ನವದೆಹಲಿ: ಹಿಮಾಚಲ ಪ್ರದೇಶದಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಮುಂದಾಗುತ್ತಿರುವ ಆಮ್ ಆದ್ಮಿ ಪಕ್ಷ ಇದೀಗ ಹಿಮಾಚಲ ಪ್ರದೇಶದತ್ತ ತನ್ನ ಗಮನಹರಿಸಿದೆ. ಅದಕ್ಕಾಗಿ ಪ್ರಮುಖ ನಾಯಕರನ್ನು ಆಪ್‌ಗೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದು, ಬಿರುಸಿನ ಪ್ರಚಾರ ನಡೆಸಲು ಮುಂದಾಗುತ್ತಿದೆ.
ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿರುವ ದೆಹಲಿ ಉಪಮುಖ್ಯಮಂತ್ರಿ ಮನಿಷ್ ಸಿಸೋಡಿಯಾ, ಎಎಪಿಗೆ ಮತ ನೀಡಿ ಬೆಂಬಲಿಸುವಂತೆ ಕೋರಿದ್ದು, ಬಿಜೆಪಿಯ ಬಲೆಗೆ ಬೀಳದಂತೆಯೂ ಎಚ್ಚರಿಸಿದರು. ಇದನ್ನೂ ಓದಿ: ಹಿಮಾಚಲ ಪ್ರದೇಶದ ಸರ್ಕಾರಿ ಬಸ್‍ಗಳಲ್ಲಿ ಪ್ರಯಾಣಿಸುವ ಮಹಿಳೆಯರಿಗೆ 50% ರಿಯಾಯಿತಿ: ಸಿಎಂ ಠಾಕೂರ್
Advertisement
Advertisement
ಬಿಜೆಪಿ ಸೋಲುವ ಭಯದಿಂದ ಹತ್ತು ಹಲವು ಉಚಿತ ಕೊಡುಗೆಗಳನ್ನು ಘೋಷಿಸುತ್ತಿದೆ. ಇದಕ್ಕೆ ಮಣಿಯದೇ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಮತ ಹಾಕುವಂತೆ ಮನವಿ ಮಾಡಿದರು.
Advertisement
ಬಿಜೆಪಿ ಮತ್ತೆ ಹಿಮಾಚಲ ಪ್ರದೇಶದಲ್ಲಿ ಸರ್ಕಾರ ರಚಿಸಿದರೆ, ವಿದ್ಯುತ್, ಸಾರಿಗೆ ದರ ಸೇರಿದಂತೆ ಎಲ್ಲ ಉಚಿತ ಕೊಡುಗೆಗಳನ್ನು ಹಿಂಪಡೆಯುತ್ತದೆ, ಇದು ಸತ್ಯ. ಜನರಿಗೆ ಅಗತ್ಯವಸ್ತುಗಳನ್ನು ಕಡಿಮೆ ದರದಲ್ಲಿ ಒದಗಿಸಬೇಕು ಎಂಬ ಪರಿಕಲ್ಪನೆ ಎಂದಿಗೂ ಬಿಜೆಪಿಗೆ ಇಲ್ಲ. ಇದೀಗ ಆಪ್‌ನೊಂದಿಗೆ ಹೋರಾಡಲು ಹೆದರಿ ಬಿಜೆಪಿ ಉಚಿತ ಕೊಡುಗೆಗಳನ್ನು ನೀಡುತ್ತಿದೆ ಎಂದು ಸಿಸೋಡಿಯಾ ಹೇಳಿದ್ದಾರೆ. ಇದನ್ನೂ ಓದಿ: ಅಮಿತ್ ಶಾ ಆಗಮನದ ವೇಳೆ ಕೇಬಲ್ ವಯರ್ ಸ್ಫೋಟ – ವರದಿ ಕೇಳಿದ ಗೃಹ ಸಚಿವಾಲಯ
Advertisement
हिमाचल वालों! BJP के झांसे में मत आना!
ये सिर्फ़ चुनाव के डर से Free की घोषणा कर रहे हैं।
अगर दोबारा BJP आ गई तो ये सारी घोषणा वापस ले लेगी क्योंकि पूरे देश में इन्होंने हर चीज महंगी की है, कभी जनता को राहत नहीं दी।
AAP को ही Vote देना! -श्री @msisodia pic.twitter.com/XJ9uXkklkz
— AAP (@AamAadmiParty) April 15, 2022
ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರು, ಹಿಮಾಚಲ ಪ್ರದೇಶದ ನಿವಾಸಿಗಳಿಗೆ 125 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಿದ್ದೇವೆ. ಶೂನ್ಯದಿಂದ 125 ಯೂನಿಟ್ ವಿದ್ಯುತ್ ಬಳಸುವ ಕುಟುಂಬಗಳು ಇನ್ನುಮುಂದೆ ಬಿಲ್ ಪಾವತಿಸಬೇಕಾಗಿಲ್ಲ. ಒಟ್ಟು 11.5 ಲಕ್ಷ ಕುಟುಂಬಗಳು ಇದರ ಪ್ರಯೋಜನ ಪಡೆಯಲಿವೆ. ಅಲ್ಲದೆ, ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಬಿಲ್‌ಗಳನ್ನು ಮನ್ನಾ ಮಾಡಲಾಗುವುದು ಎಂದು ಘೋಷಿಸಿದರು.
ವರ್ಷದ ಕೊನೆಯಲ್ಲಿ ಹಿಮಾಚಲ ಪ್ರದೇಶದಲ್ಲಿ ಚುನಾವಣೆ ನಡೆಯಲಿದ್ದು, ಬಿಜೆಪಿ ಸತತ 2ನೇ ಬಾರಿಗೆ ಅಧಿಕಾರ ಉಳಿಸಿಕೊಳ್ಳುವ ಗುರಿ ಹೊಂದಿದೆ. ಇದಕ್ಕೆ ಜನತೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.