ಮೈಸೂರು: ನಾನು ಸದ್ಯಕ್ಕೆ ಟಿ.ನರಸೀಪುರ ಕ್ಷೇತ್ರದಲ್ಲೆ ಇದ್ದೀನಿ. ಹೊಸ ಕ್ಷೇತ್ರವನ್ನ ಹುಡುಕುವ ಪ್ರಯತ್ನ ಮಾಡಿಲ್ಲ ಅಂತ ಲೋಕೋಪಯೋಗಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮಗ ರಾಜಕೀಯದಲ್ಲೆ ಸಕ್ರೀಯವಾಗಿದ್ದಾನೆ. ಚುನಾವಣಾ ಕಣಕ್ಕೆ ಬರಬೇಕೊ ಬೇಡವೋ ಅಂತ ಜನ ತೀರ್ಮಾನ ಮಾಡ್ತಾರೆ. ಜನ ಬಯಸುವುದರ ಜೊತೆ ಪಕ್ಷದ ಅನುಮೋದನೆ ಬೇಕಿದೆ. ಆ ನಂತರವಷ್ಟೇ ಈ ಬಗ್ಗೆ ಚರ್ಚೆ ಮಾಡೋಣ. ಸದ್ಯಕ್ಕೆ ಕ್ಷೇತ್ರ ಬದಲಾವಣೆಯ ಬಗ್ಗೆ ಯಾವುದೇ ಚರ್ಚೆ ಬೇಡ. ಆ ಸಮಯ ಬಂದಾಗ ಮಾತನಾಡೋಣ ಅಂದ್ರು.
Advertisement
ಇದೇ ವೇಳೆ ಬಿಜೆಪಿ ಜಾಥಾದ ಬಗ್ಗೆ ಮಾತನಾಡಿದ ಸಚಿವರು, ಬಿಜೆಪಿ ಜಾಥಾ ಕುರಿತು ಕಾಂಗ್ರೆಸ್ ನದ್ದು ಹಸ್ತಕ್ಷೇಪ ಇಲ್ಲ. ಅನುಮತಿ ಕೊಡುವುದು ಬಿಡುವುದು ಪೊಲೀಸ್ ಹಾಗೂ ಗೃಹ ಇಲಾಖೆಗೆ ಬಿಟ್ಟದ್ದು. ಪ್ರತಿಭಟನೆ ಮಾಡಲು ಎಲ್ಲರಿಗೂ ಸಾಂವಿಧಾನಿಕ ಹಕ್ಕು ಇದೆ. ಆದರೆ ಅವರ ಹೋರಾಟಗಳು ಕಾನೂನಿನ ವ್ಯಾಪ್ತಿಯಲ್ಲಿ ಒಳಪಡಬೇಕಿದೆ. ಅವಕಾಶ ನೀಡಿಲ್ಲ ಅನ್ನೋದು ಪೊಲೀಸ್ ಇಲಾಖೆ ವಿವೇಚನೆಗೆ ಬಿಟ್ಟದ್ದು. ಇಲ್ಲಿ ಕಾಂಗ್ರೆಸ್ ಪಕ್ಷ ಅಥವ ಸರ್ಕಾರದ ಹಸ್ತಕ್ಷೇಪದ ಪ್ರಸ್ತಾಪವೇ ಬರೋಲ್ಲ ಅಂತ ಹೇಳಿದ್ರು.
Advertisement
ಇದನ್ನೂ ಓದಿ: ಸಚಿವ ಮಹದೇವಪ್ಪ ಪುತ್ರ ಈಗ ಆಗಿದ್ದಾರೆ ಡಾ. ಸುನೀಲ್‍ಬೋಸ್!
Advertisement
ಈ ಹೇಳಿಕೆ ನೀಡಲು ಕಾರಣ ಏನು?
ಮಗ ಸುನೀಲ್ ಬೋಸ್ ಅವರನ್ನು 2018ರ ಚುನಾವಣೆಯಲ್ಲಿ ಕಣಕ್ಕೆ ಇಳಿಸಲು ಮಹದೇವಪ್ಪ ಮುಂದಾಗಿದ್ದು, ಈ ಸಂಬಂಧ ತಮ್ಮ ಟಿ. ನರಸೀಪುರ ಕ್ಷೇತ್ರವನ್ನು ಬಿಟ್ಟುಕೊಡುತ್ತಾರೆ. ಅಷ್ಟೇ ಅಲ್ಲದೇ ಬೆಂಗಳೂರಿನ ಸಿ.ವಿ. ರಾಮನ್ ನಗರ ಕ್ಷೇತ್ರದತ್ತ ಅವರು ಕಣ್ಣು ಹಾಕಿದ್ದಾರೆ ಎನ್ನುವ ಸುದ್ದಿ ಕಾಂಗ್ರೆಸ್ ಮೂಲಗಳಿಂದ ಮಾಧ್ಯಮಗಳಿಗೆ ಸಿಕ್ಕಿತ್ತು. ಮೈಸೂರಿನಲ್ಲಿ ಕ್ಷೇತ್ರಗಳು ಸಿಗುವುದು ಕಷ್ಟವಾಗಿರುವ ಹಿನ್ನೆಲೆಯಲ್ಲಿ ಮೀಸಲು ಕ್ಷೇತ್ರವಾಗಿರುವ ಸಿವಿ ರಾಮನ್ ನಗರದ ಮೇಲೆ ಮಹದೇವಪ್ಪ ಕಣ್ಣು ಹಾಕಿದ್ದಾರೆ ಎನ್ನುವ ಸುದ್ದಿಗಳು ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಇಂದು ಈ ಮೇಲಿನ ಪ್ರತಿಕ್ರಿಯೆ ನೀಡಿದ್ದಾರೆ.
Advertisement
ಇದನ್ನೂ ಓದಿ: ಸಿಎಂ, ಮಹದೇವಪ್ಪ ಪುತ್ರಗೆ ಟಿಕೆಟ್ ಭಾಗ್ಯ: ಎಲ್ಲಿ ಕಣಕ್ಕೆ ಇಳಿಯಲಿದ್ದಾರೆ ಗೊತ್ತಾ?