ಸಿಕ್ಸರ್, ಬೌಂಡರಿಗಳ ಸುರಿಮಳೆ – ಇಶಾನ್ ಕಿಶನ್ ಸ್ಫೋಟಕ ದ್ವಿಶತಕ

Public TV
2 Min Read
Ishan Kishan 2

ಢಾಕಾ: ಸಿಕ್ಸರ್, ಬೌಂಡರಿಗಳ ಸುರಿಮಳೆಯೊಂದಿಗೆ ಟೀಂ ಇಂಡಿಯಾ (Team India) ಆಟಗಾರ ಇಶಾನ್ ಕಿಶನ್ (Ishan Kishan) ಸ್ಫೋಟಕ ದ್ವಿಶತಕ ಸಿಡಿಸಿ ಹೊಸ ದಾಖಲೆ ಬರೆದಿದ್ದಾರೆ.

ಬಾಂಗ್ಲಾದೇಶ (Banglasesh) ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಅಬ್ಬರಿಸಿದ ಇಶಾನ್ ಕಿಶನ್ ಅತೀ ಕಡಿಮೆ ಎಸೆತಗಳಲ್ಲಿ ದ್ವಿತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಇದನ್ನೂ ಓದಿ: ರೋಹಿತ್ ಶರ್ಮಾ ಈಗ ಸಿಕ್ಸರ್ ವೀರ – ಟಾಪ್ 2 ಸ್ಥಾನದಲ್ಲಿ ಹಿಟ್‌ಮ್ಯಾನ್

ಟಾಸ್ ಸೋತು ಕೆ.ಎಲ್. ರಾಹುಲ್ (Kl Rahul) ನಾಯಕತ್ವದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ಉತ್ತಮ ಶುಭಾರಂಭ ನೀಡಿತು. ಆರಂಭಿಕನಾಗಿ ಕಣಕ್ಕಿಳಿದ ಇಶಾನ್ ಕಿಶನ್ ಆರಂಭದಿಂದಲೇ ಅಬ್ಬರಿಸಲು ಶುರು ಮಾಡಿದ್ರು. ಸಿಕ್ಸರ್ ಬೌಂಡರಿಗಳ ಮಳೆ ಸುರಿಸುತ್ತಾ ಬಾಂಗ್ಲಾ ಬೌಲರ್‌ಗಳ ಬೆವರಿಳಿಸಿದರು. ಇದನ್ನೂ ಓದಿ: ಬೆರಳಲ್ಲಿ ರಕ್ತಸುರಿಯುತ್ತಿದ್ದರೂ ಕೊನೆವರೆಗೆ ಹೋರಾಡಿದ ಹಿಟ್‌ಮ್ಯಾನ್ – ರಾಹುಲ್ ಸಲಾಂ

160.30 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಇಶಾನ್ ಕಿಶನ್ 131 ಎಸೆತಗಳಲ್ಲಿ ಬರೋಬ್ಬರಿ 24 ಬೌಂಡರಿ ಹಾಗೂ 10 ಸಿಕ್ಸರ್ ಗಳೊಂದಿಗೆ 210 ರನ್ ಸಿಡಿಸಿ (126 ಎಸೆತಗಳಲ್ಲಿ 200 ರನ್‌) ಮಿಂಚಿದರು. ಇದಕ್ಕೆ ಉತ್ತಮ ಸಾತ್ ನೀಡಿದ ವಿರಾಟ್ ಕೊಹ್ಲಿ (Virat Kohli) ಶತಕ ಬಾರಿಸಿ ಶೈನ್ ಆಗಿದ್ದಾರೆ.

Ishan Kishan 1

ಟಾಪರ್ಸ್ ಲಿಸ್ಟ್‌ನಲ್ಲಿ ಇಶಾನ್ ಶೈನ್: ಇಶಾನ್ ಕಿಶನ್ ಭರ್ಜರಿ ದ್ವಿಶತಕ ಸಿಡಿಸುವ ಜೊತೆಗೆ ಟಾಪರ್ಸ್ ಲಿಸ್ಟ್‌ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. 2014ರಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) 173 ಎಸೆತಗಳಲ್ಲಿ 264 ರನ್ ಸಿಡಿಸಿದ್ದು ಈವರೆಗಿನ ದಾಖಲೆಯಾಗಿದೆ. ಇದಕ್ಕೂ ಮುನ್ನ ರೋಹಿತ್ ಶರ್ಮಾ 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ 158 ಎಸೆತಗಳಲ್ಲಿ 209 ರನ್ ಹಾಗೂ 2017ರಲ್ಲಿ ಶ್ರೀಲಂಕಾ ವಿರುದ್ಧ 153 ಎಸೆತಗಳಲ್ಲಿ 208 ರನ್‌ಗಳನ್ನು ಸಿಡಿಸಿದ್ದರು. ನಂತರದಲ್ಲಿ ಮಾರ್ಟೀನ್ ಗಪ್ಟಿಲ್ 163 ಎಸೆತಗಳಲ್ಲಿ 237ರನ್, ವೀರೇಂದ್ರ ಸೆಹ್ವಾಗ್ 149 ಎಸೆತಗಳಲ್ಲಿ 219, ಕ್ರಿಸ್ ಗೇಲ್ 147 ಎಸೆತಗಳಲ್ಲಿ 215, ಫಖರ್ ಜಮಾನ್ 156 ಎಸೆತಗಳಲ್ಲಿ 210 ರನ್, ಸಚ್ಚಿನ್ ತೆಂಡೂಲ್ಕರ್ 147 ಎಸೆತಗಳಲ್ಲಿ ಅಜೇಯ 200ರನ್ ಚಚ್ಚಿದ್ದರು. ಇದೀಗ 131 ಎಸೆತಗಳಲ್ಲಿ 210 ರನ್‌ ಸಿಡಿಸಿದ್ದು ಇಶಾನ್ ದಾಖಲೆಯಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *