ಬೆಂಗಳೂರು: ಪದ ಬಳಕೆ ಮಾಡುವಾಗ ಪದಗಳ ಗಾಂಭೀರ್ಯತೆಯನ್ನು ಅರ್ಥ ಮಾಡಿಕೊಳ್ಳಬೇಕು. ಕಲಾವಿದರು ಮಾಡಿದ ಕೆಲಸಕ್ಕೆ ಸರ್ಕಾರ ಗೌರವ ಕೊಟ್ಟಿದ್ದೇವೆ ಎಂದು ಸಿಎಂ ಕುಮಾರಸ್ವಾಮಿ ದಿವಂಗತ ವಿಷ್ಣುವರ್ಧನ್ ಅಳಿಯ ನಟ ಅನಿರುದ್ಧ್ ವಿರುದ್ಧ ಕಿಡಿಕಾರಿದ್ದರು. ಈಗ ಸಿಎಂ ಮಾತಿಗೆ ಅನಿರುದ್ಧ್ ಸ್ಪಷ್ಟನೆ ಕೊಟ್ಟಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ನಟ ಅನಿರುದ್ಧ, ನನಗೆ ವೈಯಕ್ತಿಕವಾಗಿ ಸಿಎಂ ಕುಮಾರಸ್ವಾಮಿ ಮೇಲೆ ತುಂಬಾ ಆತ್ಮೀಯತೆ ಇದೆ. ಅವರ ಮೇಲೆ, ಅವರ ಕುಟುಂಬದ ಮೇಲೆ ಸಾಕಷ್ಟು ಗೌರವವಿದೆ. ಅಂದು ಅಪ್ಪಾಜಿ ಮೃತಪಟ್ಟಿದ್ದಾಗ ಬಂದು ಎಲ್ಲಿ ಮಾಡಬೇಕು ಎಂದುಕೊಂಡಿದ್ದೀರ ಅಂತ ಕೇಳಿದ್ದರು. ಅದಕ್ಕೆ ನಾನು ನೇರವಾಗಿ ಬನಶಂಕರಿನಲ್ಲೇ ಅಂತ್ಯಸಂಸ್ಕಾರ ಮಾಡಬೇಕು ಎಂದು ಕೊಂಡಿದ್ದೇನೆ ಅಂತ ಹೇಳಿದ್ದೆ. ವಿಷ್ಣುವರ್ಧನ್ ದೊಡ್ಡ ಕಲಾವಿದರು, ಅವರಿಗಾಗಿ ವಿಶೇಷ ಜಾಗ ಆಗಬೇಕು ಅಂತ ಅಪ್ಪಾಜಿ ಅವರು ಅಂದರೆ ದೇವೇಗೌಡರು ಹೇಳಿದ್ದಾರೆ ಅಂತ ತಿಳಿಸಿದ್ದರೆಂದು ಅನಿರುದ್ಧ್ ಹೇಳಿದರು.
Advertisement
Advertisement
ಅದರಂತಯೇ ಸ್ಮಾರಕಕ್ಕೆ 2004ರಲ್ಲಿ ಕೇಸ್ ಹಾಕಿರುವ ಜಾಗವನ್ನು ಕೊಟ್ಟಿದ್ದರು. ಆದರೆ ಇಂದಿಗೂ ಸ್ಮಾರಕ ಆಗಿಲ್ಲ. ಒಂಬತ್ತು ವರ್ಷದ ತಾಳ್ಮೆ, ಶ್ರಮ ಇದೆ. ನಾಲ್ಕು ಗಂಟೆಗಳು ನಾನು ಅಮ್ಮ ಕಾದು ಕುಳಿತ್ತಿದ್ದವು. ಆದರೆ ಬ್ಯುಸಿ ಎಂದು ಪ್ರತಿಕ್ರಿಯಿಸಿಲಿಲ್ಲ. ಮಾರನೇ ದಿನ, ಒಂದುವಾರ, 10 ದಿನಗಳ ಬಳಿಕ ಕರೆಸಿ ಮಾತನಾಡಿದ್ದರು. ಆದರೂ ಇದುವರೆಗೂ ಮಾತನಾಡಿಲ್ಲ ಎಂದು ಬೇಸರಿಂದ ಅನಿರುದ್ಧ ಹೇಳಿದ್ದಾರೆ.
