– ವಯಾಗ್ರ ಡೋಸ್ ನೀಡಿದ ಬಳಿಕ ಆಮ್ಲಜನಕ ಮಟ್ಟ ಏರಿಕೆ
– 2 ಡೋಸ್ ಕೊರೊನಾ ಲಸಿಕೆ ಪಡೆದಿದ್ದ ನರ್ಸ್
ಲಂಡನ್: ಕೋವಿಡ್ 19ಗೆ ಸದ್ಯಕ್ಕೆ ಯಾವುದೇ ಔಷಧಿ ಇಲ್ಲ. ವೈದ್ಯರು ಯಾವುದೋ ಜ್ವರ, ರೋಗಕ್ಕೆ ಕಂಡುಹಿಡಿದ ಮಾತ್ರೆ, ಔಷಧಿಗಳನ್ನು ಸೋಂಕಿತರಿಗೆ ನೀಡುತ್ತಿದ್ದಾರೆ. ಈ ಪ್ರಯೋಗ ಹಲವು ಬಾರಿ ಯಶಸ್ವಿಯಾಗಿದೆ. ಅದೇ ರೀತಿಯಾಗಿ ಇಂಗ್ಲೆಂಡ್‌ನಲ್ಲಿ ಕೋಮಾದಲ್ಲಿದ್ದ ಸೋಂಕಿತ ಮಹಿಳೆ ವಯಾಗ್ರ ಡೋಸ್‌ನಿಂದ ಪಾರಾಗಿ ವೈದ್ಯಲೋಕಕ್ಕೆ ಅಚ್ಚರಿ ಮೂಡಿಸಿದ್ದಾರೆ.
Advertisement
ಹೌದು. ಐಸಿಯುನಲ್ಲಿ ಸಾವು ಬದುಕಿನ ಮಧ್ಯೆ ಕಳೆದ 28 ದಿನಗಳಿಂದ ಹೋರಾಡುತ್ತಿದ್ದ ಲಿಂಕನ್‌ಶೈರ್ ಮೂಲದ ಮಹಿಳೆ ವಯಾಗ್ರದಿಂದ ಪಾರಾಗಿದ್ದಾರೆ.
Advertisement
37 ವರ್ಷದ ಇಬ್ಬರು ಮಕ್ಕಳ ತಾಯಿ ಆಗಿರುವ ಮೋನಿಕಾ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಆರೋಗ್ಯ ಕಾರ್ಯಕರ್ತೆಯಾಗಿರುವ ಇವರು ಎರಡು ಡೋಸ್ ಲಸಿಕೆಯನ್ನು ಪಡೆದಿದ್ದರು. ಈ ಮಧ್ಯೆ ಅಕ್ಟೋಬರ್ 31 ರಂದು ಕೊರೊನಾಗೆ ತುತ್ತಾಗಿದ್ದರು.
Advertisement
Advertisement
ಆರೋಗ್ಯ ದಿನೇ ದಿನೇ ಹದಗೆಡಲು ಆರಂಭವಾದ ಹಿನ್ನೆಲೆಯಲ್ಲಿ ನವೆಂಬರ್ 9 ರಂದು ಆಸ್ಪತ್ರೆಗೆ ದಾಖಲಾಗುತ್ತಾರೆ. ಮತ್ತಷ್ಟು ಆರೋಗ್ಯ ಹದೆಗೆಟ್ಟು ಕೋಮಾಗೆ ಜಾರಿದ್ದರಿಂದ ನವೆಂಬರ್ 16ಕ್ಕೆ ಅವರನ್ನು ಐಸಿಯುಗೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದನ್ನೂ ಓದಿ: ವಿಶ್ವಕ್ಕೆ ಮತ್ತೆ ಕೊರೊನಾ ಕಿರಿಕಿರಿ – ಅಮೆರಿಕಾದಲ್ಲಿ ಪ್ರತಿ ಆರು ಮಂದಿಯಲ್ಲಿ ಒಬ್ಬರಿಗೆ ಸೋಂಕು
ಚಿಕಿತ್ಸೆಯ ಬಳಿಕ ಆರೋಗ್ಯ ಸುಧಾರಣೆಯಾಗಿ ಡಿಸೆಂಬರ್ 14 ರಂದು ಬೆಡ್‌ನಿಂದ ಎದ್ದು ಮಾತನಾಡಲು ಆರಂಭಿಸಿದ್ದಾರೆ. ಈ ವೇಳೆ ವೈದ್ಯರು ಚಿಕಿತ್ಸೆ ರೂಪವಾಗಿ ವಯಾಗ್ರ ನೀಡಿದ ವಿಚಾರವನ್ನು ತಿಳಿಸಿದ್ದಾರೆ.
ಕೋಮಾಗೆ ಜಾರುವ ಮೊದಲೇ ತನ್ನ ಮೇಲೆ ಯಾವುದೇ ರೀತಿಯ ಚಿಕಿತ್ಸಾ ಪ್ರಯೋಗ ನಡೆಸಲು ಮೋನಿಕಾ ಅನುಮತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ವೈದ್ಯರು ಪ್ರಯೋಗಿಕವಾಗಿ ವಯಾಗ್ರವನ್ನು ಔಷಧಿ ರೂಪವಾಗಿ ನೀಡಿದ್ದರು.
