ಶ್ರೀಸಾಮಾನ್ಯನನ್ನು ಅವಮಾನಿಸಬೇಡಿ – ಮೋದಿ ವಿರುದ್ಧ ಕೇಜ್ರಿವಾಲ್ ಕಿಡಿ

Public TV
2 Min Read
Arvind Kejriwal 2

ನವದೆಹಲಿ: ಹಣದುಬ್ಬರದಿಂದ ಆತಂಕಕ್ಕೊಳಗಾಗಿರುವ ಜನರಿಗೆ ಉಚಿತ ಶಿಕ್ಷಣ ಮತ್ತು ಚಿಕಿತ್ಸೆಯನ್ನು ಏಕೆ ನೀಡಬಾರದು? ಅಲ್ಲದೇ ಇಂತಹ ವಿಚಾರಗಳನ್ನು ಇಟ್ಟುಕೊಂಡು ಉಚಿತ ರೇವಡಿ (Revdi) ಎಂದು ಕರೆಯುವ ಮೂಲಕ ಶ್ರೀಸಾಮಾನ್ಯನಿಗೆ ಅವಮಾನ ಮಾಡಬಾರದು ಎಂದು ದೆಹಲಿ ಮುಖ್ಯಮಂತ್ರಿ (Delhi Chief Minister) ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಹೇಳಿದ್ದಾರೆ.

NARENDRA MODI 4

ಶನಿವಾರ ಮಧ್ಯಪ್ರದೇಶದ (Madhya Pradesh) ಸತ್ನಾ (Satna) ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ (Prime Minister Awas Yojana) (ಪಿಎಂಎವೈ)ಯ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು, ರಾಜಕೀಯ ಸಂಸ್ಕೃತಿಯನ್ನು “ರೇವಡಿ” ಎಂದು ಕರೆಯುವ ಮೂಲಕ ಟೀಕಿಸಿದ್ದರು. ಇದನ್ನೂ ಓದಿ: ರಾಹುಲ್ ಗಾಂಧಿ ಎಂದರೆ ಯಾರು, ಏನು ಎನ್ನುವುದನ್ನು ಭಾರತ್ ಜೋಡೋ ತೋರಿಸಿಕೊಟ್ಟಿದೆ: ಸಿದ್ದರಾಮಯ್ಯ

ಈ ವೀಡಿಯೋವನ್ನು ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋ ಜೊತೆಗೆ, ಬೆಲೆ ಏರಿಕೆಯಿಂದ ಜನ ಕಂಗಾಲಾಗಿದ್ದಾರೆ. ಅವರಿಗೆ ಉಚಿತ ಶಿಕ್ಷಣ, ಚಿಕಿತ್ಸೆ, ಔಷಧ ಮತ್ತು ವಿದ್ಯುತ್ ಏಕೆ ಸಿಗಬಾರದು? ರಾಜಕಾರಣಿಗಳಿಗೆ ಹಲವು ಸೌಲಭ್ಯಗಳು ಉಚಿತವಾಗಿ ಸಿಗುತ್ತದೆ. ಎಷ್ಟೋ ಶ್ರೀಮಂತರ ಸಾಲವನ್ನು ಬ್ಯಾಂಕ್‍ಗಳು ಮನ್ನಾ ಮಾಡಿವೆ. ಭಾರತದ ಬೆಳವಣಿಗೆಗೆ ಉಚಿತ ಶಿಕ್ಷಣ ಮತ್ತು ಆರೋಗ್ಯ ಸೇವೆ ಮಹತ್ವದ್ದಾಗಿದೆ. ಈ ಕಲ್ಯಾಣ ಯೋಜನೆಗಳನ್ನು “ಉಚಿತ ಕೊಡುಗೆ” ಅಥವಾ ”ರೇವಡಿ” ಎಂದು ಮತ್ತೆ, ಮತ್ತೆ ಕರೆಯುವ ಮೂಲಕ ಸಾಮಾನ್ಯ ಜನರನ್ನು ಅವಮಾನಿಸಬೇಡಿ ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.

ಈ ಹಿಂದೆ ನರೇಂದ್ರ ಮೋದಿ ಅವರು, ಮತ ಗಳಿಸಲು ಉಚಿತ ಕೊಡುಗೆ ಭರವಸೆಗಳ ಸಂಸ್ಕೃತಿ ಈ ದಿನಗಳಲ್ಲಿ ಸಾಮಾನ್ಯ. ಜನರು, ಅದರಲ್ಲೂ ಯುವಜನರು ಇದಕ್ಕೆ ಬಲಿಯಾಗಬಾರದು. ಈ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ. ಇಂತಹ ರೇವಡಿ (ಉತ್ತರಪ್ರದೇಶ ಸೇರಿ ಉತ್ತರ ಭಾರತದ ಹಬ್ಬಗಳಲ್ಲಿ ನೀಡುವ ಜನಪ್ರಿಯ ಸಿಹಿ ತಿನಿಸಿಗೆ ರೇವಡಿ ಎನ್ನುವ ಹೆಸರಿದೆ) ಉಚಿತ ಕೊಡುಗೆಗಳು ಎಂದಿಗೂ ತಡೆರಹಿತ ಹೆದ್ದಾರಿಗಳು, ರಕ್ಷಣಾ ಕಾರಿಡಾರ್‌ಗಳು ಅಥವಾ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾರವು ಎಂದು ಎಎಪಿ (Aam Aadmi Party) ವಿರುದ್ಧ ಮೋದಿ ಅವರು ವಾಗ್ದಾಳಿ ನಡೆಸಿದ್ದರು. ಇದನ್ನೂ ಓದಿ: ಕಾಳಿಂಗ ಸರ್ಪಗೆ ಕಿಸ್ ಕೊಟ್ಟ ಭೂಪ – ವ್ಯಕ್ತಿ ಧೈರ್ಯಕ್ಕೆ ಶಹಬ್ಬಾಸ್‌ ಅಂದ ನೆಟ್ಟಿಗರು

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *