ಡಾ.ರಾಜ್ ಕುಮಾರ್ ಕುಟುಂಬದ ಸದಸ್ಯರು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದಾರೆ. ಸಿಎಂ ಅವರ ರೇಸ್ ಕೋರ್ಸ್ ನಿವಾಸದಲ್ಲಿ ಭೇಟಿಯಾದ ಡಾ.ರಾಜ್ ಕುಟುಂಬದ ಸದಸ್ಯರು ಕಂಠೀರವ ಸ್ಟುಡಿಯೋ ಜಾಗದಲ್ಲಿ ತಮ್ಮ ಕುಟುಂಬದ ಮೂವರ ಸಮಾಧಿಗಳು ಇರುವುದರಿಂದ ಅವುಗಳ ಅಭಿವೃದ್ಧಿ ಕುರಿತು ಚರ್ಚೆ ಮಾಡಿದ್ದಾರೆ.
Advertisement
ಡಾ.ರಾಜ್ ಕುಮಾರ್, ಪಾರ್ವತಮ್ಮ ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಅವರ ಸಮಾಧಿಗಳು ಕಂಠೀರವ ಸ್ಟುಡಿಯೋ ಒಂದೇ ಭಾಗದಲ್ಲಿವೆ. ಅಲ್ಲದೇ, ಈಗಾಗಲೇ ಡಾ.ರಾಜ್ ಕುಮಾರ್ ಪುಣ್ಯಭೂಮಿ ಟ್ರಸ್ಟ್ ಕೂಡ ಇದೆ. ಡಾ.ರಾಜ್ ಕುಮಾರ್ ಸ್ಮಾರಕಕ್ಕೆ ಸಂಬಂಧಿಸಿದಂತೆ ಹಲವು ಕೆಲಸಗಳೂ ನಡೆದಿವೆ. ಪಾರ್ವತಮ್ಮ ರಾಜ್ ಕುಮಾರ್ ಮತ್ತು ಪುನೀತ್ ಅವರ ಸಮಾಧಿ ಕೂಡ ಅದೇ ಸ್ಥಳದಲ್ಲೇ ಇರುವುದರಿಂದ, ಆ ಜಾಗವನ್ನು ಅಭಿವೃದ್ಧಿ ಪಡಿಸಲು ಡಾ.ರಾಜ್ ಕುಟುಂಬ ಯೋಜನೆಯೊಂದನ್ನು ಸಿದ್ಧಪಡಿಸಿದೆ. ಅದನ್ನೇ ಸಿಎಂ ಜೊತೆ ಚರ್ಚಿಸಲು ಕುಟುಂಬ ಭೇಟಿಯಾಗಿದೆ. ಇದನ್ನೂ ಓದಿ:ಬಾಯ್ಕಾಟ್ ಟ್ರೆಂಡ್ ಬೆಳೆಯದಂತೆ ಹತ್ತಿಕ್ಕಬೇಕು : ನಟ ಅರ್ಜುನ್ ಕಪೂರ್
Advertisement
Advertisement
ಡಾ.ರಾಜ್ ಪುತ್ರ ನಟ, ರಾಘವೇಂದ್ರ ರಾಜಕುಮಾರ್, ಪುನೀತ್ ಪತ್ನಿ ಅಶ್ವಿನಿ ಪುನಿತ್ ರಾಜಕುಮಾರ ಮತ್ತು ನಟ ಯುವ ರಾಜಕುಮಾರ್ ಸೇರಿದಂತೆ ಹಲವು ಸದಸ್ಯರು ಸಿಎಂ ಮನೆಗೆ ಆಗಮಿಸಿದ್ದರು. ರಾಜ್ ಕುಟುಂಬದಿಂದ ಸಿದ್ದಪಡಿಸಿದ ಪಿಪಿಟಿ ವೀಕ್ಷಣೆ ಮಾಡಿದ ಸಿಎಂ, PWD ಇಲಾಖೆಯಿಂದ ಯೋಜನೆ ಅಂದಾಜು ಮೊತ್ತ ತರಿಸಲು ಸೂಚನೆ ನೀಡಿದ್ದಾರೆ. PwD ಇಲಾಖೆಯಿಂದ ಯೋಜನೆಯ ರೂಪರೇಷೆ ತಯಾರಿಸುವುದಾಗಿ ಸಿಎಂ ಭರವಸೆ ಬಳಿಕ ಮತ್ತೊಂದು ಸುತ್ತಿನೆ ಸಭೆ ಮಾಡೋಣ ಎಂದಿದ್ದಾರಂತೆ ಬೊಮ್ಮಾಯಿ.