ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಇಷ್ಟು ದಿನ ಕಾತುರದಿಂದ ಕಾಯುತ್ತಿದ್ದ ದಿ ಮೋಸ್ಟ್ ಎಕ್ಸ್ ಪೆಕ್ಟೆಡ್ ಕೆಜಿಎಫ್-2 ಸಿನಿಮಾ ಇಂದು ವಿಶ್ವಾದ್ಯಂತ ತೆರೆಕಂಡಿದೆ. ಸಿನಿಮಾ ಜೊತೆಗೆ ಅಭಿಮಾನಿಗಳಿಗೆ ತಿಳಿಯದೇ ಇರುವ ಮತ್ತೊಂದು ವಿಚಾರ ರಿವೀಲ್ ಆಗಿದೆ.
ಹೌದು, ಯಶ್ ತಂದೆ ಅರುಣ್ ಕುಮಾರ್ ಮತ್ತು ತಾಯಿ ಪುಷ್ಪ ಅವರಿಗೆ ಇಂದು 37ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮ. ಇತ್ತೀಚೆಗಷ್ಟೇ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಯಶ್ ಪೋಷಕರು, 1985ರ ಏಪ್ರಿಲ್ 14ರಂದು ತಾವು ವಿವಾಹವಾಗಿದ್ದು, 37 ವರ್ಷ ಕಳೆಯುತ್ತದೆ. ಇದೇ ದಿನ ಯಶ್ ನಟಿಸಿರುವ ಕೆಜಿಎಫ್-2 ಸಿನಿಮಾ ಬಿಡುಗಡೆಯಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸೊಸೆ ಬಗ್ಗೆ ಯಶ್ ತಂದೆ, ತಾಯಿ ಮನದಾಳದ ಮಾತು
ಇದೇ ವೇಳೆ ವಿವಾಹ ವಾರ್ಷಿಕೋತ್ಸವದ ದಿನದಂದೇ ಚಿತ್ರವನ್ನು ಬಿಡುಗಡೆಗೊಳಿಸಬೇಕೆಂಬ ಪ್ಲಾನ್ ಹೊಂದಿರಲಿಲ್ಲ. ಅಲ್ಲದೇ ಇದರ ಬಗ್ಗೆ ನಾವು ಊಹಿಸಿ ಕೂಡ ಇರಲಿಲ್ಲ. ಆದರೆ ಈ ದಿನದಂದೇ ಕೆಜಿಎಫ್-2 ಸಿನಿಮಾ ಬಿಡುಗಡೆಯಾಗುತ್ತಿರುವುದು ನಮಗೆ ಸಂತಸ ತರಿಸಿದೆ. ಮೊದಲಿನಿಂದಲೂ ಯಶ್ ಹಾಗೂ ನಮ್ಮ ಮಗಳು ಚಿಕ್ಕವರಾಗಿದ್ದಾಗ ಬರ್ತ್‍ಡೇ ಮಾಡಿಕೊಂಡು ಬರುತ್ತಿದ್ದೇವು. ಆದರೆ ಎಂದಿಗೂ ನಾವು ವೆಡ್ಡಿಂಗ್ ಆ್ಯನಿವರ್ಸರಿ ಆಗಲಿ, ಬರ್ತ್‍ಡೇ ಅಂತ ಆಗಲಿ ಆಚರಿಸಿಕೊಂಡಿಲ್ಲ. ಆದರೆ ಇದೀಗ ಯಶ್ ಬರ್ತ್‍ಡೇ ಆಚರಿಸಕೊಳ್ಳದೇ ಇದ್ದರೂ ಯಶ್ ಬರ್ತ್‍ಡೇಯನ್ನು ಅಭಿಮಾನಿಗಳು ಆಚರಿಸುತ್ತಾರೆ ಎಂದಿದ್ದಾರೆ.
ಒಟ್ಟಾರೆ ಕೆಜಿಎಫ್-2 ಸಿನಿಮಾ ಬಿಡುಗಡೆ ದಿನದಂದೇ ಯಶ್ ತಂದೆ, ತಾಯಿಯ ವಿವಾಹ ವಾರ್ಷಿಕೋತ್ಸವವಿದ್ದು, ಇದು ಯಶ್‍ಗೆ ಹಾಗೂ ಯಶ್ ಅಭಿಮಾನಿಗಳಿಗೆ ಡಬಲ್ ಧಮಾಕ ಎಂದೇ ಹೇಳಬಹುದು. ಇದನ್ನೂ ಓದಿ: ಎಲ್ಲೆಲ್ಲೂ ರಾಕಿಂಗ್ ಸ್ಟಾರ್ ಯಶ್ ಹವಾ- ಮಧ್ಯರಾತ್ರಿಯೇ ತೆರೆಗಪ್ಪಳಿಸಿದ KGF ಚಾಪ್ಟರ್-2