ಉಡುಪಿ: ಕೇಂದ್ರ ಕೃಷಿ ಬಿಲ್‍ನ ಸಾಧಕ ಬಾಧಕ ಚರ್ಚೆ ಮಾಡದೆ ಬಿಲ್ ಸರಿಯಿಲ್ಲ ಎಂದು ರೈತ ಪರ ಹೋರಾಟಗಾರರು ತೀರ್ಮಾನಿಸುವುದು ಹೇಗೆ? ಬಂದ್ ಮಾಡಲು ತೀರ್ಮಾನ ಮಾಡಿರುವ ಮೊದಲು ಲಾಭ ನಷ್ಟದ ಬಗ್ಗೆ ಚರ್ಚಿಸಿ ಎಂದು ಕೇಂದ್ರ ಕೃಷಿ, ರೈತ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ.
Advertisement
ರೈತ ಹೋರಾಟಗಾರರ ಜೊತೆ 11 ಸುತ್ತಿನ ಮಾತುಕತೆ ಆಗಿದೆ ಮತ್ತೆ ಮಾತುಕತೆಗೆ ಕೇಂದ್ರ ಸರ್ಕಾರ ಸಿದ್ಧವಾಗಿದೆ. ಕೇಂದ್ರ ಕೃಷಿ ಬಿಲ್ ನಿಂದ ಲಾಭ ಏನು ನಷ್ಟ ಏನು ಎಂದು ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಶೋಭಾ ಕರಂದ್ಲಾಜೆ ಉಡುಪಿಯಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ದಂಪತಿ ಜಗಳಕ್ಕೆ ಬಲಿಯಾದ 22ದಿನದ ಕಂದಮ್ಮ
Advertisement
Advertisement
ಸೋಮವಾರ ಭಾರತ್ ಬಂದ್‍ಗೆ ಕರೆ ವಿಚಾರ ಪ್ರತಿಕ್ರಿಯೆ ನೀಡುತ್ತಿದ್ದರು. ಚರ್ಚೆಯೇ ಆಗದೆ ಲಾಭ ನಷ್ಟದ ಬಗ್ಗೆ ಗೊತ್ತಾಗುವುದಿಲ್ಲ. ಕೇಂದ್ರದ ಬಿಲ್ ಅನುಷ್ಠಾನ ಮಾಡಿದ ರಾಜ್ಯಗಳ ರೈತರಿಗೆ ಲಾಭ ಆಗಿದೆ. ಆ ರಾಜ್ಯದ ವರದಿಯನ್ನು ರೈತ ಹೋರಾಟಗಾರರು ತರಿಸಿಕೊಳ್ಳಬೇಕು. ರೈತರ ವಿಚಾರದಲ್ಲಿ ರಾಜಕೀಯ ಇಲ್ಲ. ರೈತರ ವಿಚಾರದಲ್ಲಿ ಧರ್ಮ ಮತ್ತು ಪಕ್ಷಗಳು ಇಲ್ಲ. ದೇಶಕ್ಕೆ ಅನ್ನ ಕೊಡುವವರ ರೈತರ ಜೊತೆ ಚರ್ಚೆಗೆ ಸಿದ್ಧ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.
Advertisement