‘ಡ್ರ್ಯಾಗನ್’ ಸಿನಿಮಾ (Dragon) ಬಳಿಕ ಪ್ರದೀಪ್ ರಂಗನಾಥನ್‌ಗೆ (Pradeep Ranganathan) ಅದೃಷ್ಟ ಖುಲಾಯಿಸಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ. ‘ಡ್ರ್ಯಾಗನ್’ ಆಯ್ತು ಈಗ ‘ಡ್ಯೂಡ್’ ಸಿನಿಮಾ ಕಥೆ ಹೇಳಲು ಶುರು ಮಾಡಿದ್ದಾರೆ. ಇದನ್ನೂ ಓದಿ:ಬ್ರೇಕಪ್ ಬಳಿಕ ಮಹತ್ವದ ನಿರ್ಧಾರ ಕೈಗೊಂಡ ತಮನ್ನಾ ಭಾಟಿಯಾ
‘ಡ್ಯೂಡ್’ (Dude) ಎಂಬ ತಮಿಳಿನ ಸಿನಿಮಾದಲ್ಲಿ ಪ್ರದೀಪ್ ರಂಗನಾಥನ್ (Pradeep Ranganathan) ಪವರ್‌ಫುಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಪೋಸ್ಟರ್ ರಿಲೀಸ್ ಕೂಡ ಆಗಿದೆ. ತಾಳಿ ಹಿಡಿದು ರಗಡ್ ಲುಕ್‌ನಲ್ಲಿ ಪ್ರದೀಪ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾಗೆ ಮಲಯಾಳಂ ನಟಿ ಮಮಿತಾ ಬೈಜು ನಾಯಕಿಯಾಗಿದ್ದಾರೆ. ಇದನ್ನೂ ಓದಿ:‘ಆಂಧ್ರ ಕಿಂಗ್’ ಆದ ಉಪೇಂದ್ರ ಕಟೌಟ್ ಮುಂದೆ ರಾಮ್ ಪೋತಿನೇನಿ ಸಂಭ್ರಮ- ಟೀಸರ್ ಔಟ್
View this post on Instagram
ಇದೊಂದು ಲವ್ ಸ್ಟೋರಿ ಸಿನಿಮಾ ಆಗಿದ್ದು, ಪ್ರದೀಪ್, ಮಮಿತಾ ಜೊತೆ ಶರತ್ ಕುಮಾರ್, ರೋಹಿಣಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪುಷ್ಪ 2 ನಿರ್ಮಿಸಿದ್ದ ಮೈತ್ರಿ ಮೂವಿ ಮೇಕರ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಯುವ ನಿರ್ದೇಶಕ ಕೀರ್ತೀಶ್ವರನ್ ನಿರ್ದೇಶನ ಮಾಡುತ್ತಿದ್ದಾರೆ.
View this post on Instagram
ಈ ಸಿನಿಮಾ ಜೊತೆ ನಯನತಾರಾ ನಿರ್ಮಾಣದ ‘ಲವ್ ಇನ್ಶೂರೆನ್ಸ್ ಕಂಪನಿ’ ಚಿತ್ರದಲ್ಲಿ ಕೃತಿ ಶೆಟ್ಟಿಗೆ ನಾಯಕನಾಗಿ ಪ್ರದೀಪ್ ನಟಿಸಿದ್ದಾರೆ. ಇನ್ನೂ ಕೆಲವು ಸಿನಿಮಾಗಳ ಅಧಿಕೃತ ಘೋಷಣೆ ಆಗಬೇಕಿದೆ.