ಚಿತ್ರದುರ್ಗ: ಸಿಎಂ ಸಿದ್ದರಾಮಯ್ಯ ಗಂಡೋ ಹೆಣ್ಣೋ ಎಂಬ ಸಂಶಯ ಇದೆ ಎಂದು ಬಿಜೆಪಿಯ ವಿರೋಧ ಪಕ್ಷದ ನಾಯಕ ಈಶ್ವರಪ್ಪ ನಾಲಿಗೆ ಹರಿಬಿಟ್ಟಿದ್ದಾರೆ.
ಜಿಲ್ಲೆಯಲ್ಲಿ ಸಭೆಯೊಂದರಲ್ಲಿ ಮಾತನಾಡಿದ ಈಶ್ವರಪ್ಪ, ಸಿದ್ದರಾಮಯ್ಯ ಗಂಡೋ, ಹೆಣ್ಣೋ? ಎಂಬ ಸಂಶಯ ಇದೆ. ಸಮಾಜ ಕಲ್ಯಾಣ ಇಲಾಖೆಯ ಸಚಿವ ಆಂಜನೇಯನನ್ನು ಗಂಡು ಅಂತಾ ಕರೀಬೇಕೋ ಹೆಣ್ಣು ಅಂತಾ ಕರೀಬೇಕೋ ಅಂತಾ ಗೊತ್ತಿಲ್ಲ ಎಂದು ವ್ಯಂಗ್ಯವಾಗಿ ಮಾತನಾಡಿದರು.
Advertisement
Advertisement
ಆಂಜನೇಯ ಸಿಎಂ ಅವರ ನಾಯಿ. ಯಾವಾಗಲೂ ಅವರ ಬಾಲ ಹಿಡಿದುಕೊಂಡು ಹೋಗುತ್ತಿರುತ್ತಾರೆ. ಅವರ ಬಾಲ ಅಲ್ಲಾಡಿಸುವುದು ಇನ್ನೂ ನಾಲ್ಕೈದು ತಿಂಗಳು ಮಾತ್ರ ಎಂದು ಬಾಯಿಗೆ ಬಂದಂತೆ ಮಾತಾಡಿದ್ದಾರೆ. ಅಷ್ಟೇ ಅಲ್ಲದೇ ಕಾಂಗ್ರೆಸ್ ಕುಮ್ಮಕ್ಕಿನಿಂದ ಪೊಲೀಸರು ಇನ್ನೊಂದು ಕೇಸ್ ಹಾಕಿದ್ರೆ ನಾವು ಜಂಗಿ ಕುಸ್ತಿ ಆಡೋಕೆ ರೆಡಿ ಇದ್ದೇವೆ. ಬಡವರ ದುಡ್ಡಿನಿಂದ ನಿಮಗೆ ಸಂಬಳ ನೀಡುತ್ತಿರುವುದು. ಕಾಂಗ್ರೆಸ್ ಕುಮ್ಮಕ್ಕಿನಿಂದ ಕೇಸ್ ಹಾಕಿದ್ರೆ ಎಚ್ಚರಿಕೆ ಎಂದು ಎಸ್ಪಿ ಲಕ್ಷ್ಮಣ್ ನಿಂಬರಗಿ ವಿರುದ್ಧ ಆಕ್ರೋಶದಿಂದ ಹೇಳಿದ್ದಾರೆ.
Advertisement
ಶುಕ್ರವಾರ ಬೆಳಗಾವಿಯಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ನಾಲಗೆ ಹರಿಬಿಟ್ಟು, ಸಿದ್ದರಾಮಯ್ಯ ವೋಟಿಗಾಗಿ ಯಾರ ಬೂಟು ನೆಕ್ಕೋಕೂ ರೆಡಿಯಾಗಿರುತ್ತಾರೆ ಅಂತೆಲ್ಲಾ ಬಾಯಿಗೆ ಬಂದಂತೆ ಮಾತನಾಡಿದ್ದರು.
Advertisement
ಇದನ್ನು ಓದಿ: ‘ನಾನು ಗಂಡು, ನನಗೆ ಎರಡು ಮಕ್ಕಳಿವೆ.., ಬೇಕಾದ್ರೆ ನಿನ್ನ ಮನೆಗೆ ಬಂದು ತೋರಿಸ್ತೀನಿ’ ಎಂದ ಜೆಡಿಎಸ್ ಶಾಸಕ
ಇದನ್ನು ಓದಿ: ತಲೆ ತಿರುಕ, ಬುರುಡೆ ದಾಸ ಸಿಎಂರಿಂದ ರಾಜ್ಯಕ್ಕೆ ಮೋಸವಾಗ್ತಿದೆ: ಬಿಎಸ್ವೈ