ಬೆಂಗಳೂರು: ಹಣಕಾಸಿನ ವಿಚಾರಕ್ಕಾಗಿ ತಂದೆ, ತಾಯಿಯನ್ನು ಟೆಕ್ಕಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.
ತಂದೆ ನವೀನ್ ಚಂದ್ರ ಭಟ್, ತಾಯಿ ಶಾಮಲಾ ಭಟ್ ಕೊಲೆಯಾದ ಪೋಷಕರು. ಆರೋಪಿಯನ್ನು ರೋಹನ್ ಭಟ್ ಎಂದು ಗುರುತಿಸಲಾಗಿದ್ದು, ಟೆಕ್ಕಿಯಾಗಿದ್ದ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಗಾಡಿ ಟಚ್ ಆಗಿದ್ದಕ್ಕೆ ಕಿರಿಕ್ – ಕಾರ್ ಬಾನೆಟ್ ಮೇಲೆ ಗೂಡ್ಸ್ ಚಾಲಕನನ್ನು 1 ಕಿ.ಮೀ ಎಳೆದೊಯ್ದು ದುರ್ವರ್ತನೆ
ಚಾಕುವಿನಿಂದ ಚುಚ್ಚಿ ತಂದೆ ಹಾಗೂ ತಾಯಿಯನ್ನು ಕೊಲೆ ಮಾಡಿದ್ದು, ಹಣಕಾಸಿನ ವಿಚಾರವಾಗಿ ಹತ್ಯೆಯಾಗಿರಬಹುದು ಎಂದು ಶಂಕಿಸಲಾಗಿದೆ. ಘಟನೆ ಸಂಬಂಧ ಹೆಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ.

