-ನಿಖಿಲ್ ಸ್ಪರ್ಧೆ ಮಂಡ್ಯದ ಸ್ವಾಭಿಮಾನಕ್ಕೆ ಸವಾಲು
ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ನಟ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ಜಿಲ್ಲೆಯಲ್ಲಿ ವಿರೋಧ ವ್ಯಕ್ತಪಡಿಸಿ ಕಾಂಗ್ರೆಸ್ ಮುಖಂಡನಿಂದ ಎರಡನೇ ದಿನದ ಉಪವಾಸ ಸತ್ಯಾಗ್ರಹ ಮುಂದುವರಿದಿದೆ.
ಡಾಕ್ಟರ್ ರವೀಂದ್ರ ಅವರು ಭಾನುವಾರದಿಂದ ಮೂರು ದಿನಗಳ ಕಾಲ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಹೊರಗಿನವರಾದ ನಿಖಿಲ್ ಸ್ಪರ್ಧೆ ವಿರೋಧಿಸಿ ಸಾಂಕೇತಿಕ ಹೋರಾಟ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಪುತ್ರ ಎಂಬ ಕಾರಣಕ್ಕೆ ನಿಖಿಲ್ ಸ್ಪರ್ಧೆ ಸೂಕ್ತವಲ್ಲ ಎಂದು ಮೂರು ದಿನಗಳ ಕಾಲ ಮೌನ ಮತ್ತು ಉಪವಾಸ ಸತ್ಯಾಗ್ರಹವನ್ನು ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಮಾಡುತ್ತಿದ್ದಾರೆ.
ಡಾ.ರವೀಂದ್ರ, ದಕ್ಷಿಣ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಮತ್ತು ಭಾರತೀಯ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷರಾಗಿದ್ದಾರೆ. ಮಂಡ್ಯ ಜಿಲ್ಲೆಯ ಅಸ್ತಿತ್ವ, ಸ್ವಾಭಿಮಾನದ ಪ್ರಶ್ನೆ ಇದಾಗಿದ್ದು, ರಾಜಕೀಯವಾಗಿ ಸುಮಲತಾ ವಿರುದ್ಧ ಅಸಭ್ಯ ಪದ ಬಳಸುವ ರಾಜಕಾರಣಿಗಳ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಸ್ಥಳೀಯರನ್ನೇ ಅಭ್ಯರ್ಥಿ ಮಾಡುವಂತೆ ಆಗ್ರಹಿಸಿದ್ದಾರೆ. ಪ್ರತಿಭಟನಾನಿರತ ಡಾ.ರವೀಂದ್ರಗೆ ಕೈ ಕಾರ್ಯಕರ್ತರು ಸಾಥ್ ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv