ಕನ್ನಡ ಸಿನಿಮಾ ರಂಗದ ಹೆಸರಾಂತ ಜೋಡಿಗಳಲ್ಲಿ ಪ್ರಮುಖವಾಗಿ ಕೇಳಿ ಬರುವ ಹೆಸರು ದೊರೈ ಭಗವಾನ್ (Bhagavan) ಅವರದ್ದು. ಕನ್ನಡ ಸಿನಿಮಾ ರಂಗದಲ್ಲಿ ಅತೀ ಹೆಚ್ಚು ಕಾದಂಬರಿ ಆಧಾರಿತ ಸಿನಿಮಾಗಳನ್ನು ಕೊಟ್ಟ ಹೆಗ್ಗಳಿಕೆ ಈ ಜೋಡಿಯದ್ದು. ಕನ್ನಡದಲ್ಲಿ ಬಂದ ಮೊದಲ ಬಾಂಡ್ (Bond) ಸಿನಿಮಾಗೆ ಇವರೇ ನಿರ್ದೇಶಕರು. ಈ ಜೋಡಿಯು ಒಂದಾಗಿದ್ದು ಕೇವಲ ಎಂಟಾಣೆ ಮೂಲಕ ಎನ್ನುವುದು ಅಚ್ಚರಿಯ ಸಂಗತಿ. ಆ ಮಾಹಿತಿಯನ್ನು ಸ್ವತಃ ಭಗವಾನ್ ಅವರೇ ಹಂಚಿಕೊಂಡಿದ್ದರು.
Advertisement
ಅದು ಮದ್ರಾಸಿನ ದಿನಗಳು. ಆಗ ಕನ್ನಡ ಚಿತ್ರರಂಗವೂ ಮುದ್ರಾಸಿನಲ್ಲೇ ನೆಲೆಯೂರಿತ್ತು. ಬಹುತೇಕ ಕನ್ನಡ ಚಿತ್ರಗಳು ಅಲ್ಲಿಯೇ ತಯಾರಾಗುತ್ತಿದ್ದವು. ಹಾಗಾಗಿ ದೊರೈ ಮತ್ತು ಭಗವಾನ್ ಮೈಸೂರಿನವರಾದರೂ ಮದ್ರಾಸಿನಲ್ಲೇ ಬೀಡು ಬಿಟ್ಟಿದ್ದರು. ಮೊದ ಮೊದಲು ಭಗವಾನ್ ಸಹಾಯಕ ನಿರ್ದೇಶಕರಾಗಿ ಕೆಲಸಕ್ಕೆ ಸೇರಿಕೊಂಡಿದ್ದರೆ, ಭಗವಾನ್ ಕ್ಯಾಮೆರಾಮನ್ ಆಗಿದ್ದರು. ಇಬ್ಬರ ಆಸಕ್ತಿಗಳೇ ಅವರನ್ನು ಒಂದಾಗುವಂತೆ ಮಾಡಿದ್ದವು. ಇದನ್ನೂ ಓದಿ: ಖ್ಯಾತ ತಮಿಳು ಹಾಸ್ಯ ನಟ ಮಯಿಲ್‌ಸಾಮಿ ಹಠಾತ್ ನಿಧನ
Advertisement
Advertisement
ಆಗ ಉದಯಕುಮಾರ್ ನಟನೆಯ ‘ವೀರಪುತ್ರ’ ಸಿನಿಮಾದ ಶೂಟಿಂಗ್ ಸ್ಥಗಿಗೊಂಡಿತ್ತು. ಈ ಸಿನಿಮಾದಲ್ಲಿ ಅಸೋಸಿಯೇಟ್ ಆಗಿ ಕೆಲಸ ಮಾಡುತ್ತಿದ್ದ ಭಗವಾನ್ ಬಳಿ ಊಟಕ್ಕೂ ಹಣವಿರಲಿಲ್ಲ. ಕನ್ನಡದ ಬಹುತೇಕರು ಬರುತ್ತಿದ್ದ ಮದ್ರಾಸಿನ ಹೋಟೆಲ್ ಮುಂದೆ ನಿಂತು, ಅಲ್ಲಿಗೆ ಬರುವ ಕನ್ನಡಿಗರ ಬಳಿ ಸಾಲ ಕೇಳಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು ಭಗವಾನ್. ಇಂತಹ ಸಂದರ್ಭದಲ್ಲೇ ಭಗವಾನ್ ಅವರಿಗೆ ದೊರೈ ಸಿಕ್ಕಿದ್ದು.
