ಬೆಳಗಾವಿ: ಕೋವಿಡ್-19 (Covid 19) ಬಗ್ಗೆ ಜನ ಗಂಭೀರವಾಗಿ ತೆಗೆದುಕೊಳ್ಳದೇ ಇದ್ರೆ, ಸಾವಿನ ಸಂಖ್ಯೆ ತಡೆಯೋಕಾಗಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಆತಂಕಪಟ್ಟಿದ್ದಾರೆ.
Advertisement
ದೇಶದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳದ ಹಿನ್ನೆಲೆ ಬೆಳಗಾವಿಯಲ್ಲಿಂದು (Belagavi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಅನ್ನು ಜನ ಗಂಭೀರವಾಗಿ ತೆಗೆದುಕೊಳ್ಳಬೇಕು. ಇಲ್ಲದಿದ್ದರೇ ಸಾವಿನ ಸಂಖ್ಯೆ ತಡೆಯಲು ಆಗಲ್ಲ. ಯಾರೂ ಆತಂಕ ಪಡಬಾರದು. ಹಾಗೆಯೇ ಉಡಾಫೆ ಮಾಡಬಾರದು ಎಂದು ಸಲಹೆ ನೀಡಿದ್ದಾರೆ.
Advertisement
Advertisement
ಈ ಹಿಂದೆ ಪೊಲೀಸ್ ಇಲಾಖೆಯಲ್ಲೂ (Police Department) ಬಹಳ ಜನ ಮೃತಪಟ್ಟರು. ಈ ಬಾರಿ ಕೂಡಾ ಕೋವಿಡ್ ವಿರುದ್ಧ ಹೋರಾಟ ಮಾಡ್ತಾರೆ. ಎಲ್ಲ ರೀತಿಯಲ್ಲೂ ಸೂಚನೆ ಕೊಡಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಯಾವತ್ತೂ ದನ ಕಾಯದೇ ಇರೋರು, ಸಗಣಿ ಎತ್ತದವರು ಗೋವು ರಕ್ಷಣೆ ಅಂತಾರೆ – ಸಿದ್ದು ಲೇವಡಿ
Advertisement
ಪಿಎಸ್‌ಐ (PSI) ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಮಾತನಾಡಿ, ಪಿಎಸ್‌ಐ ಪರೀಕ್ಷೆ ಬರೆದು ಪಾಸ್ ಆದ ವಿದ್ಯಾರ್ಥಿಗಳ (Students) ಮನವಿ ಸ್ವೀಕರಿಸಿದ್ದೇನೆ. ಆದರೆ ಈ ಪ್ರಕರಣ ನ್ಯಾಯಾಲಯದಲ್ಲಿದೆ. ಈ ಹಂತದಲ್ಲಿ ಗೃಹ ಸಚಿವನಾಗಿ ನನಗೆ ನಿರ್ಧಾರ ಹೇಳಲು ಕಷ್ಟ ಆಗುತ್ತೆ. ಸಿಒಡಿ ತನಿಖಾ (COD Investigation) ವರದಿ ಬಂದ ಮೇಲೆ ನಮ್ಮ ನಿಲುವು ತಿಳಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ನಾವೇ ಚೀನಾದ ವುಹಾನ್‌ಗೆ ಹೋಗಿ ವೈರಸ್ ಬಿಟ್ಟಿದ್ವಾ – ಕಾಂಗ್ರೆಸ್‌ಗೆ ಸುಧಾಕರ್ ಪ್ರಶ್ನೆ
ಇದೇ ವೇಳೆ ಲವ್ ಜಿಹಾದ್ (Love Jihad) ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಮತಾಂತರ ನಿಷೇಧ ಕಾಯ್ದೆಯಲ್ಲೇ ಲವ್ ಜಿಹಾದ್‌ಗೆ ಸಂಬಂಧಿಸಿದ ಕಾನೂನು ಅಂಶಗಳು ಅಡಕವಾಗಿದೆ. ಆದ್ದರಿಂದ ಏಕಾಏಕಿ ಯಾರು ಯಾರನ್ನೋ ಮದುವೆಯಾಗಲು ಆಗುವುದಿಲ್ಲ. ಸದ್ಯ ರಾಜ್ಯದಲ್ಲಿ ಎರಡು ಲವ್ ಜಿಹಾದ್ ಪ್ರಕರಣಗಳು ದಾಖಲಾಗಿವೆ. ಈಗಿನ ಪರಿಸ್ಥಿತಿಯಲ್ಲಿ ಟಾಸ್ಕ್ ಫೋರ್ಸ್ ಅಗತ್ಯವಿಲ್ಲ. ಏಕೆಂದರೆ ಉತ್ತರ ಪ್ರದೇಶದ ಮಾದರಿ ಬೇರೆ, ನಮ್ಮ ರಾಜ್ಯದ ಮಾದರಿಯೇ ಬೇರೆ ಎಂದು ತಿಳಿಸಿದ್ದಾರೆ.