ಡೆಹ್ರಾಡೂನ್: ಕೇದಾರನಾಥ (Kedarnath Dham) ಯಾತ್ರೆ ಇಂದಿನಿಂದ (ಮಂಗಳವಾರ) ಆರಂಭವಾಗಿದ್ದು, ಕೇದಾರನಾಥ ಧಾಮದ ಬಾಗಿಲು ಯಾತ್ರಾರ್ಥಿಗಳಿಗೆ ತೆರೆದಿದೆ.
ಶ್ಲೋಕಗಳ ಪಠ, ವಾದ್ಯಗಳ ಗಾಯನದೊಂದಿಗೆ ಇಂದು ಕೇದಾರನಾಥ ಧಾಮದ ಬಾಗಿಲು ತೆರೆಯಿತು. ಯಾತ್ರಾರ್ಥಿಗಳು ಸಂಭ್ರಮದಿಂದ ದೇವಾಲಯ ಪ್ರವೇಶಿಸುತ್ತಿದ್ದಾರೆ. ದಿನವೊಂದಕ್ಕೆ 13 ಸಾವಿರ ಯಾತ್ರಾರ್ಥಿಗಳಿಗೆ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಲಾಗುವುದು. ಇದನ್ನೂ ಓದಿ: ಹೃದಯ-ಶ್ವಾಸಕೋಶ ವೈಫಲ್ಯವೇ ಚೀತಾ ಸಾವಿಗೆ ಕಾರಣ: ವೈದ್ಯರ ಸ್ಪಷ್ಟನೆ
Advertisement
Advertisement
ಆದಾಗ್ಯೂ, ಯಾತ್ರಾ ಮಾರ್ಗದಲ್ಲಿ ಭಾರೀ ಹಿಮಪಾತ ಮತ್ತು ಹವಾಮಾನ ಇಲಾಖೆಯಿಂದ ಬಂದಿರುವ ಪ್ರತಿಕೂಲ ಹವಾಮಾನದ ಎಚ್ಚರಿಕೆಯನ್ನು ಗಮನದಲ್ಲಿಟ್ಟುಕೊಂಡು ಉತ್ತರಾಖಂಡ ಸರ್ಕಾರ ಕೇದಾರನಾಥ ಧಾಮ ಯಾತ್ರೆಗೆ ಯಾತ್ರಿಕರಿಂದ ನೋಂದಣಿ ಅರ್ಜಿಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದೆ. ಭಾರತೀಯ ಹವಾಮಾನ ಇಲಾಖೆ (IMD) ಕೇದಾರನಾಥ ಧಾಮ್ ಮಾರ್ಗದಲ್ಲಿ ಭಾರೀ ಹಿಮಪಾತದ ಬಗ್ಗೆ ಎಚ್ಚರಿಕೆ ನೀಡಿದೆ.
Advertisement
Advertisement
ಅಕ್ಷಯ ತೃತೀಯದ ಶುಭ ಸಂದರ್ಭದಲ್ಲಿ ಯಮುನೋತ್ರಿ ಧಾಮದಿಂದ ಯಾತ್ರೆ ಆರಂಭವಾಯಿತು. ಈ ಬಾರಿ ಯಾತ್ರಾರ್ಥಿಗಳಿಗೆ ಸರ್ಕಾರ ಟೋಕನ್ ವ್ಯವಸ್ಥೆಯನ್ನು ಕಲ್ಪಿಸಿದೆ. ಸುಗಮ ಯಾತ್ರೆಗಾಗಿ ಈ ನಿರ್ಧಾರ ಕೈಗೊಂಡಿದೆ. ಯಾತ್ರಾ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಇದನ್ನೂ ಓದಿ: ಕೊಚ್ಚಿಯಲ್ಲಿ ಭಾರತದ ಮೊದಲ ವಾಟರ್ ಮೆಟ್ರೋ ಸೇವೆ – ಇಂದು ಪ್ರಧಾನಿ ಮೋದಿ ಚಾಲನೆ
ಯಾತ್ರಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಜಿಲ್ಲಾಡಳಿತ ಹಲವು ಕ್ರಮಕೈಗೊಂಡಿದೆ. 12 ವೈದ್ಯಕೀಯ ಶಿಬಿರಗಳನ್ನು ತೆರೆದಿದ್ದು, ವೈದ್ಯರು ಹಾಗೂ ಅರೆವೈದ್ಯಕೀಯ ಸಿಬ್ಬಂದಿ ನಿಯೋಜಿಸಿದೆ. ಅಂಬುಲೆನ್ಸ್ ಸೇವೆ ಕೂಡ ಕಲ್ಪಿಸಲಾಗಿದೆ. ತುರ್ತು ಸೇವೆಗಾಗಿ ಏರ್ ಅಂಬುಲೆನ್ಸ್ ಸೇವೆಗೆ ಉತ್ತರಾಖಂಡ (Uttarakhand) ಸರ್ಕಾರ ಅನುಮತಿ ನೀಡಿದೆ.