ಬೆಂಗಳೂರು: ಬಿಬಿಎಂಪಿ ಚುನಾವಣಾ ತಯಾರಿ ಶುರುವಾಗಿದೆ. ಬೆಂಗಳೂರಿನಲ್ಲಿ ಮತದಾರರ ಸಂಖ್ಯೆ 6.33 ಲಕ್ಷ ಹೆಚ್ಚಾಗಿದೆ.
ಕಳೆದ ಬಾರಿ 71,22,169 ಮತದಾರರಿದ್ದರು. ಸಧ್ಯ 2022ರ ಜುಲೈ 31ರ ವರೆಗಿನ ವಿಧಾನಸಭಾ ಕ್ಷೇತ್ರವಾರು ಮತದಾರರ ಮಾಹಿತಿಯನ್ನು ವಾರ್ಡ್‌ವಾರು ಪುನರ್ ವಿಂಗಡಿಸಿ ಪಾಲಿಕೆಯ ಮತದಾರರ ಪಟ್ಟಿ ಸಿದ್ಧಗೊಳಿಸಲಾಗಿದೆ. ಈ ಬಾರಿ 79, 86 ಸಾವಿರದ 229 ಮಂದಿ ಇದ್ದಾರೆ. 41,09,496 ಪುರುಷರು, 37,97,497 ಮಹಿಳೆಯರು ಹಾಗೂ 1,401 ಇತರೆ ಮತದಾರರಿದ್ದಾರೆ. 243 ವಾರ್ಡ್‌ಗಳಲ್ಲಿ ಕನಿಷ್ಠ 18,604 ಮತ್ತು ಗರಿಷ್ಠ 51,653 ಮತದಾರರಿದ್ದಾರೆ ಅಂತಾ ಚುನಾವಣಾ ಆಯೋಗ ಹೇಳಿದೆ.
Advertisement
ಸಾಂದರ್ಭಿಕ ಚಿತ್ರ
Advertisement
ಈ ಸಂಬಂಧ ರಾಜ್ಯ ಚುನಾವಣಾ ಆಯೋಗ ಆಯುಕ್ತ ಬಸವರಾಜು ಮಾತನಾಡಿ, ಬೆಂಗಳೂರು ವ್ಯಾಪ್ತಿಯ ಮತದಾರರು ಹೆಸರು ಬಿಟ್ಟು ಹೋಗಿದ್ದರೆ, ಬದಲಾವಣೆ ಆಗಿದ್ದರೆ ಈಗಲೇ ಸರಿಮಾಡಿಕೊಳ್ಳಿ. ವೋಟರ್ ಹೆಲ್ಪ್‌ಲೈನ್ ಆಪ್ ಮೂಲಕ ವಿಧಾನಸಭಾ ಕ್ಷೇತ್ರವಾರು ನೋಂದಣಿ ಪರಿಶೀಲಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಗುತ್ತಿಗೆದಾರರ ಸಂಘ, ಕೆಂಪಣ್ಣ ವಿರುದ್ಧ 50 ಕೋಟಿ ಮಾನನಷ್ಟ ಮೊಕದ್ದಮೆ: ಮುನಿರತ್ನ
Advertisement
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತಾಡಿ, ಮತದಾರರ ಪಟ್ಟಿ ಆಕ್ಷೇಪಣೆಗೆ 7 ದಿನ ಕಾಲವಕಾಶ ಇದೆ. ಕಾಲವಕಾಶ ಕಡಿಮೆ ಇದ್ದು, ಮತದಾರರ ಕರಡು ಪ್ರಕಟ ಆದ ಮೇಲೆ ಚುನಾವಣೆ ದಿನಾಂಕ ನಿಗದಿಯಾಗಬೇಕಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಒಪ್ಪಿಗೆಯಿಲ್ಲದೇ ಅಪ್ರಾಪ್ತೆಯೊಂದಿಗೆ ಸೆಕ್ಸ್ ನಡೆಸಿದ ವ್ಯಕ್ತಿಗೆ 100 ವರ್ಷ ಜೈಲು!
Advertisement
ಬಿಬಿಎಂಪಿ ವಾರ್ಡ್ ಮೀಸಲಾತಿ ಸಂಬಂಧ ಸಲ್ಲಿಕೆ ಆಗಿದ್ದ ರಿರ್ಟ್ ಅರ್ಜಿಯನ್ನು ಸೆಪ್ಟೆಂಬರ್ 1ಕ್ಕೆ ಮುಂದೂಡಿರೋ ಹೈಕೋರ್ಟ್, ಸರ್ಕಾರ, ಬಿಬಿಎಂಪಿ, ಚುನಾವಣಾ ಆಯೋಗಕ್ಕೆ ನೋಟಿಸ್ ಕೊಟ್ಟಿದೆ.