ಧಾರವಾಡ: ಪ್ರತ್ಯೇಕ ಉತ್ತರ ಕರ್ನಾಟಕದ ಹೋರಾಟದಿಂದ ಏನೂ ಪ್ರಯೋಜನವಿಲ್ಲ. ಈ ಭಾಗದ ನೂರು ಜನ ಶಾಸಕರಿದ್ದರೂ ಏನು ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ಇಲ್ಲಿ ಆಯ್ಕೆಯಾದ ಸಂಸದರು ಏನೂ ಮಾಡಿಲ್ಲ, ಅವರಿಗೆ ಓಟ್ ಮಾಡ್ಬೇಡಿ ಎಂದು ಉತ್ತರ ಕರ್ನಾಟಕ ಜನತೆಗೆ ಹಿರಿಯ ಪತ್ರಕರ್ತ ಪಾಟೀಲ್ ಪುಟ್ಟಪ್ಪ ಕರೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಸಕರು ಮೊದಲು ಇಂಗ್ಲೆಂಡ್, ಆಸ್ಟ್ರೇಲಿಯಾ ನೋಡಬೇಕು ಎನ್ನುವ ಹವ್ಯಾಸ ಬಿಡಲಿ. ಅವರು ಮೊದಲು ಕರ್ನಾಟಕ ನೋಡಲಿ ಅಂತ ಸಲಹೆ ನೀಡಿದ್ರು. ಎಷ್ಟೋ ಮಂದಿ ಕರ್ನಾಟಕವನ್ನೇ ನೋಡಿಲ್ಲ. ಎಷ್ಟೋ ಮಂದಿ ಮಂತ್ರಿಗಳಾಗಿದ್ದಾರೆ. ಆದ್ರೆ ಅವರು ಉತ್ತರ ಕರ್ನಾಟಕಕ್ಕೆ ಬಂದೇ ಇಲ್ಲ. ಸಿನೆಮಾ ನಟರೊಬ್ಬರಿಗೆ ವೈದ್ಯಕೀಯ ಸೇವೆ ಬೇಕಾಯಿತು. ಸಿಂಗಾಪುರಕ್ಕೆ ಹೋದ್ರು. 3 ಕೋಟಿ ರೂ. ಖರ್ಚಾಯಿತು. ಇದು ರಾಜ್ಯ ಕಟ್ಟೋ ಯೋಜನೆಯಾ? ಅವರು ಕರ್ನಾಟಕವನ್ನು ನೋಡಿಲ್ಲ. ಹೀಗಾಗಿ ಅವರನ್ನು ಜನ ನೋಡಿಲ್ಲ ಅಂದ್ರು.
Advertisement
Advertisement
ಈ ಹಿನ್ನೆಲೆಯಲ್ಲಿ ಸರ್ಕಾರ ತಮ್ಮ ಶಾಸಕರಿಗೆ ಏನಾದ್ರೂ ಉಪಕಾರ ಮಾಡಬೇಕು. ಕರ್ನಾಟಕವನ್ನು ಅವರಿಗೆ ತೋರಿಸಬೇಕು. ಹೀಗಾಗಿ ರಾಜ್ಯದ ಬಗ್ಗೆ ಅವರಿಗೆ ಆಸಕ್ತಿ ಮೂಡಲಿ. ವಿಷಾದವೆಂದರೆ ಉತ್ತರ ಕರ್ನಾಟಕದ ಶಾಸಕರು ಕೂಡ ಆ ಶಾಸಕರ ಭಾಗವಾಗಿದ್ದಾರೆ. ಅವರು ಜನರನ್ನು ಬಿಟ್ಟು ನಡೇತಿರಬೇಕಾದ್ರೆ ಜನ ಕೂಡ ಅವರನ್ನು ಬಿಟ್ಟು ನಡೀಬೇಕಾಗುತ್ತದೆ ಅಂತ ಸಿಡಿಮಿಡಿಗೊಂಡರು.
Advertisement
ಅನ್ಯಾಯವಾಗಿದೆ ಆದ್ರೆ ಹೋರಾಟದ ಮೂಲಕ ನಾವು ಅದನ್ನು ಪಡೀಬೇಕು. ಇಷ್ಟಕ್ಕೆ ನಿಮ್ಮನ್ನು ಬಿಡಲ್ಲ. ಹೀಗಾಗಿ ಹೋರಾಟ ಮಾಡಿಯಾದ್ರು ಸರಿ ಕರ್ನಾಟಕವನ್ನು ಸಮಗ್ರವಾಗಿ ಬೆಳೆಯುವಂತೆ ನೋಡಿಕೊಳ್ಳುತ್ತೇವೆ ಅಂತ ವಿಶ್ವಾಸ ವ್ಯಕ್ತಪಡಿಸಿದ ಅವರು, ಒಂದು ವೇಳೆ ಜನ ವಿಭಜನೆ ಆಗುತ್ತೇವೆ ಅನ್ನೋ ಹಂತಕ್ಕೆ ಬಂದ್ರೆ ಏನೂ ಪ್ರಯೋಜನವಾಗಲ್ಲ. ಯಾಕಂದ್ರೆ ಆಂಧ್ರಪ್ರದೇಶ, ಹೈದರಾಬಾದ್, ತೆಂಗಾಣದಂತಹ ಸ್ಥಿತಿಗೆ ನಾವಿನ್ನು ಮುಟ್ಟಿಲ್ಲ ಅಂದ್ರು.
Advertisement
ಉತ್ತರ ಕರ್ನಾಟಕದಲ್ಲಿ ನೂರು ಮಂದಿ ಶಾಸಕರಿದ್ದಾರೆ. ಆದ್ರೆ ಈ ಭಾಗಕ್ಕೆ ಅನ್ಯಾಯವಾಗುತ್ತಿದೆ ಅಂತ ಗೊತ್ತಿದ್ರೂ ಬಾಯಿ ಮುಚ್ಚಿ ಕೂತಿದ್ದಾರೆ ಅಂತ ಕಿಡಕಾರಿದ್ರು.