ವಯಾಗ್ರ ನೀಡಿದ್ದರಿಂದ ದೇಹದ ಎಲ್ಲ ರಕ್ತನಾಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಕ್ತ ಹರಿದಿದೆ. ಇದರಿಂದಾಗಿ ದಿನೇ ದಿನೇ ಕಡಿಮೆ ಆಗುತ್ತಿದ್ದ ಆಮ್ಲಜನಕ ಮಟ್ಟ ಒಂದು ವಾರದಲ್ಲೇ ಏರಿಕೆಯಾಗಿದೆ. ಇದನ್ನೂ ಓದಿ: ಕೊರೊನಾ ಸ್ಫೋಟ ಒಟ್ಟು 2,479 ಪ್ರಕರಣ – ಬೆಂಗ್ಳೂರಲ್ಲಿ 2,053 ಕೇಸ್
ಆರಂಭದಲ್ಲಿ ವಿಚಾರ ತಿಳಿಸಿದಾಗ ಜೋಕ್ ಮಾಡುತ್ತಿದ್ದಾರೆ ಎಂದು ತಿಳಿದು ನಕ್ಕಿದ್ದೆ. ಆದರೆ ವೈದ್ಯರು ಭಾರೀ ಪ್ರಮಾಣದಲ್ಲಿ ವಯಾಗ್ರ ಡೋಸ್ ನೀಡಲಾಗಿದೆ ಎಂದಾಗ ನಾನು ಆಶ್ಚರ್ಯಪಟ್ಟೆ. ಕ್ರಿಸ್ಮಸ್ ವೇಳೆ ಪವಾಡ ನಡೆದಿದ್ದು ವಯಾಗ್ರವೇ ನನ್ನನ್ನು ಬದುಕಿಸಿದೆ. 48 ಗಂಟೆಯ ಬಳಿಕ ನನ್ನ ಶ್ವಾಸಕೋಶ ಕೆಲಸ ಮಾಡಲು ಆರಂಭಿಸಿತ್ತು ಎಂದು ಮೋನಿಕಾ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಕೋವಿಡ್ ಬಂದ ನಾಲ್ಕೇ ದಿನಕ್ಕೆ ಅವರ ಆಮ್ಲಜನಕ ಮಟ್ಟ ಕಡಿಮೆಯಾಗಿತ್ತು. ಹೀಗಾಗಿ ಮೋನಿಕಾ ಆಸ್ಪತ್ರೆಗೆ ದಾಖಲಾಗಿದ್ದರು. ಆರೋಗ್ಯ ಸುಧಾರಣೆಯಾಗಿ ಡಿಸ್ಚಾರ್ಜ್ ಆಗಿದ್ದರು. ಇದಾದ ಬಳಿಕ ಮತ್ತೆ ಅವರಿಗೆ ಉಸಿರಾಟದ ಸಮಸ್ಯೆ ಎದುರಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಈ ವೇಳೆ ಅವರು ಕೋಮಾಗೆ ಜಾರಿದ್ದರು.
ಯಾವುದೇ ಚಿಕಿತ್ಸೆಗೆ ಸ್ಪಂದಿಸದ ಕಾರಣ ವೈದ್ಯರು ಚಿಂತೆಯಲ್ಲಿದ್ದರು. ಈ ಸಂದರ್ಭದಲ್ಲಿ ವಯಾಗ್ರ ನೀಡಿದರೆ ಕೋವಿಡ್ 19 ಸೋಂಕಿತರ ದೇಹದಲ್ಲಿ ರಕ್ತ ಸಂಚಾರ ಹೆಚ್ಚಾಗಬಹುದು ಎಂದು ಈ ಹಿಂದೆ ಸಿಕ್ಕಿದ್ದ ಸಲಹೆ ವೈದ್ಯರ ನೆನಪಿಗೆ ಬಂದಿತ್ತು. ಹೀಗಾಗಿ ಕೂಡಲೇ ವಯಾಗ್ರ ಡೋಸ್ ನೀಡಿದ್ದರು.
ಇಂಗ್ಲೆಂಡ್‌ನಲ್ಲಿ ಕೋವಿಡ್ ಸೋಂಕಿತ ವ್ಯಕ್ತಿ ಚಿಕಿತ್ಸೆ ರೂಪದಲ್ಲಿ ಯಾವುದೇ ರೀತಿ ಔಷಧ ಪ್ರಯೋಗ ಅನುಮತಿ ನೀಡಿದ್ದರೆ ಆತನ ಮೇಲೆ ಬೇರೆ ಬೇರೆ ಡ್ರಗ್ಸ್ ನೀಡಿ ಪ್ರಯೋಗ ಮಾಡಲಾಗುತ್ತದೆ.