ಶಿವಮೊಗ್ಗ: ಮುಸ್ಲಿಮರನ್ನು ಕಂಡ ಕೂಡಲೇ ಅವರು ಪಾಕಿಸ್ತಾನದವರು, ಉಗ್ರಗಾಮಿಗಳು ಎನ್ನುವುದು ಸರಿಯಲ್ಲ. ಆ ಭಾವನೆ ದೂರ ತಳ್ಳಿ. ಅವರನ್ನು ನಮ್ಮತ್ತ ಸೆಳೆಯುವಂತಹ ಪ್ರಯತ್ನ ಮಾಡಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ನಡೆದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಎಲ್ಲಾ ಮುಸ್ಲಿಮರು ರಾಷ್ಟ್ರ ದ್ರೋಹಿಗಳಲ್ಲ. ಹಿಂದೂ, ಮುಸಲ್ಮಾನರನ್ನು ಕಾಂಗ್ರೆಸ್ ಬೇರೆ ಬೇರೆ ಮಾಡುತ್ತಿದೆ. ಮತ್ತೆ ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ ಎಂದು ಹೇಳುತ್ತಾರೆ. ಕಾಂಗ್ರೆಸ್ ನಾಯಕರು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಇಂದು ಹಿಜಬ್, ನಾಳೆ ಸಂವಿಧಾನವೇ ಬೇಡ ಅಂತಾರೆ ಈ ಮಾನಸಿಕತೆಗೆ ಕಾಂಗ್ರೆಸ್ ಕೈಜೋಡಿಸಬಾರದು: ಸಿ.ಟಿ.ರವಿ
Advertisement
Advertisement
ಹುಬ್ಬಳ್ಳಿಯಲ್ಲಿನ ಘಟನೆಗೆ ಕಾರಣನಾದ ಮಾಸ್ಟರ್ ಮೈಂಡ್ ವ್ಯಕ್ತಿಯನ್ನು ಅರೆಸ್ಟ್ ಮಾಡಲಾಗಿದೆ. ಜನರನ್ನು ಸೇರಿಸಿದ್ದು ಹೌದು. ಆದರೆ ಕಲ್ಲು ಹೊಡೆಸಿದ್ದು ನಾನಲ್ಲ ಎಂದು ಹೇಳುತ್ತಿದ್ದಾನೆ. 2 ಸಾವಿರ ಜನರನ್ನು ಹೇಗೆ ಸೇರಿಸಿದ? ಅವನಿಗೆ ಸ್ಫೂರ್ತಿ ಯಾರು? ಈ ಘಟನೆಯಿಂದ ಎಲ್ಲಾ ಮುಸ್ಲಿಮರನ್ನು ಅನುಮಾನದಿಂದ ನೋಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
Advertisement
ನಿರ್ದೋಷಿಯಾಗಿ ಹೊರಬರುತ್ತೇನೆ
ಇದೇ ವೇಳೆ ನಗರದ ಬೋವಿ ಸಮುದಾಯ ಭವನದಲ್ಲಿ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಭೇಟಿ ನೀಡಿದರು. ಈ ವೇಳೆ ಮಾತನಾಡಿ, ಸಂತೋಷ್ ಪಾಟೀಲ್ ಪ್ರಕರಣದಲ್ಲಿ ನನ್ನದು ಒಂದೇ ಒಂದು ಪರ್ಸೆಂಟ್ ತಪ್ಪಿದ್ದರೆ ನನಗ ಶಿಕ್ಷೆಯಾಗಲಿ. ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ನಾನು ನಿರ್ದೋಷಿಯಾಗಿ ಹೊರ ಬರುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಬುಲ್ಡೋಜರ್ ಕಾನೂನು ಜಾರಿ ಬಗ್ಗೆ ಸಿಎಂ ಜೊತೆ ಚರ್ಚೆ: ಆರ್.ಅಶೋಕ್
Advertisement
ಪ್ರಕರಣ ಕುರಿತು ತನಿಖೆ ನಡೆಯುತ್ತಿದ್ದು, ತನಿಖಾಧಿಕಾರಿಗಳು ಎಲ್ಲಾ ರೀತಿಯಲ್ಲೂ ತನಿಖೆ ನಡೆಸುತ್ತಿದ್ದಾರೆ. ನಾನು ನಿರ್ದೋಷಿಯಾಗಿ ಹೊರ ಬರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.