅಯ್ಯೋ ಅನ್ನಿಸಿ ಕಾರಿನಲ್ಲಿ ಕೂರಿಸಿಕೊಂಡು ಹೊರಟಿದ್ದಾರೆ. ನಾಗವಾರ ಸಿಗ್ನಲ್ ಬಂದಾಗ ವೇಲು ಕಾರ್ ನಿಲ್ಲಿಸಿದ್ದಾರೆ. ಆಗ ಯುವಕ ಸರ್ ಮುಂದೆ ಈರಣ್ಣನಪಾಳ್ಯ ಬಳಿ ಇಳಿದುಕೊಳ್ಳುತ್ತೇನೆ ಎಂದು ಹೇಳಿದ್ದಾನೆ.
Advertisement
ವೇಲು ಈರಣ್ಣನಪಾಳ್ಯದ ಕಡೆ ಕಾರು ಚಲಾಯಿಸಿದ್ದರು. ಈ ವೇಳೆ ಯುವಕ ಸಾರ್, ಯಾರೋ ಕಾರಿಗೆ ಡಿಕ್ಕಿ ಹೊಡೆದರು ಎಂದು ಹೇಳಿದ್ದಾನೆ. ಆಗ ವೇಲು ಕಾರ್ ನಿಲ್ಲಿಸಿ ಕೆಳಗೆ ಇಳಿದು ನೋಡಲು ಹೋಗಿದ್ದಾರೆ. ಈ ಸಂದರ್ಭದಲ್ಲಿ ಡ್ರೈವರ್ ಸೀಟಿಗೆ ಬಂದು ಕಾರನ್ನು ಯೂಟರ್ನ್ ಮಾಡಿ ವೇಗವಾಗಿ ಕಾರ್ ಸಮೇತ ಯುವಕ ಪರಾರಿಯಾಗಿದ್ದಾನೆ.
Advertisement
ವೇಲು ಡ್ರಾಪ್ ಕೊಟ್ಟ ತಪ್ಪಿಗೆ ಕಾರ್ ಕಳೆದುಕೊಂಡಿದ್ದಾರೆ. ಸದ್ಯ ವೇಲು ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv