ಒಟ್ಟಾವಾ: ಬಾಂಬ್ ಇಟ್ಟಿರುವುದಾಗಿ ಭಾರತದ ವಿವಿಧ ವಿಮಾನಗಳಿಗೆ ಬೆದರಿಕೆ ಕರೆ ಬರುತ್ತಿರುವ ಸಂದರ್ಭದಲ್ಲೇ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು (Gurpatwant Singh Pannun) ಹೊಸ ಬೆದರಿಕೆಯೊಂದನ್ನ ಹಾಕಿದ್ದಾರೆ. ನವೆಂಬರ್ 1ರಿಂದ 19ರ ವರೆಗೆ ಏರ್ ಇಂಡಿಯಾ ವಿಮಾನಗಳಲ್ಲಿ ಯಾರೂ ಪ್ರಯಾಣಿಸಬೇಡಿ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ಯೋಗೇಶ್ವರ್ ಗುಡ್‌ಬೈ – ಕಾಂಗ್ರೆಸ್‌ನಿಂದ ಕೊನೆ ಕ್ಷಣದ ಕಸರತ್ತು ಆರಂಭ
Advertisement
ಸಿಖ್ ಹತ್ಯಾಕಾಂಡಕ್ಕೆ 40 ವರ್ಷ ಪೂರ್ಣಗೊಳ್ಳುವ ನಿರ್ದಿಷ್ಟ ದಿನಾಂಕದಂದು ಏರ್ ಇಂಡಿಯಾ ವಿಮಾನದ ಮೇಲೆ ದಾಳಿ ನಡೆಯಲಿದೆ ಎಂದು ಎಚ್ಚರಿಸಿದ್ದಾರೆ ಎಂಬುದಾಗಿ ವರದಿಯಾಗಿದೆ. ಕನಡಾ ಮತ್ತು ಅಮೆರಿಕದ ದ್ವೀಪೌರತ್ವ ಹೊಂದಿರುವ ಸಿಖ್ ಫಾರ್ ಜಸ್ಟೀಸ್ (SFJ) ಸಂಸ್ಥಾಪಕ ಪನ್ನು, ಕಳೆದ ವರ್ಷ ಸಹ ಇದೇ ಅವಧಿಯಲ್ಲಿ ಬೆದರಿಕೆ ಒಡ್ಡಿದರು.
Advertisement
ನಿಜ್ಜರ್ ಹತ್ಯೆ ಸೇರಿದಂತೆ ಕೆನಡಾದಲ್ಲಿರುವ ಖಲಿಸ್ತಾನ ಹೋರಾಟಗಾರರನ್ನು ಭಾರತ ಗುರಿಯಾಗಿಸಿಕೊಂಡಿದೆ ಎಂದು ಕೆನಡಾ ಆರೋಪಿಸುತ್ತಿದ್ದು, ಇದರ ಬೆನ್ನಲ್ಲೇ ಉಭಯ ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಸಂಘರ್ಷ ನಡೆಯುತ್ತಿದೆ. 2023ರ ನವೆಂಬರ್‌ನಲ್ಲೂ ಇದೇ ರೀತಿಯ ಬೆದರಿಕೆ ಒಡ್ಡಿದ್ದ ಪನ್ನು, ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ಹೆಸರು ಬದಲಿಸಲಾಗುವುದು. ನವೆಂಬರ್ 19ರಂದು ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸದಂತೆ ಎಚ್ಚರಿಕೆ ನೀಡಿದ್ದರು. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಈತನ ವಿರುದ್ಧ ಯುಎಪಿಎ ಕಾಯ್ದೆ ಅಡಿ ಪ್ರಕರಣ ದಾಖಲಿಸಿದೆ. ಡಿಸೆಂಬರ್ 13ರಂದು ಅಥವಾ ಅದಕ್ಕೂ ಮುನ್ನ ಸಂಸತ್ ಭವನವನ್ನು ಸ್ಫೋಟಿಸುವುದಾಗಿ ಕಳೆದ ವರ್ಷ ಬೆದರಿಕೆ ಹಾಕಿದ್ದರು.ಇದನ್ನೂ ಓದಿ: ವಿಪತ್ತು ತಡೆಯಲು ವಯನಾಡಿನಲ್ಲಿ X ಬ್ಯಾಂಡ್ ರೇಡಾರ್ ಅಳವಡಿಕೆ – ರೇಡಾರ್ ವಿಶೇಷತೆಯೇನು?