– ಕಣ್ಣೀರು ಮರೆಮಾಚಲು ಕನ್ನಡಕ ಧರಿಸಿ ಮಾತನಾಡಿದ ನಾಯಕಿ
– ಮತ್ತೊಮ್ಮೆ ನನ್ನ ದೇಶ ಸೋಲಲು ಬಿಡುವುದಿಲ್ಲ
– ಮತ್ತೊಮ್ಮೆ ನನ್ನ ದೇಶ ಸೋಲಲು ಬಿಡುವುದಿಲ್ಲ
ಕೇಪ್‌ಟೌನ್: ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ (ICC Womens World Cup) ಸೆಮಿಫೈನಲ್ ಪಂದ್ಯದ ವಿರೋಚಿತ ಸೋಲಿನ ಬಳಿಕ ಟೀಂ ಇಂಡಿಯಾ (Team India) ನಾಯಕಿ ಹರ್ಮನ್ ಪ್ರೀತ್ ಕೌರ್ (Harmanpreet Kaur) ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಪಂದ್ಯದ ಸೋಲಿನ ಸುಳಿವು ಕಾಣುತ್ತಿದ್ದಂತೆ ಮಾಜಿ ನಾಯಕಿ ಅಂಜುಂ ಚೋಪ್ರಾ ಅವರನ್ನು ಬಿಗಿದಪ್ಪಿಕೊಂಡು ಅತ್ತಿದ್ದಾರೆ. ಈ ವೇಳೆ ಅಂಜುಂ ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ.
Advertisement
ಹೌದು, ಗುರುವಾರ ನಡೆದ ಮಹಿಳಾ ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಆಸ್ಟ್ರೇಲಿಯಾ (Australia) ವಿರುದ್ಧ 5 ರನ್‌ಗಳ ವಿರೋಚಿತ ಸೋಲು ಕಂಡಿತು. ಇದರಿಂದ ಮೈದಾನದಲ್ಲಿ ಬ್ಯಾಟ್ ಬಿಸಾಡಿ ಬೇಸರ ಹೊರಾಕಿದ ಕೌರ್ ಮೈದಾನದಿಂದ ಹೊರಬರುತ್ತಿದ್ದಂತೆ ಕಣ್ಣೀರಿಟ್ಟಿದ್ದಾರೆ. ಪಂದ್ಯದ ಸೋಲಿನ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ, ಕೌರ್ ತಮ್ಮ ಕಣ್ಣೀರನ್ನು ಮರೆಮಾಚಲು ಕೂಲಿಂಗ್ ಗ್ಲಾಸ್ ಧರಿಸಿಯೇ ಮಾತನಾಡಿದ್ದಾರೆ.
Advertisement
Advertisement
ಈ ವೇಳೆ ಕಾಮೆಂಟೇಟರ್ ಏಕೆ ಅಳುತ್ತಿದ್ದೀರಿ? ಎಂದು ಪ್ರಶ್ನಿಸಿದಾಗ ಹರ್ಮನ್‌ಪ್ರೀತ್ ತುಂಬಾ ಭಾವುಕರಾದರು. ತಾನು ಅಳುವುದನ್ನು ನನ್ನ ದೇಶ ನೋಡಬಾರದೆಂದು ಬಯಸುತ್ತೇನೆ. ಹಾಗಾಗಿ ನಾನು ಈ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಬಂದಿದ್ದೇನೆ ಎಂದು ನಾಯಕಿ ಹೇಳಿದ್ದಾರೆ. ಇದನ್ನೂ ಓದಿ: ಅಂದು ಧೋನಿ, ಇಂದು ಕೌರ್ – ವಿಶ್ವಕಪ್ ಕನಸು ಭಗ್ನಗೊಳಿಸಿದ ಆ ಒಂದು ರನೌಟ್
Advertisement
ಮುಂದುವರಿದು, ನಾವು ಇನ್ನಷ್ಟು ಸುಧಾರಣೆ ಕಂಡುಕೊಳ್ಳುತ್ತೇವೆ. ಮತ್ತೊಮ್ಮೆ ಈ ರೀತಿ ಸೋಲಲು ಅನುವು ಮಾಡಿಕೊಡುವುದಿಲ್ಲ. ಆದರೆ ಈ ಪಂದ್ಯದಲ್ಲಿ ನಾವು ಸೋಲುತ್ತೇವೆಂದು ನಾನು ಖಂಡಿತವಾಗಿಯೂ ಭಾವಿಸಿರಲಿಲ್ಲ. ನಾನು ರನೌಟ್ ಆದ ಹಾದಿ ನೋಡುತ್ತಿದ್ದರೇ, ಇದಕ್ಕಿಂತ ದುರಾದೃಷ್ಟ ಬೇರೆ ಯಾವುದೂ ಇಲ್ಲ ಎಂದು ಭಾವಿಸುತ್ತೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಧಿವೇಶನ ಮುಗಿಸಿ ಸಿಸಿಎಲ್ ಪಂದ್ಯ ವೀಕ್ಷಣೆಗೆ ಬಂದ ಸಿಎಂ ಬೊಮ್ಮಾಯಿ
ಗುರುವಾರ ನಡೆದ ಮಹಿಳಾ ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ (Australia) ತಂಡ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 172 ರನ್‌ಗಳಿಸಿತ್ತು. 173 ರನ್‌ಗಳ ಗುರಿ ಬೆನ್ನತ್ತಿದ ಭಾರತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 167 ರನ್‌ಗಳಿಸಲಷ್ಟೇ ಸಾಧ್ಯವಾಗಿ ಸೋಲೊಪ್ಪಿಕೊಂಡಿತು.
LIVE TV
[brid partner=56869869 player=32851 video=960834 autoplay=true]
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k