ಚಂದನವನದಿಂದ ಗುರುತಿಸಿಕೊಂಡು ನೆರೆಯ ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಮಿಂಚಿರುವ ಕನ್ನಡದ ಅನೇಕ ಪ್ರತಿಭೆಗಳಿವೆ. ಆ ಸಾಲಿಗೆ ನವ ಪ್ರತಿಭೆ ಮೈಸೂರಿನ ಅನಿಲ್ ಸಿದ್ದು ಸೇರ್ಪಡೆಯಾಗುತ್ತಾರೆ. ಹಾಗಂತ ಇವರಿಗೆ ತಮಿಳು ಚಿತ್ರರಂಗ ಹೊಸದೇನಲ್ಲ. ಇದಕ್ಕೂ ಮುನ್ನ ಮಣಿರತ್ನಂ ನಿರ್ದೇಶನದ ’ಕಾರ್ಟ್‌ವಿಲಯಾಡು’, ಎ.ಆರ್.ಮುರಗದಾಸ್ ಅವರ ’ಕತ್ತಿ’ ಹಾಗೂ ಶಂಕರ್ ಆಕ್ಷನ್ ಕಟ್ ಹೇಳಿರುವ ’ಐ’ ಚಿತ್ರಗಳಲ್ಲಿ ಸಣ್ಣ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಇದನ್ನೂ ಓದಿ : ಕೃತ್ಯದಲ್ಲಿ ನಾಯಕ ಆಸ್ಕರ್ ಕೃಷ್ಣ ಕೈವಾಡ
ಅನಿಲ್ ಸಿದ್ದು ಮಾಡಲಿಂಗ್ ಕ್ಷೇತ್ರದಿಂದ ಬಂದಿರುವ ಇವರು, ’ಮುಮ್ತಾಜ್’ ’ಸಿಲಿಕಾನ್ ಸಿಟಿ’ ಮತ್ತು ’ಪಡ್ಡೆಹುಲಿ’ಸಿನಿಮಾಗಳಲ್ಲಿ ನೆಗಟೀವ್ ಶೇಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೆಲ್ಲಾ ಅನುಭವ ಹಾಗೂ ತಮ್ಮದೆ ’ಗಾಡ್ ಕಿಸ್ ಯು’ ಎಂಬ ಯೂನಿಕ್ ಸ್ಟೈಲ್ ಮುಖಾಂತರ ಗುರುತಿಸಿಕೊಂಡಿದ್ದರಿಂದ ’ಎ+’ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದರು. ಹಾಗೆಯೇ ’ವಿರಾಟಪರ್ವ’ದಲ್ಲಿ ನಾಯಕಿ ಅನ್ವಿತಾ ಸಾಗರ್ ಜೋಡಿಯಾಗಿದ್ದು, ಅದು ಇಷ್ಟರಲ್ಲೆ ತೆರೆಗೆ ಬರಲಿದೆ. ಇತ್ತೀಚೆಗೆ ಬಿಡುಗಡೆಗೊಂಡು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ’ವರದ’ದಲ್ಲಿ ವಿನೋದ್ ಪ್ರಭಾಕರ್ ಎದುರು ಭ್ರಷ್ಟ ಶಾಸಕನಾಗಿ ನಟಿಸಿದ್ದರು.
ವಿಕ್ರಂ, ಸಿಂಬು, ವಿಜಯ್ ಸೇತುಪತಿ ಚಿತ್ರಗಳನ್ನು ನಿರ್ದೇಶನ ಮಾಡಿರುವ ವಿಜಯಚಂದರ್ ಈಗ ನಿರ್ಮಾಣ ಸಂಸ್ಥೆಯನ್ನು ತೆರೆದಿದ್ದಾರೆ. ಇವರ ನಟನೆಯನ್ನು ನೋಡಿ, ಕರೆಸಿಕೊಂಡು ತಾವು ನಿರ್ಮಾಣ ಮಾಡುತ್ತಿರುವ ಹೊಸ ಚಿತ್ರಕ್ಕೆ ಕಂಪೆನಿ ಸಿಇಓ ಪಾತ್ರವನ್ನು ನೀಡಿ ಮುಖ್ಯ ಪಾತ್ರಕ್ಕೆ ಆಯ್ಕೆ ಮಾಡಿದ್ದಾರೆ. ಇವರ ಅಧೀನದಲ್ಲಿ ಕೆಲಸ ಮಾಡುವ ಪಾತ್ರದಲ್ಲಿ ಹನ್ಸಿಕಾ ಮೋಟ್ವಾಣಿ ನಟನೆ ಇದೆ. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ರಿಯಲ್ ಸ್ಟೋರಿ : ಅಕ್ಕಿ ಡ್ರಮ್ ನಲ್ಲಿ ಕೊಲ್ಲಲ್ಪಟ್ಟ ನಿಜವಾದ ಕಾಶ್ಮೀರಿ ಪಂಡಿತ ಇವರು
ತಮಿಳನಲ್ಲಿ ಸೂಪರ್ ಹಿಟ್ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿರುವ ಕೆ.ಎಸ್.ರವಿಕುಮಾರ್ ಪುತ್ರರಾದ ಶರವಣ-ಶಬರಿ ಜಂಟಿಯಾಗಿ ನಿರ್ದೇಶನ ಮಾಡುತ್ತಿದ್ದಾರೆ. ಛಾಯಾಗ್ರಹಣ ಶಕ್ತಿ ಅವರದು. ಹೆಸರಾಂತ ತಂತ್ರಜ್ಘರು ಸಿನಿಮಾದಲ್ಲಿ ಕೆಲಸ ಮಾಡುತ್ತಿರುವುದು ವಿಶೇಷ. ಈಗಾಗಲೇ ಒಂದು ಹಂತದ ಚಿತ್ರೀಕರಣ ಮುಗಿದಿದೆ.