ನವದೆಹಲಿ: ಭಾರತದಲ್ಲಿ ಚಳಿಗಾಲದಲ್ಲಿ 2ನೇ ಹಂತದ ಕೊರೊನಾ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ದೆಹಲಿಯ ಏಮ್ಸ್ ಆಸ್ಪತ್ರೆಯ ನಿರ್ದೇಶಕ ಮತ್ತು ಕೇಂದ್ರ ಸರ್ಕಾರದ ಟಾಸ್ಕ್ ಫೋರ್ಸ್ ಸದಸ್ಯ ರಣದೀಪ್ ಗುಲೇರಿಯಾ ಆತಂಕ ವ್ಯಕ್ತಪಡಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು ಚೀನಾದ ಭೀತಿ ಭಾರತಕ್ಕೂ ಕಾಡಲು ಆರಂಭಿಸಿದ್ದು, ಸೋಂಕು ಚಳಿಗಾಲದಲ್ಲಿ 2ನೇ ಹಂತದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ. ಕೊರೊನಾ ತಾತ್ಕಾಲಿಕವಲ್ಲ ವರ್ಷಕ್ಕೂ ಹೆಚ್ಚಿನ ಕಾಲದ ಸುದೀರ್ಘ ಯುದ್ಧ ಎಂದು ಭಾವಿಸಬೇಕು. ದೇಹದಲ್ಲಿ ಸುದೀರ್ಘ ಕಾಲದಲ್ಲಿರುವ ಸೋಂಕು ಮತ್ತೆ ಮತ್ತೆ ಕಾಣಿಸಿಕೊಳ್ಳಬಹುದು ಎಂದು ಡಾ.ರಣದೀಪ್ ಗುಲೇರಿಯಾ ಕಳವಳ ವ್ಯಕ್ತಪಡಿಸಿದ್ದಾರೆ.
Advertisement
Advertisement
ದೇಶದಲ್ಲಿ ಕೊರೊನಾ ಆಸ್ಪತ್ರೆಗಳ ಹಾಸಿಗೆಗಳನ್ನು ಹೆಚ್ಚಿಸಲಾಗುತ್ತಿದೆ. ವೆಂಟಿಲೇಟರ್ ವೈದ್ಯಕೀಯ ಸಿಬ್ಬಂದಿಗಳನ್ನು ಹೆಚ್ಚಿಸಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಿಂದ ಮಾತ್ರ ಕೊರೊನಾ ವಿನಾಶ ಸಾಧ್ಯವಿಲ್ಲ. ಕೊರೊನಾ ಹೋರಾಟಕ್ಕೆ ಖಾಸಗಿ ಆಸ್ಪತ್ರೆ ಬೆಂಬಲ ಬೇಕು ಎನ್ನುವ ಮೂಲಕ 2ನೇ ಹಂತದ ಹೋರಾಟದ ಮಾಹಿತಿಯನ್ನು ಅವರು ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ
Advertisement
ಕೊರೊನಾ ಸೂಚಿ ಭಾರತದಲ್ಲಿ ಇನ್ನೂ ಇಳಿಕೆ ಬಂದಿಲ್ಲ, ಸೋಂಕು ಏರಿಕೆಯಲ್ಲಿದೆ ಈ ನಡುವೆ ಲಾಕ್‍ಡೌನ್ ವಿನಾಯತಿ ನೀಡಿದ್ದು, ಮುಂದಿನ ದಿನಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಅಗತ್ಯ ಸಮುದಾಯಕ್ಕೆ ಸೋಂಕು ಹರಡುವಿಕೆ ತಡೆಯುವುದು ಆಸ್ಪತ್ರೆಗಳ ಕೈಲಿಲ್ಲ. ಸಮುದಾಯದ ಸೋಂಕು ಹರಡುವುದು ತಡೆಯುವುದು ಜನರ ಕೈಯಲ್ಲಿದೆ. ಆದ್ದರಿಂದ ಜನರು ಹೆಚ್ಚು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.