ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಸದ್ಗುರು (Sadhguru) ಕಾರ್ಯಕ್ರಮಕ್ಕೆ ಹೋಗಿರೋ ಬಗ್ಗೆ ಅನಗತ್ಯ ಚರ್ಚೆ ಬೇಡ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತಿಳಿಸಿದ್ದಾರೆ.
ಸದ್ಗುರು ಕಾರ್ಯಕ್ರಮದಲ್ಲಿ ಡಿಕೆಶಿ ಭಾಗಿ ಹಿನ್ನೆಲೆ ಅವರು ಬಿಜೆಪಿ ಸೇರುತ್ತಾರೆ ಎಂಬ ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಅದೆಲ್ಲಾ ಅನಾವಶ್ಯಕವಾದ ಚರ್ಚೆ. ಡಿಕೆ ಶಿವಕುಮಾರ್ ಅವರಿಗೆ ಆಹ್ವಾನ ಬಂದಿತ್ತು ಹೋಗಿದ್ದಾರೆ. ಏಕನಾಥ್ ಶಿಂಧೆ ಎನ್ನುತ್ತಾರೆ ಅವರ ಸಾಮರ್ಥ್ಯ ಅಷ್ಟೇನಾ. ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇದೆ. ಸ್ವತಂತ್ರವಾಗಿ ಯಾವತ್ತಾದ್ರೂ ಅಧಿಕಾರಕ್ಕೆ ಬಂದಿದ್ದಾರಾ. ಹೋದ ಸಲ 17 ಏಕನಾಥ್ ಶಿಂಧೆಗಳನ್ನು ಕರೆದುಕೊಂಡು ಹೋಗಿದ್ರಲ್ಲಾ. ಈ ಸಲ ಅದು ಸಾಧ್ಯವಿಲ್ಲ. ಒಂದು ಅರ್ಥ ಆಗ್ತಿದೆ, ಅವರಲ್ಲಿ ಧಮ್ಮಿಲ್ಲ, ಸಾಮರ್ಥ್ಯ ಇಲ್ಲ. ಬಿಜೆಪಿಯವರ ಬಗ್ಗೆ ನಾನ್ಯಾಕೆ ಕಾಳಜಿ ತೋರಿಸಲಿ, ನಾನ್ಯಾಕೆ ತಲೆ ಕೆಡಿಸಿಕೊಳ್ಳಲಿ. ಬಿಜೆಪಿಯವರು ಯಾರನ್ನಾದ್ರೂ ದ್ವೇಷಿಸಿಕೊಳ್ಳಲಿ. ಮೋದಿ, ಖರ್ಗೆ ಅಕ್ಕಪಕ್ಕ ಫೋಟೋ ಇರುತ್ತೆ. ಹಾಗಂತ ಮೋದಿ ಕಾಂಗ್ರೆಸ್ ಸೇರುತ್ತಾರೆ ಅನ್ನೋಕಾಗುತ್ತಾ ಎಂದು ತಿರುಗೇಟು ಕೊಟ್ಟರು. ಇದನ್ನೂ ಓದಿ: ಕ್ಷೇತ್ರ ಪುನರ್ ವಿಂಗಡಣೆ ವಿಚಾರ ಇನ್ನೂ ಚರ್ಚಾ ಹಂತದಲ್ಲಿದೆ: ಕುಮಾರಸ್ವಾಮಿ
Advertisement
Advertisement
ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂದು ಮಾಜಿ ಸಂಸದ ಸುರೇಶ್ ಇಂಗಿತ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲರಿಗೂ ಅವರ ಕುಟುಂಬದರು ಆಗಬೇಕು ಎಂದು ಇರುತ್ತೆ. ಯತೀಂದ್ರ ಅವರನ್ನು ಕೇಳಿದ್ರೆ ಅವರು ಹೇಳುತ್ತಾರೆ. ನಮ್ಮ ಕುಟುಂಬದವರನ್ನು ಕೇಳಿದ್ರೂ ಹೇಳುತ್ತಾರೆ. ಅದೆಲ್ಲಾ ಆಗುತ್ತಾ? ಹೈಕಮಾಂಡ್ ಅಂತಿಮವಾಗಿ ತೀರ್ಮಾನ ಮಾಡಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಡಿಕೆ ಶಿವಕುಮಾರ್ ಒಂದು ವಾರದಿಂದ ಭೂಮಿ ಮೇಲೆ ಇಲ್ಲದಂತೆ ಮಾತಾಡ್ತಿದ್ದಾರೆ: ಹೆಚ್‌ಡಿಕೆ
Advertisement