ಬೆಂಗಳೂರು: ಮಾರುತಿ ಕಾಲೇಜ್ ಆಫ್ ಡೆಂಟಲ್ ಸೈನ್ಸ್ ಆಂಡ್ ರಿಸರ್ಚ್, ಪ್ರಾಸ್ಥೋಡೆಂಟಿಕ್ಸ್ ವಿಭಾಗದ ಪ್ರಾಂಶುಪಾಲ ಹಾಗೂ ಮುಖ್ಯಸ್ಥರಾಗಿರುವ ಡಾ. ಜಯಕರ ಎಸ್.ಎಂ ಅವರನ್ನು ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿಯನ್ನಾಗಿ ಸೋಮವಾರ ನೇಮಿಸಲಾಗಿದೆ.
ಜಯಕರ ಅವರನ್ನು ಇಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿಯನ್ನಾಗಿ 4 ವರ್ಷಗಳ ಅವಧಿಗೆ ನೇಮಿಸಿದ್ದಾರೆ. ನಿರ್ಗಮಿಸುತ್ತಿರುವ ಪ್ರಭಾರ ಕುಲಪತಿಗಳಾದ ಪ್ರೊ. ಸಿಂಥಿಯಾ ಮೆನೆಜಸ್ ಅವರಿಂದ ಜಯಕರ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಈ ಬಗ್ಗೆ ರಾಜಭವನದಿಂದ ಅಧಿಸೂಚನೆ ಹೊರಡಿಸಲಾಗಿದೆ. ಇದನ್ನೂ ಓದಿ: ಸುಪ್ರೀಂನಿಂದ ಮಹಾರಾಷ್ಟ್ರದ ಎರಡೂ ಬಣದ ಶಾಸಕರಿಗೆ ತಾತ್ಕಾಲಿಕ ರಿಲೀಫ್
Advertisement
Advertisement
ಜಯಕರ ಅವರನ್ನು ಕುಲಪತಿಯನ್ನಾಗಿ ನೇಮಿಸುವ ಸಂದರ್ಭ ಕುಲಸಚಿವರಾದ ಪ್ರೊ.ಎಂ. ಕೊಟ್ರೇಶ್, ಕುಲಸಚಿವ(ಮೌಲ್ಯಮಾಪನ) ಪ್ರೊ.ಜೆ.ಟಿ ದೇವರಾಜು ಹಾಗೂ ಸಿಂಡಿಕೇಟ್ ಸದಸ್ಯರು ಉಪಸ್ಥಿತರಿದ್ದರು. ಇದನ್ನೂ ಓದಿ: ಎಐಎಡಿಎಂಕೆ ಕಿತ್ತಾಟ – ಪಳನಿಸ್ವಾಮಿ ತಾತ್ಕಾಲಿಕ ಬಾಸ್, ಪನ್ನೀರ್‌ಸೆಲ್ವಂ ಉಚ್ಛಾಟನೆ