ಬೆಳಗಾವಿ: ಮೈಸೂರಿನಲ್ಲಿ ಯಾವುದೇ ಸಭೆ ನಡೆಸದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
ಮೇಕೆದಾಟು ಪಾದಯಾತ್ರೆ ವಿಷಯದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಪ್ರತಿಷ್ಠೆಯ ಕದನ ಶುರುವಾಗಿದೆ ಎನ್ನಲಾಗುತ್ತಿದೆ. ಮೇಕೆದಾಟು ಪಾದಯಾತ್ರೆ ವಿಚಾರದಲ್ಲಿ ಎಷ್ಟು ದೂರ ಪಾದಯಾತ್ರೆ ನಡೆಸಬೇಕು, ಯಾವ ದಿನಾಂಕದಂದು ಪಾದಯಾತ್ರೆ ನಡೆಸಬೇಕು ಎಂಬ ವಿಚಾರದಲ್ಲಿ ಮಾಜಿ ಸಿಎಂ ಹಾಗೂ ಡಿಕೆಶಿ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
Advertisement
Advertisement
ಈ ಹಿಂದೆ ಬಳ್ಳಾರಿಗೆ 330 ಕಿಮೀ ಪಾದಯಾತ್ರೆ ನಡೆದಿದೆ. ನನ್ನ ಅವಧಿಯಲ್ಲಿ ಕನಿಷ್ಠ 250 ಕಿಮೀ ಪಾದಯಾತ್ರೆ ನಡೆಯಬೇಕು ಎಂಬುದು ಡಿಕೆಶಿ ಲೆಕ್ಕಾಚಾರವಂತೆ. ಆದರೆ ನೇರವಾಗಿ ಮೇಕೆದಾಟುವಿನಿಂದ ಕನಕಪುರ, ರಾಮನಗರ, ಬಿಡದಿ ಮೂಲಕ 160 ಕಿಮೀ ಪಾದಯಾತ್ರೆ ಸಾಕು ಅನ್ನೋದು ಸಿದ್ದರಾಮಯ್ಯ ವಾದವಾಗಿದೆ. ಡಿ.ಕೆ.ಶಿವಕುಮಾರ್ ಜನವರಿ 2 ರಿಂದಲೇ ಪಾದಯಾತ್ರೆಗೆ ಸಿದ್ಧವಾಗಿದ್ದರಂತೆ. ಆನಂತರ ದಿನಾಂಕ ಬದಲಿಸಿ ಜನವರಿ 9 ರಿಂದ ಪಾದಯಾತ್ರೆಗೆ ಡಿಕೆಶಿ ದಿನಾಂಕ ನಿಗದಿಪಡಿಸಿದ್ದರು. ಆದರೆ ಸಂಕ್ರಾಂತಿ ಕಾರಣ ನೀಡಿ ಸಿದ್ದರಾಮಯ್ಯ ಆ ದಿನಾಂಕವನ್ನ ನಿರಾಕರಿಸಿದ್ದಾರೆ. ಜನವರಿ 15 ರ ನಂತರ ದಿನಾಂಕ ನಿಗದಿಪಡಿಸುವಂತೆ ಸಿದ್ದರಾಮಯ್ಯ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಸದನದಲ್ಲಿ ಬಹುಮತವಿದೆ ಎಂದು ದಬ್ಬಾಳಿಕೆ ಸಲ್ಲದು: ಹೆಚ್.ಡಿ ಕುಮಾರಸ್ವಾಮಿ
Advertisement
Advertisement
ಇತ್ತ ಪದೇ ಪದೇ ಪಾದಯಾತ್ರೆ ವಿಚಾರದಲ್ಲಿ ಸಿದ್ದರಾಮಯ್ಯ ಮಾತೇ ಮೇಲಾಗುತ್ತಿದ್ದಂತೆ ಕೆರಳಿದ ಡಿಕೆಶಿ, ಮೈಸೂರು ಚಾಮರಾಜನಗರ ಶಾಸಕರ ಸಭೆ ನಡೆಸಿ ಪಾದಯಾತ್ರೆ ರೂಪುರೇಷೆ ತಯಾರಿಕೆಗೆ ಮುಂದಾಗಿದ್ದಾರೆ. ಈ ವಿಷಯ ಗೊತ್ತಾಗುತ್ತಿದ್ದಂತೆ ನಿನ್ನೆ ಮುಖ ಗಂಟಿಕ್ಕಿಕೊಂಡೇ ವಿಪಕ್ಷ ನಾಯಕ ಸಿದ್ದರಾಮಯ್ಯ ಡಿಕೆಶಿ ವಿರುದ್ಧ ಸಿಡುಕಿದ್ದಾರೆ. ಕಲಾಪ ಆರಂಭಕ್ಕೂ ಮುನ್ನ ಸಿದ್ದರಾಮಯ್ಯ ಡಿಕೆಶಿಗೆ ಟಾಂಗ್ ನೀಡಿದ್ದಾರೆ. ಡಿಕೆಶಿ ಮುಖ ನೋಡುತ್ತಿದ್ದಂತೆ ಏಯ್ ಅಧ್ಯಕ್ಷ.. ಬಾರಯ್ಯ ಕುಳಿತುಕೋ.. ಮೈಸೂರಿನಲ್ಲಿ ನೀನು ಸಭೆ ನಡೆಸಬೇಡ. ನನ್ನ ಜಿಲ್ಲೆಯಲ್ಲಿ ಯಾವುದೇ ಸಭೆ ಮಾಡಬೇಡ ಎಂದಿದ್ದಾರೆ.
ಅಲ್ಲದೆ ಮೈಸೂರು, ಚಾಮರಾಜನಗರ ಸುದ್ದಿಗೋಷ್ಠಿಯನ್ನೂ ನಡೆಸಬೇಡ, ಕೊಡಗು ಜಿಲ್ಲೆಯಲ್ಲಿ ಬೇಕಾದರೆ ಸಭೆ ಮಾಡಿಕೋ. ಆದರೆ ನನ್ನ ಜಿಲ್ಲೆಯಲ್ಲಿ ಮಾಡಬೇಡ. ನೀನು ಹೋಗಿ ಸಭೆ ನಡೆಸಬೇಡ. ನಾವಿಬ್ಬರು ಒಟ್ಟಿಗೆ ಇಲ್ಲ ಅಂದ್ರೆ ತಪ್ಪು ಸಂದೇಶ ರವಾನೆಯಾಗಲಿದೆ ಎಂದಿದ್ದಾರೆ. ಈ ವೇಳೆ ಸಭೆ ಕ್ಯಾನ್ಸಲ್ ಮಾಡಲ್ಲ ಎಂದ ಡಿಕೆಶಿ, ಸಿದ್ದರಾಮಯ್ಯ ಸಭೆಗೆ ಬರುವ ಡೇಟ್ ಫಿಕ್ಸ್ ಮಾಡಲು ಮುಂದಾಗಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: ವ್ಯಾಕ್ಸಿನ್ ಪ್ರಮಾಣ ಪತ್ರದಲ್ಲಿ ಮೋದಿ ಫೋಟೊ ತೆರವು ಕೋರಿ ಸಲ್ಲಿಸಿದ್ದ ಅರ್ಜಿ ವಜಾ