Advertisement
ಎಂದಿನಂತೆ ಹೋಟೆಲ್ ಮುಂದೆ ನಿಂತಿದ್ದ ಭಗವಾನ್, ಯಾರಾದರೂ ಬಂದು ತಮ್ಮ ಹಸಿವು ನೀಗಿಸಬಹುದು ಎಂದುಕೊಂಡು ಕಾಯುತ್ತಿದ್ದರು. ಆಗ ಬಂದವರೇ ದೊರೈ. ಅವರ ಬಳಿ ಒಂದು ರೂಪಾಯಿಯನ್ನು ಕೇಳಿದ್ದರು ಭಗವಾನ್. ತುಂಬಾ ಹಸಿದಿದ್ದ ಭಗವಾನ್ ಕಂಡು ‘ನನ್ನ ಬಳಿ ಒಂದು ರೂಪಾಯಿ ಇಲ್ಲ, ಎಂಟಾಣೆಯಿದೆ ತಗೆದುಕೊ’ ಎಂದು ಎಂಟಾಣೆ ಕೊಟ್ಟು ಹೊರಟು ಬಿಟ್ಟರು ದೊರೈ.
ಮರುದಿನ ಭಗವಾನ್ ತಂಗಿದ್ದ ರೂಮ್ ಗೆ ಬಂದ ನಿರ್ದೇಶಕ ಜಿ.ವಿ. ಅಯ್ಯರ್ ‘ಊಟಕ್ಕೂ ಗತಿ ಇಲ್ಲದೇ ಇದ್ದೀಯಂತೆ? ಬಾ ನನ್ನ ಜೊತೆ’ ಎಂದು ಅವರ ಮನೆಗೆ ಕರೆದುಕೊಂಡು ಹೋಗಿದ್ದರು. ಅಯ್ಯರ್. ಮುದ್ರಾಸಿನಲ್ಲಿ ಮೊದಲು ಬಾರಿಗೆ ನೆಲೆ ಕಲ್ಪಿಸಿದ್ದು ಅಯ್ಯರ್. ಆದರೆ, ಅಯ್ಯರ್ ಗೆ ಈ ವಿಷಯ ತಿಳಿಸಿದ್ದು ದೊರೈ. ಅಲ್ಲದೇ ಅಯ್ಯರ್ ಕಡೆ ಐವತ್ತು ಪೈಸೆ ಸಾಲ ಪಡೆದುಕೊಂಡು ಊಟಕ್ಕೆ ಬಂದಿದ್ದ ದೊರೈ, ತಾನು ಊಟ ಮಾಡದೇ ಆ ಹಣವನ್ನು ಭಗವಾನ್ ಗೆ ನೀಡಿದ್ದರು. ಅಲ್ಲಿಂದ ಅವರಿಬ್ಬರ ಸ್ನೇಹ ಇನ್ನಷ್ಟು ಗಟ್ಟಿಯಾಯಿತು.
ಜಗಜ್ಯೋತಿ ಬಸವೇಶ್ವರ ಸಿನಿಮಾದಲ್ಲಿ ದೊರೈ ಕ್ಯಾಮೆರಾಮನ್ ಆಗಿ ಕೆಲಸ ಮಾಡಿದರೆ, ಭಗವಾನ್ ಅಸೋಸಿಯೇಟ್ ನಿರ್ದೇಶಕ. ಅಲ್ಲಿಂದ ಶುರುವಾದ ಅವರ ಪಯಣ ಮುಂದೆ ದೊಡ್ಡ ದೊಡ್ಡ ಸಿನಿಮಾಗಳನ್ನು ಒಟ್ಟಿಗೆ ನಿರ್ದೇಶನ ಮಾಡುವಂತೆ ಆಯಿತು. ಮುಂದೆ ಮಂತ್ರಾಲಯ ಮಹಾತ್ಮೆ ಸಿನಿಮಾಗೆ ದೊರೈ ಕ್ಯಾಮೆರಾಮನ್, ಭಗವಾನ್ ನಿರ್ದೇಶಕರಾದರು. ಈ ಸಿನಿಮಾಗೆ ಹಣ ಹೂಡಿದ್ದು ಭಗವಾನ್. ಅದಕ್ಕೆ ಧೈರ್ಯ ತುಂಬಿದ್ದು ಇದೇ ದೊರೈ. ಡಾ.ರಾಜ ಕುಮಾರ್ ನಟನೆಯ ಜೇಡರಬಲೆ ಸಿನಿಮಾಗೆ ಇಬ್ಬರೂ ನಿರ್ಮಾಪಕರು. ಹೀಗೆ ಸಾಗಿತ್ತು ಇವರ ಸ್ನೇಹದ ಪಯಣ.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k