Advertisement
ನಾವು 5 ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದೇವೆ. ತುಂಬಾ ಕಚೇರಿ, ಅಧಿಕಾರಿಗಳ ಮನೆಗೆ ಅಲೆದಾಡಿದ್ದೇವೆ. ಏನು ಪ್ರಯೋಜವಾಗಿಲ್ಲ. ಅವರೇ ಸ್ಮಾರಕ ಮಾಡಬೇಕು ಎಂದು ಹೇಳಿ 11 ಕೋಟಿ ರೂ. ಹಣವನ್ನು ನೀಡಿದ್ದರು. ಇದುವರೆಗೂ ಸ್ಮಾರಕ ಆಗಿಲ್ಲ. ಸರ್ಕಾರ ಕೊಟ್ಟಿರುವ ಮಾತನ್ನ ನಡೆಸಿಕೊಡಲಿ ಇದನ್ನು ನಾನು ಕೈ ಮುಗಿದು, ಕಳಕಳಿಯಿಂದ ಕೇಳಿಕೊಳ್ಳುತ್ತಿದ್ದೇನೆ ಎಂದು ಮನವಿ ಮಾಡಿಕೊಂಡರು.
Advertisement
ಅಭಿಮಾನಿಗಳು ಪ್ರತಿದಿನ ಕರೆ ಮಾಡಿ ಸರ್ ಪ್ರತಿಭಟನೆ ಮಾಡೋಣ, ಸ್ಮಾರಕ ಇನ್ನು ಮಾಡಿಲ್ಲ ಅಂತ ಹೇಳುತ್ತಾರೆ. ನಾನು ಬೇಡ ಅಪ್ಪಾಜಿ ಅವರು ಶಾಂತಿಯಿಂದ ಇರಬೇಕೆಂದು ಇಷ್ಟ ಪಡುತ್ತಾರೆ. ಆದ್ದರಿಂದ ನಾವು ಗಲಾಟೆ ಮಾಡುವುದು ಬೇಡ ಎಂದು ಸಮಾಧಾನ ಮಾಡುತ್ತಿದ್ದೇನೆ. ಮನಷ್ಯನಿಗೆ ತಾಳ್ಮೆ ಅಂತ ಇರುತ್ತೆ. ತಾಳ್ಮೆ ಕಳೆದುಕೊಂಡಾಗ ಈ ರೀತಿಯಾಗಿ ಮಾತನಾಡುತ್ತಾನೆ. ನಾನು ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡಿಲ್ಲ. ಸರ್ಕಾರದ ಬಗ್ಗೆ ಮಾತನಾಡಿದ್ದೇವೆ. ಕ್ಷಮಿಸಿ ಅದನ್ನು ಅವರು ತಪ್ಪಾಗಿ ತಿಳಿದುಕೊಂಡಿದ್ದಾರೆ ಅಂತ ಅನಿರುದ್ಧ್ ಖಡಕ್ ಉತ್ತರ ಕೊಟ್ಟಿದ್ದಾರೆ.
ನಾನು ಮಾನ, ಮರ್ಯಾದೇ, ಗೌರವ ಈ ಮಾತನ್ನು ಸರ್ಕಾರದ ಬಗ್ಗೆ ಹೇಳಿದ್ದೇನೆ. ಕುಮಾರಸ್ವಾಮಿ ಬಗ್ಗೆ ಹೇಳಿಲ್ಲ. ಸ್ಮಾರಕದ ಮುಂದಾಳತ್ವವನ್ನು ಸಿಎಂ ವಹಿಸಿಕೊಳ್ಳಬೇಕು. ನಾವು ಅದರ ಬಗ್ಗೆ ಗಮನ ಕೊಡುತ್ತಿದ್ದೇವೆ ಎಂದು ಸುಮ್ಮನೆ ಕುಳಿತಿಕೊಂಡರೆ ಕೆಲಸ ಆಗದು. ರೈತರನ್ನು, ನಮ್ಮನ್ನು ಕರೆಸಿ ಮಾತನಾಡಬೇಕು. ನಾವು ಹೋದಾಗ ಸರ್ಕಾರ, ಸರ್ಕಾರಿ ಅಧಿಕಾರಿಗಳು ತುಂಬಾ ಗೌರವ, ಭರವಸೆ ಕೊಡುತ್ತಾರೆ. ಆದರೆ ಸ್ಮಾರಕದ ಕೆಲಸ ಏನು ನಡೆಯುತ್ತಿಲ್ಲ ಎಂದು ಗರಂ ಆಗಿ ಮಾತನಾಡಿದ್ದಾರೆ.
