Bengaluru CityDistrictsKarnatakaLatestLeading NewsMain Post

ಬುಲ್ಡೋಜರ್ ಕಾನೂನು ಜಾರಿ ಬಗ್ಗೆ ಸಿಎಂ ಜೊತೆ ಚರ್ಚೆ: ಆರ್.ಅಶೋಕ್

ಬೆಂಗಳೂರು: ರಾಜ್ಯದಲ್ಲಿ ಗಲಭೆ ಮಾಡುವ ಮನಸ್ಥಿತಿ ಇರುವವರಿಗೆ ಮನೆ-ಮಠ ಇಲ್ಲದಂತೆ ಮಾಡಬೇಕು. ಅದಕ್ಕಾಗಿ ಬುಲ್ಡೋಜರ್ ಕಾನೂನು ಜಾರಿಗೆ ತರಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಲಾಗುವುದು ಎಂದು ಸಚಿವ ಆರ್.ಅಶೋಕ್ ಬುಲ್ಡೋಜರ್ ಪ್ರಯೋಗ ಜಾರಿಯ ಬಗ್ಗೆ ಪುನರುಚ್ಚರಿಸಿದರು.

r ashok

ಬೆಂಗಳೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಗಲಭೆ ಮಾಡುವವರನ್ನು ಅರೆಸ್ಟ್ ಮಾಡಿದರೆ, ಮರ‍್ನಾಲ್ಕು ದಿನಗಳಲ್ಲಿ ಜಾಮೀನು ಪಡೆದುಕೊಂಡು ಹೊರಗೆ ಬರುತ್ತಾರೆ. ಪುನಃ ಗಲಭೆ ಮಾಡುತ್ತಾರೆ. ಅದಕ್ಕಾಗಿ ಅವರಿಗೆ ಬುದ್ಧಿ ಕಲಿಸಲು ಮನೆ-ಮಠ ಇಲ್ಲದಂತೆ ಮಾಡಬೇಕು. ಆಗ ಬುದ್ಧಿ ಬರುತ್ತದೆ ಎಂದು ಕಿಡಿಕಾರಿದರು.  ಇದನ್ನೂಓದಿ: PSI ನೇಮಕಾತಿಯ ಯಾವುದೇ ಬ್ಯಾಚ್‌ನಲ್ಲಿ ಅಕ್ರಮ ನಡೆದಿದ್ದರೂ ತಪ್ಪಿತಸ್ಥರ ವಿರುದ್ಧ ಕ್ರಮ: ಸಿಎಂ

ನಮ್ಮಲ್ಲೂ ಉತ್ತರ ಪ್ರದೇಶದ ಮಾದರಿಯ ರೂಲ್ಸ್ ಜಾರಿಗೆ ಬರಬೇಕಾದ ಸ್ಥಿತಿಯಿದೆ. ಈ ನೀತಿ ತಂದರಷ್ಟೇ ಗಲಭೆಕೋರರನ್ನು ಮಟ್ಟ ಹಾಕಲು ಸಾಧ್ಯ. ಗಲಭೆ ಸೃಷ್ಟಿ ಮಾಡುವವರ ಮೇಲೆ ಕಠಿಣ ಕ್ರಮ ಜರುಗಿಸಬೇಕು. ಯಾವುದೇ ಧರ್ಮ, ಜಾತಿಗೆ ಸೇರಿದ್ದರೂ ಸುಮ್ಮನೆ ಬಿಡಬಾರದು. ಅವರ ಆಸ್ತಿ-ಪಾಸ್ತಿಗಳನ್ನು ಜಪ್ತಿ ಮಾಡಿಕೊಳ್ಳಬೇಕು. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುತ್ತೇನೆ ಎಂದು ಹೇಳಿದರು.

YOGI

ಕಾಂಗ್ರೆಸ್‌ಗೆ ಜನರೇ ಪಾಠ ಕಲಿಸ್ತಾರೆ: ನಾವು ಇನ್ನಷ್ಟು ಕಠಿಣ ಕ್ರಮ ತೆಗೆದುಕೊಂಡು ದುಷ್ಟರ ಹೆಡೆಮುರಿ ಕಟ್ಟುತ್ತೇವೆ. ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲವೆಂದ ಅವರು, ರಾಜ್ಯದಲ್ಲಿ ಅರಾಜಕತೆ ಉಂಟುಮಾಡುವ ಕಾಂಗ್ರೆಸ್‌ಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಕುಟುಕಿದರು. ಇದನ್ನೂ ಓದಿ: ಕರ್ನಾಟಕದಲ್ಲಿ ಶಾಂತಿ ದೃಷ್ಟಿಯಿಂದ ಬುಲ್ಡೋಜರ್ ಕ್ರಮ ಅವಶ್ಯ: ಮುತಾಲಿಕ್

ವಿದೇಶಿ ಶಕ್ತಿಗಳಿವೆಯೇ?:  ಕಾಂಗ್ರೆಸ್ ಸಂಸ್ಕೃತಿಯೇ ಎಲ್ಲೆಡೆ ಅಶಾಂತಿ ನಿರ್ಮಾಣ ಮಾಡುವುದು. ಹಿಂದೆ ಅವರದೇ ಪಕ್ಷದ ಸಿಎಂ ಬದಲಾಯಿಸಲು ರಾಮನಗರ, ಕನಕಪುರದಲ್ಲಿ ಗಲಾಟೆ ಮಾಡಿಸುತ್ತಿದ್ದರು. ಡಿಜೆ ಹಳ್ಳಿ-ಕೆಜಿಹಳ್ಳಿಯಲ್ಲೂ ಅವರದೇ ಪಕ್ಷದ ಶಾಸಕನ ಮನೆಯನ್ನು, ಅವರದೇ ಪಕ್ಷದ ಮಾಜಿ ಮೇಯರ್ ಬೆಂಕಿ ಹಾಕಿಸಿ, ಜೈಲಿಗೆ ಹೋಗಿದ್ದ. ಹುಬ್ಬಳ್ಳಿ ಗಲಾಟೆಯಲ್ಲೂ ಸ್ಥಳೀಯ ಕಾಂಗ್ರೆಸ್ ಅಧ್ಯಕ್ಷನೇ ಭಾಗಿಯಾಗಿದ್ದಾನೆ. ಪಿಎಸ್‌ಐ ನೇಮಕಾತಿ ಹಗರಣದಲ್ಲೂ ಕಾಂಗ್ರೆಸ್ ಮುಖಂಡನೇ ಇದ್ದಾನೆ. ಹೀಗೆ ಅವರೇ ಎಲ್ಲ ಹಗರಣದಲ್ಲೂ ಭಾಗಿಯಾಗಿ ಉಳಿದವರ ಬಗ್ಗೆ ಮಾತನಾಡುತ್ತಾರೆ. ರಾಜ್ಯದಲ್ಲಿ ಅಶಾಂತಿ, ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಸರ್ವಪ್ರಯತ್ನ ಮಾಡುತ್ತಿದೆ. ವಿದೇಶಿ ಶಕ್ತಿಗಳು ಈ ಎಲ್ಲ ಘಟನೆಯಲ್ಲಿ ಭಾಗಿಯಾಗಿದೆಯೇ ಎನ್ನುವ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

Leave a Reply

Your email address will not be published.

Back to top button