-ಗುಂಡ್ಲುಪೇಟೆ ತಾಲೂಕಿನಲ್ಲಿ ಎರಡು ಪ್ರತ್ಯೇಕ ಕೊಲೆ
ಚಾಮರಾಜನಗರ: ಜಿಲ್ಲೆಯಲ್ಲಿ ಅನೈತಿಕ ಸಂಬಂಧ ಮತ್ತು ಪ್ರೀತಿ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಕೊಲೆಯಾಗಿರುವ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ನಡೆದಿದೆ.
ವಡ್ಡನಹೊಸಹಳ್ಳಿ ನಿವಾಸಿ ಶಿವನಾಗಶೆಟ್ಟಿ (42) ಹಾಗೂ ಹೊಸೂರು ಗ್ರಾಮದ ಗಿರೀಶ್(26) ಕೊಲೆಯಾದ ವ್ಯಕ್ತಿಗಳು. ಮೃತ ಶಿವನಾಗಶೆಟ್ಟಿ ಪತ್ನಿ ರತ್ನಮ್ಮ ಅದೇ ಗ್ರಾಮದ ಮಣಿ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಈ ವಿಚಾರ ಪತಿಗೆ ಗೊತ್ತಾಗುತ್ತಿದ್ದಂತೆ ತನ್ನ ಪ್ರಿಯಕರ ಮಣಿ ಜೊತೆ ಸೇರಿಕೊಂಡು ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾಳೆ.
ಇನ್ನೂ ಹೊಸೂರು ಗ್ರಾಮದಲ್ಲಿ ಗಿರೀಶ್ ಅದೇ ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಈ ಬಗ್ಗೆ ಯುವತಿಯ ಅಣ್ಣ ಸುರೇಶ್‍ನಿಗೆ ಗೊತ್ತಾಗಿದೆ. ಇದರಿಂದ ಕೋಪಗೊಂಡ ಸುರೇಶ್, ಗಿರೀಶ್ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ.
ಎರಡು ಪ್ರತ್ಯೇಕ ಕೊಲೆಗಳ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಗುಂಡ್ಲುಪೇಟೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ಅಕ್ರಮ ಸಂಬಂಧಕ್ಕೆ ಪತಿಯನ್ನು ಕೊಂದ ಪತ್ನಿ ರತ್ನಮ್ಮ ಹಾಗೂ ಪ್ರಿಯಕರ ಮಣಿಯನ್ನು ಬಂಧಿಸಿಸಲಾಗಿದೆ. ಇತ್ತು ಗಿರೀಶ್‍ನನ್ನು ಕೊಂದ ಸುರೇಶ್‍ನನ್ನು ಅರೆಸ್ಟ್ ಮಾಡಲಾಗಿದೆ.
ಎರಡು ಕೊಲೆಗಳಿಗೆ ಸಂಬಂಧಿಸಿದಂತೆ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.