ಬ್ರಹ್ಮ, ವಿಷ್ಣು, ಮಹೇಶ್ವರ ಮೂವರು ಒಂದೇ ಕಡೆ ಇರುವುದಿಲ್ಲ. ಸರ್ಕಾರ ಸ್ಮಾರಕ ಮಾಡಿದರು ನಾನು ಖಂಡಿತ ಒಪ್ಪಲ್ಲ. ಸುಮಾರು 5 ಜಾಗವನ್ನು ತೋರಿಸಿದರು. ನಾವು ಏನು ಮಾತನಾಡದೇ ಒಪ್ಪಿಕೊಂಡಿದ್ದೇವು. ಆದರೆ ಸ್ಮಾರಕ ನಿರ್ಮಾಣದ ಕೆಲಸ ಪ್ರಾರಂಭಿಸುವ ಮೊದಲೇ ಏನೋ ಸಮಸ್ಯೆಯಾಗಿ ಕ್ಯಾನ್ಸಲ್ ಆಗುತ್ತಿತ್ತು. ಈಗ ಮೈಸೂರಿನಲ್ಲಿ ತೋರಿಸಿರುವ ಜಾಗದಲ್ಲಿ ಸ್ಮಾರಕ ನಿರ್ಮಾಣ ಮಾಡುತ್ತಿದ್ದೇವೆ. ಆದರೆ ಅಲ್ಲಿಗೂ ರೈತರು ಬಂದು ಕೇಸ್ ಹಾಕಿದ್ದಾರೆ. ಆದ್ದರಿಂದ ಕೆಲಸ ನಿಂತು ಹೋಗಿದೆ. ಹೀಗಾಗಿ ಈ ಬಗ್ಗೆ ವಿಚಾರಣೆ ಮಾಡಿ ಬೇಗ ಕೆಲಸ ಮುಂದುವರಿಸುವಂತೆ ಮಾಡಿಕೊಡಿ ಎಂದು ಕಳಕಳಿಯಿಂದ ಅನಿರುದ್ಧ್ ಕೇಳಿಕೊಂಡರು.
ಒಂಬತ್ತು ವರ್ಷಗಳಾದರೂ ಸ್ಮಾರಕ ನಿರ್ಮಾಣವಾಗಿಲ್ಲ. ಅಮ್ಮ ಎಷ್ಟು ದಿನ ಕಣ್ಣೀರು ಹಾಕಿದ್ದಾರೆ ಅಂತ ನನಗೆ ಗೊತ್ತು. ಸರ್ಕಾರ ಒಂದು ಕೆಲಸವನ್ನು ಮಾಡಿಕೊಡುತ್ತೇನೆ ಎಂದು ಗಡುವು ಕೊಟ್ಟಿರುತ್ತದೆ. ಆ ಗಡುವಿನಲ್ಲೇ ಕೆಲಸ ಮಾಡಿಕೊಡಬೇಕು. ವಿಷ್ಣು ಅಭಿಮಾನಿಗಳು ಸಿಂಹಗಳಿದಂತೆ ಅವರನ್ನು ಬಡಿದು ಎಬ್ಬಿಸಬೇಡಿ. ಆದ್ದರಿಂದ ಮುಂದಿನ ತಿಂಗಳ ಡಿಸೆಂಬರ್ 30ರವಗೆ ವಿಷ್ಣು ಸ್ಮಾರಕದ ಕೆಲಸ ಶುರುವಾಗಬೇಕು ಎಂದು ನಾನು ಪ್ರೀತಿಯಿಂದ ಗಡುವು ಕೊಡುತ್ತಿದ್ದೇನೆ ಎಂದು ಅನಿರುದ್ಧ್ ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv