-ಸಿಎಂ ಆಗಿದ್ದವರು ಎಸ್‌ಐಟಿ ಮೇಲೆ ಅನುಮಾನ ಪಟ್ಟರೆ ಹೇಗೆ?
ಬೆಂಗಳೂರು: ಪ್ರಜ್ವಲ್ ರೇವಣ್ಣ ಪೆನ್‍ಡ್ರೈವ್ ಪ್ರಕರಣದಲ್ಲಿ (Prajwal Revanna Pendrive Case ) ನಡೆಯುತ್ತಿರುವ ಎಸ್‍ಐಟಿ (SIT) ತನಿಖೆ ಬಗ್ಗೆ ಅನುಮಾನ ಬೇಡ. ತನಿಖೆ ಸರಿಯಾಗಿ ನಡೆಯುತ್ತಿದೆ ಎಂದು ಗೃಹ ಸಚಿವ ಪರಮೇಶ್ವರ್ (G.Parameshwar) ಹೇಳಿದ್ದಾರೆ.
ನಗರದಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಕ್ಕೆ ಒಂದು ಜವಾಬ್ದಾರಿ ಇದೆ. ಇಂತಹ ಘಟನೆಯನ್ನು ಹಗುರವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಈ ವಿಚಾರ ಕುಮಾರಸ್ವಾಮಿ (H.D Kumaraswamy) ಅವರಿಗೂ ಗೊತ್ತು. ಅವರು ಮುಖ್ಯಮಂತ್ರಿ ಆಗಿದ್ದವರು ಎಸ್‍ಐಟಿಯಂತಹ ಕಾನೂನಾತ್ಮಕ ಸಂಸ್ಥೆ ಮೇಲೆ ಅನುಮಾನ ಪಟ್ಟರೆ ಹೇಗೆ? ಅವರು ಇಂತಹ ಸಮಯದಲ್ಲಿ ಕೋಪ ಹಾಗೂ ಅಸಮಾಧಾನಗೊಳ್ಳುವುದು ಸಹಜ. ಪೆನ್‍ಡ್ರೈವ್ ಮೂಲದ ಬಗ್ಗೆ ಎಸ್‍ಐಟಿ ಗಮನಹರಿಸುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಹೆಚ್.ಡಿ ರೇವಣ್ಣ ಆಸ್ಪತ್ರೆಗೆ ದಾಖಲು- ವಿಕ್ಟೋರಿಯಾ ಸುತ್ತ ಬಿಗಿ ಭದ್ರತೆ
ದೇವರಾಜೇಗೌಡ ಅವರ ಅರೋಪಕ್ಕೆ ನಾವು ಏನು ಹೇಳಲು ಸಾಧ್ಯವಿಲ್ಲ. ಎಲ್ಲವನ್ನೂ ಎಸ್‍ಐಟಿಯವರು ಗಮನಿಸುತ್ತಾರೆ. ಡಿಕೆಶಿ ಹಾಗೂ ಸರ್ಕಾರದ ವಿರುದ್ಧ ಆರೋಪ ಏನೇ ಮಾಡಿದರು ಎಸ್‍ಐಟಿ ತನಿಖೆಯಲ್ಲಿ ಗೊತ್ತಾಗುತ್ತದೆ ಎಂದು ಅವರು ಹೇಳಿದ್ದಾರೆ.
ಈ ವೀಡಿಯೋಗಳು ಕಾಂಗ್ರೆಸ್ ಮೈತ್ರಿ ಅವಧಿಯದ್ದು ಎಂದು ಪ್ರಧಾನಿ ಹೇಳಿದ್ದಾರೆ. ನೋಡೋಣ ಅದು ಯಾವ ಅವಧಿಯಲ್ಲಿ ಆಗಿದ್ದು, ಒಮ್ಮೆ ತನಿಖೆ ಮುಗಿದ ಮೇಲೆ ಅದು ಬಹಿರಂಗವಾಗುತ್ತದೆ. ಯಾವುದನ್ನು ಮುಚ್ಚಿಡಲು ಸಾಧ್ಯವಿಲ್ಲ. ಇನ್ನೂ ಬ್ಲೂ ಕಾರ್ನರ್ ನೋಟಿಸ್ ಸಿಬಿಐ ಹೊರಡಿಸಿರಬಹುದು. ಈ ಬಗ್ಗೆ ನಮಗೆ ಅವರು ಆ ಮಾಹಿತಿ ತಿಳಿಸಲ್ಲ ಎಂದಿದ್ದಾರೆ. ಇದನ್ನೂ ಓದಿ: ಪೊಲೀಸರನ್ನೇ ಮುಂದಿಟ್ಟುಕೊಂಡು 25,000 ಪೆನ್‌ಡ್ರೈವ್ ಹಂಚಿದ್ದಾರೆ: ಹೆಚ್‌ಡಿಕೆ ಬಾಂಬ್