ಡೆಹ್ರಾಡೂನ್: ಉತ್ತರಾಖಂಡ ವಿಧಾನಸಭೆ ಚುನಾವಣೆಯ ಮುಖ್ಯಸ್ಥ, ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಡಬಲ್ ಇಂಜಿನ್ ಸರ್ಕಾರವು ಜನರಿಗೆ ಉಚಿತ ಪಡಿತರ ಮತ್ತು ಲಸಿಕೆಗಳನ್ನು ಒದಗಿಸಿದೆ ಎಂದಿದ್ದಾರೆ
ಬಾಜ್‍ಪುರ, ಉಧಮ್‍ಪುರ ಸಿಂಗ್ ನಗರದ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಡಬಲ್ ಇಂಜಿನ್ ಸರ್ಕಾರವು ಜನರಿಗೆ ಉಚಿತ ರೇಷನ್, ಲಸಿಕೆಗಳನ್ನು ಒದಗಿಸಿದೆ. ನಮ್ಮ ಸರ್ಕಾರವು ಜನರಿಗೆ ವಿವಿಧ ವಲಯಗಳಲ್ಲಿ ಅನೇಕ ಯೋಜನೆಗಳನ್ನು ಪ್ರಾರಂಭಿಸಿದೆ ಮತ್ತು ಜನರಿಗೆ ನೇರ ಪ್ರಯೋಜನಗಳನ್ನು ನೀಡಿದೆ ಎಂದು ಹೇಳಿದ್ದಾರೆ.
Advertisement
Advertisement
ಈಗಾಗಲೇ ಜನ ಬಿಜೆಪಿಯನ್ನು ಪೂರ್ಣ ಬಹುಮತದಿಂದ ಗೆಲ್ಲಿಸಲು ಮನಸ್ಸು ಮಾಡಿದ್ದಾರೆ. ತಮ್ಮ ಪ್ರಣಾಳಿಕೆಯಲ್ಲಿ ಯುವಕರಿಗೆ 50 ಸಾವಿರ ಸರ್ಕಾರಿ ಉದ್ಯೋಗ, ಬಡವರಿಗೆ ಪ್ರತಿ ವರ್ಷ ಮೂರು ಎಲ್‍ಪಿಜಿ ಸಿಲಿಂಡರ್‍ಗಳನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಜೊತೆಗೆ ಗುಡ್ಡಗಾಡು ಪ್ರದೇಶದಲ್ಲಿ ದುಡಿದು ಜೀವನ ನಡೆಸಲು ಸಾಧ್ಯವಾಗದ ಗರ್ಭಿಣಿಯರಿಗೆ 40 ಸಾವಿರ ಹಾಗೂ ಹಿರಿಯ ನಾಗರಿಕರ ಪಿಂಚಣಿಯನ್ನು 3,600ಕ್ಕೆ ಹೆಚ್ಚಿಸಲಾಗುವುದು ಎಂದಿದ್ದಾರೆ.
Advertisement
ಕೇಂದ್ರ ಮತ್ತು ರಾಜ್ಯಗಳೆರಡೂ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ತಲಾ 6,000 ನೀಡಲು ನಿರ್ಧರಿಸಿದ್ದೇವೆ. ಅದು ಪ್ರತಿಯೊಬ್ಬ ರೈತರ ಬ್ಯಾಂಕ್ ಖಾತೆಗೆ 12,000 ನಿಧಿ ವರ್ಗಾವಣೆಯ ಲಾಭವನ್ನು ವಿಸ್ತರಿಸುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪಬ್ಲಿಕ್ ಟಿವಿಗೆ ದಶಕದ ಸಂಭ್ರಮ – ಶಾಂತಿಧಾಮಕ್ಕೆ 25 ಲಕ್ಷ ರೂ. ವಿತರಣೆ
Advertisement
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪುಷ್ಕರ್ ಸಿಂಗ್ ಧಮಿ ಅವರು ಖತಿಮಾದಿಂದ ಸ್ಪರ್ಧಿಸಲಿದ್ದಾರೆ. ಉತ್ತರಾಖಂಡದ 70 ಸದಸ್ಯ ಬಲದ ವಿಧಾನಸಭೆಗೆ ಫೆಬ್ರವರಿ 14 ರಂದು ಮತದಾನ ನಡೆಯಲಿದ್ದು, ಪ್ರಸ್ತುತ ಬಿಜೆಪಿ 57 ಶಾಸಕರನ್ನು ಹೊಂದಿದೆ. ಇದನ್ನೂ ಓದಿ: ರಾಜಧಾನಿಗೂ ಕಾಲಿಟ್ಟ ಹಿಜಬ್ ವಿವಾದ – ಹಿಜಬ್ ತೆಗೆಯುವಂತೆ ಮಕ್ಕಳಿಗೆ ಶಿಕ್ಷಕರಿಂದ ಒತ್ತಾಯ
Pushkar Singh Dhami, Double Engine Government, Free Ration, Vaccine, Uttarakhand