ಇಂದು ಮೈಸೂರಿನ ವಿಶ್ವವಿದ್ಯಾಲಯದ 102ನೇ ವಾರ್ಷಿಕೋತ್ಸವ ಘಟಿಕೋತ್ಸವದಲ್ಲಿ ನಟ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಇದೇ ವಿಶ್ವ ವಿದ್ಯಾಲಯವು 1976ರಲ್ಲಿ ಡಾ.ರಾಜ್ ಕುಮಾರ್ ಅವರಿಗೂ ಗೌರವ ಡಾಕ್ಟರೇಟ್ ಪ್ರದಾನ ಮಾಡಿತ್ತು. ಈ ಸಂದರ್ಭದಲ್ಲಿ ಡಾ.ರಾಜ್ ಕುಮಾರ್ ಗೌರವ ಡಾಕ್ಟರೇಟ್ ಪಡೆದ ಫೋಟೋ ಮತ್ತು ಇಂದು ಪುನೀತ್ ಅವರ ಪರವಾಗಿ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಗೌರವ ಡಾಕ್ಟರೇಟ್ ಪಡೆದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
Advertisement
ಅಂದಿನ ಫೋಟೋದಲ್ಲಿ ಡಾ.ರಾಜ್ ಕುಮಾರ್ ಜತೆ ಪಾರ್ವತಮ್ಮ ರಾಜ್ ಕುಮಾರ್ ಇದ್ದಾರೆ. ಇವತ್ತು ರಾಜ್ಯಪಾಲರಿಂದ ಈ ಗೌರವನ್ನು ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಇಂದು ಸ್ವೀಕರಿಸಿದರು. ಇದನ್ನೂ ಓದಿ : ಅಜಿತ್ ನಟನೆ ಬ್ಲಾಕ್ ಬಸ್ಟರ್ ‘ವಲಿಮೈ’ಸಿನಿಮಾ ಒಟಿಟಿಗೆ ಎಂಟ್ರಿ
Advertisement
Advertisement
ಮೈಸೂರು ವಿವಿಯ ಕ್ರಾಫಾರ್ಡ್ ಹಾಲ್ ನಲ್ಲಿ ನಡೆದ ಗೌರವ ಡಾಕ್ಟರೇಟ್ ಪ್ರಧಾನ ಕಾರ್ಯಕ್ರಮದಲ್ಲಿ ಡಾ. ರಾಜ್ ಕುಟುಂಬ ವರ್ಗದವರು ಹಾಜರಿದ್ದರು. ನಟ ರಾಘವೇಂದ್ರ ರಾಜ್ ಕುಮಾರ್ ಹಾಗೂ ಪತ್ನಿ, ನಟ ವಿನಯ್ ರಾಜ್ ಕುಮಾರ್, ರಾಜ್ ಕುಮಾರ್ ಮಗಳು ಲಕ್ಷ್ಮಿ ಗೋವಿಂದು ಹಾಗೂ ಮೊಮ್ಮಕ್ಕಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇದನ್ನೂ ಓದಿ : ಕನ್ನಡದ ಹುಡುಗನ ಚಿತ್ರಕ್ಕೆ ಹನ್ಸಿಕಾ ಮೊಟ್ವಾನಿ ಹೀರೋಯಿನ್
Advertisement
1976 ರಲ್ಲಿ ಡಾ. ರಾಜಕುಮಾರ್ ಗೆ ಮೈಸೂರು ವಿವಿಯಿಂದ ಡಾಕ್ಟರೇಟ್ ಗೌರವ ನೀಡಲಾಗಿತ್ತು. 2022 ರಲ್ಲಿ ಪುನೀತ್ ರಾಜಕುಮಾರ್ ಗೆ ಮರಣೋತ್ತರ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ. ಪುನೀತ್ ಅವರ ಸಮಾಜಮುಖಿ ಕೆಲಸಗಳು ಮತ್ತು ಸಿನಿಮಾ ರಂಗಕ್ಕೆ ನೀಡಿರುವ ಕೊಡುಗೆಯನ್ನು ಆಧರಿಸಿ, ಮೈಸೂರು ವಿವಿ ಈ ಗೌರವನ್ನು ನೀಡಿದೆ. ಈ ಸಂದರ್ಭದಲ್ಲಿ ಪುನೀತ್ ಪತ್ನಿ ಅಶ್ವಿನಿ ಭಾವುಕರಾಗಿಯೇ ಪುನೀತ್ ಪರವಾಗಿ ಗೌರವ ಡಾಕ್ಟರೇಟ್ ಸ್ವೀಕರಿಸಿದರು.