ಬೆಂಗಳೂರು: ಅಮಿತ್ ಶಾ ಬೆಂಗಳೂರಿಗೆ ಬಂದ ದಿನ ಕೇಬಲ್ ವಯರ್ ಜಂಕ್ಷನ್ ಸ್ಫೋಟಗೊಂಡ ಬಗ್ಗೆ ಕಾರಣ ನೀಡಿ ವರದಿ ನೀಡುವಂತೆ ಕೇಂದ್ರ ಗೃಹ ಸಚಿವಾಲಯ ಸರ್ಕಾರವನ್ನು ಕೇಳಿದೆ.
ಕೇಂದ್ರ ಗೃಹ ಇಲಾಖೆ ವರದಿ ಕೇಳಿರುವ ಹಿನ್ನೆಲೆ ಪೊಲೀಸರು ಘಟನೆಯ ಮೂಲವನ್ನು ಬೆನ್ನು ಹತ್ತಿ, ಸುಟ್ಟ ಕೇಬಲ್ ವಯರ್‌ಗಳನ್ನು ಪ್ಯಾಕ್ ಮಾಡಿ ವಿಧಿ ವಿಜ್ಞಾನ ಪ್ರಯೋಗಾಲಯ(ಎಫ್‍ಎಸ್‍ಎಲ್)ಗೆ ಕಳುಹಿಸಿದ್ದಾರೆ. ಇದನ್ನೂ ಓದಿ: ತಪ್ಪು ಮಾಡಿದ್ದರೆ ಶಿಕ್ಷಿಸು, ಇಲ್ಲವೇ ರಕ್ಷಿಸು – ಮನೆದೇವರ ಮೊರೆಹೋದ ಈಶ್ವರಪ್ಪ
Advertisement
Advertisement
ಅಷ್ಟೇ ಅಲ್ಲದೇ ವಸಂತನಗರದ ಕೇಬಲ್ ವಿಭಾಗವನ್ನು ನೋಡಿಕೊಳ್ಳುತ್ತಿದ್ದ ಉಸ್ತುವಾರಿಯ ಬಗ್ಗೆ ವರದಿ ನೀಡುವಂತೆ ಬೆಸ್ಕಾಂಗೆ ಪೊಲೀಸರು ಪತ್ರ ಬರೆದಿದ್ದಾರೆ. ಬೆಸ್ಕಾಂ ಹಾಗೂ ಎಫ್‍ಎಸ್‍ಎಲ್ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಲಿದೆ. ಇದನ್ನೂ ಓದಿ: ಕುಂಭಾಭಿಷೇಕಕ್ಕೆ ಮಸೀದಿಯಿಂದ ಫ್ಲೆಕ್ಸ್- ಸಮಾನತೆ ಸಾರಿದ ಕಾಫಿನಾಡ ಮುಸ್ಲಿಮರು
Advertisement
Advertisement
ಶುಕ್ರವಾರ ಏಪ್ರಿಲ್ 1ರ ಸಂಜೆ 4:30 ರ ಸುಮಾರಿಗೆ ಅಮಿತ್ ಶಾ ಬೆಂಗಳೂರಿಗೆ ಬಂದಿದ್ದ ದಿನ ಕೇಬಲ್ ವಯರ್ ಜಂಕ್ಷನ್ ಬ್ಲಾಸ್ಟ್ ಆಗಿತ್ತು. ಈ ವೇಳೆ ಪೊಲೀಸರು ಕೇಬಲ್ ವಯರ್ ಜಂಕ್ಷನ್ ಬ್ಲಾಸ್ಟ್ ಆಗುತ್ತಿದ್ದಂತೆ ಅಮಿತ್ ಶಾ ಸಂಚರಿಸುವ ಮಾರ್ಗವನ್ನು ಬದಲಿಸಿದ್ದರು. ಅವರು ಸಹಕಾರ ಇಲಾಖೆಯ ಕಾರ್ಯಕ್ರಮಕ್ಕೆ ವಸಂತನಗರ ಮಾರ್ಗವಾಗಿ ಸಂಚರಿಸಬೇಕಿತ್ತು.