ಇಂದಿನಿಂದ ಎರಡು ದಿನಗಳ ಕಾಲ ಡಾ.ವಿಷ್ಣುವರ್ಧನ್ ಹೆಸರಿನಲ್ಲಿ ಅವರ ಅಭಿಮಾನಿಗಳು ‘ಯಜಮಾನ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಿದೆ. ಹಲವು ತಂಡಗಳು ಈ ಲೀಗ್ ನಲ್ಲಿ ಭಾಗಿಯಾಗಿದ್ದು, ಕ್ರಿಕೆಟ್ ಪಂದ್ಯಾವಳಿಯನ್ನು ಡಾ.ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಇಂದು ಉದ್ಘಾಟಿಸಿದ್ದಾರೆ. ಇದನ್ನೂ ಓದಿ : ಪ್ರಶಾಂತ್ ನೀಲ್ -ಜ್ಯೂ.ಎನ್‌ಟಿಆರ್ ವಿವಾಹ ವಾರ್ಷಿಕೋತ್ಸವ ಸಂಭ್ರಮ ಹೇಗಿತ್ತು ಗೊತ್ತಾ?
Advertisement
ಐಪಿಎಲ್, ಸಿಸಿಎಲ್, ಬಿಸಿಎಲ್ ಹೀಗೆ ಹಲವು ಹೆಸರಿನಲ್ಲಿ ಸಿಲೆಬ್ರಿಟಿ ಕ್ರಿಕೆಟ್ ಲೀಗ್ ನೋಡಿದವರು ಇದೀಗ ಡಾ.ವಿಷ್ಣು ಹೆಸರಿನ ವೈಪಿಎಲ್ ನೋಡುವ ಭಾಗ್ಯವನ್ನು ವಿಷ್ಣು ಅವರ ಅಭಿಮಾನಿಗಳು ಕ್ರಿಕೆಟ್ ಪ್ರೇಮಿಗಳಿಗೆ ಕಲ್ಪಿಸಿಕೊಟ್ಟಿದ್ದು ವಿಶೇಷ. ಹಲವು ತಂಡಗಳು ಈ ವೈಪಿಎಲ್ ನಲ್ಲಿ ಈಗಾಗಲೇ ಭಾಗಿಯಾಗಿ ಕ್ರಿಕೆಟ್ ಆಡುತ್ತಿವೆ. ಇದನ್ನೂ ಓದಿ : ಯಶ್ ಮುಂದಿನ ಚಿತ್ರ ಯಾರ ಜೊತೆ? ಹೊರಬಿತ್ತು ಬಿಗ್ ನ್ಯೂಸ್
Advertisement
Advertisement
ಮೇ 7 ಮತ್ತು 8 ರಂದು ಪಂದ್ಯಾವಳಿ ಆಯೋಜನೆಯಾಗಿದ್ದು, ಇದರ ಪ್ರಯುಕ್ತವಾಗಿ ಥೀಮ್ ಸಾಂಗ್ ಕೂಡ ನಿನ್ನೆ ಬಿಡುಗಡೆಯಾಗಿದೆ. ಪ್ರಮೋದ್ ಮೆರವಂತೆ ಸಾಹಿತ್ಯ, ಹೇಮಂತ್ ಜೋಯಿಸ್ ಸಂಗೀತ ಹಾಗೂ ಚೇತನ್ ನಾಯ್ಕ ಅವರ ಕಂಠಸಿರಿಯಲ್ಲಿ ಈ ಥೀಮ್ ಸಾಂಗ್ ಮೂಡಿ ಬಂದಿದೆ. 12 ತಂಡಗಳಿಗೆ ಈ ಹಾಡು ಉತ್ತೇಜನ ನೀಡಲಿದೆ. ಇದನ್ನೂ ಓದಿ : ಹೆಸರಾಂತ ಹಾಸ್ಯ ಕಲಾವಿದ ಮೋಹನ್ ಜೂನೇಜ ಇನ್ನಿಲ್ಲ
Advertisement
ಇಂದು ಬೆಳಗ್ಗೆ ಬೆಂಗಳೂರಿನ ಮಾಗಡಿ ಮುಖ್ಯರಸ್ತೆಯ ಗಿಡ್ಡೇನಹಳ್ಳಿ ಗಾಡಿ ಬಳಿ ಪಂದ್ಯಗಳು ನಡೆಯಲಿದ್ದು, ಅಸಂಖ್ಯಾತ ಅಭಿಮಾನಿಗಳು ಈ ಮೈದಾನದಲ್ಲಿ ಜಮಾಯಿಸಿದ್ದಾರೆ. ‘ಯಜಮಾನ್ರೆಗೆ ಕ್ರಿಕೆಟ್ ಅಂದರೆ ಪ್ರಾಣ. ಈ ಹಿಂದೆ ವೃತ್ತಿ ನಿರತ ಕ್ರಿಕೆಟ್ ಆಟಗಾರರ ಜತೆಯೂ ಯಜಮಾನರಾದ ಡಾ.ವಿಷ್ಣು ಸರ್ ಕ್ರಿಕೆಟ್ ಆಡಿದ್ದಾರೆ. ಪ್ರತಿ ವರ್ಷವೂ ಅವರು ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜನೆ ಮಾಡುತ್ತಿದ್ದರು. ಅದನ್ನು ನಾವು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ’ ಅಂತಾರೆ ವೀರಕಪುತ್ರ ಶ್ರೀನಿವಾಸ್.
ಬೆಂಗಳೂರು ವಿಷ್ಣುಸೇನಾ ಸಮಿತಿಯ ಅಧ್ಯಕ್ಷ ಯದುನಂದನ್ ಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್, ಆನಂದ್ ಸೇರಿದಂತೆ ಹಲವು ಪದಾಧಿಕಾರಿಗಳು ಈ ಪಂದ್ಯಾವಳಿಯಲ್ಲಿ ಭಾಗಿಯಾಗಿದ್ದಾರೆ. ಈ ಪಂದ್ಯಾವಳಿಯ ನೇತೃತ್ವವನ್ನು ವೀರಕಪುತ್ರ ಶ್ರೀನಿವಾಸ್ ವಹಿಸಿಕೊಂಡಿದ್ದಾರೆ. ವೀರಲೋಕ ಸೇರಿದಂತೆ ಹಲವು ಟೀಮ್ ಗಳು ಈ ಪಂದ್ಯಾವಳಿಯಲ್ಲಿ ಭಾಗಿಯಾಗಿರುವುದು ವಿಶೇಷ.