ಬಳ್ಳಾರಿ: ಕಾಂಗ್ರೆಸ್ ಸೇರುವ ಕುರಿತು ಶಾಸಕ ಸೋಮಶೇಖರ ರೆಡ್ಡಿ ನೀಡಿರುವ ಹೇಳಿಕೆಯನ್ನು ಸೀರಿಯಸ್ಸಾಗಿ ತೆಗೆದುಕೊಳ್ಳಬೇಡಿ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.
ಬಳ್ಳಾರಿ ನಗರದ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಮಾತನಾಡಿದ ಅವರು, ರೆಡ್ಡಿ ಹೇಳಿಕೆಯನ್ನ ಗಂಭೀರವಾಗಿ ತೆಗೆದುಕೊಳ್ಳಬಾರದು. ನನ್ನ ಜೊತೆನೂ ಅನೇಕ ಕಾಂಗ್ರೆಸ್ ಶಾಸಕರು ಮಾತನಾಡುತ್ತಾರೆ, ಅಣ್ಣ ನಾನು ನಿನ್ ಜೊತೆ ಇರ್ತೀನಿ ಅಂತಾರೆ. ಆದರೆ ಅವರು ಬರೋಕೆ ಆಗಲ್ಲ. ಅದೇ ರೀತಿ ಸೋಮಶೇಖರ್ ರೆಡ್ಡಿ ಅವರು ಸಿದ್ದರಾಮಯ್ಯ ಅವರ ಜೊತೆ ಫ್ಲೋ ಅಲ್ಲಿ ಮಾತನಾಡಿದ್ದಾರೆ ಅಷ್ಟೇ ಎಂದು ಹೇಳಿದರು. ಇದನ್ನೂ ಓದಿ: ಗಂಡನ ವೀರ್ಯವನ್ನು ಕೇಕ್‍ನಲ್ಲಿ ಮಿಕ್ಸ್ ಮಾಡಿ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಶಿಕ್ಷಕಿಗೆ 40 ವರ್ಷ ಜೈಲು
Advertisement
Advertisement
ಸೋಮಶೇಖರ್ ರೆಡ್ಡಿ ಈ ಭಾಗದ ಹಿರಿಯ ನಾಯಕರು, ಹೀಗಾಗಿ ಅವರು ಬಿಜೆಪಿ ಬಿಟ್ಟು ಹೋಗಲ್ಲ. ಸೋಮಶೇಖರ್ ರೆಡ್ಡಿ ಅವರ ಮಾತನ್ನ ಯಾರೂ ಸೀರಿಯಸ್ ಆಗಿ ತಗೊಳಲ್ಲ. ಸಿದ್ದರಾಮಯ್ಯನವರು ನನ್ನ ಜೊತೆ ಮಾತನಾಡುವಾಗ ರಾಮುಲು ಅವರೇ ನಮಗೆ ಅವಕಾಶ ಕೊಟ್ಟರೆ ನಾವು ನಿಮ್ಮ ಜೊತೆ ಬರ್ತೀವಿ ಅಂತಾರೆ. ಹಾಗೆಂದ ಮಾತ್ರಕ್ಕೆ ಅವರು, ಬಿಜೆಪಿಗೆ ಬರುತ್ತಾರಾ..?. ಹೀಗಾಗಿ ಯಾರು ಕೂಡಾ ಈ ರೀತಿಯ ಮಾತುಗಳನ್ನ ಸೀರಿಯಸ್ ಆಗಿ ತಗೊಳೋದು ಬೇಕಿಲ್ಲ ಎಂದು ಸಚಿವರು ಮನವಿ ಮಾಡಿದರು.
Advertisement
Advertisement
ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನ ವಿಧಾನಸೌದದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯನ ಮುಂದೆ ಜನಾರ್ದನ ರೆಡ್ಡಿ ಒಪ್ಪಿಕೊಂಡರೆ, ಕಾಂಗ್ರೆಸ್ ಬರುತ್ತೇವೆ ಎಂದು ರೆಡ್ಡಿ ಹೇಳಿಕೆ ನೀಡಿದ್ದರು. ಈ ವಿಚಾರ ಭಾರೀ ಸುದ್ದಿಯಾಗಿತ್ತು. ಇದನ್ನೂ ಓದಿ: ಹಿಜಬ್ ವಿವಾದದ ಹಿಂದೆ ಬಿಜೆಪಿ, ಎಸ್‍ಡಿಪಿಐ ಇದೆ: ಡಿಕೆಶಿ ಆರೋಪ